Advertisement

ಸಾಗರ: ಸೈದೂರು ಗ್ರಾಪಂ ಅಧ್ಯಕ್ಷ, ಯುವ ಮುಖಂಡ ಹೃದಯಾಘಾತದಿಂದ ಸಾವು

07:32 PM Feb 04, 2022 | Vishnudas Patil |

ಸಾಗರ: ತಾಲ್ಲೂಕಿನ ಸೈದೂರು ಗ್ರಾಮ ಪಂಚಾಯ್ತಿ ಅಧ್ಯಕ್ಷ ವಿನಯ್ (35) ಶುಕ್ರವಾರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮೃತರು ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

Advertisement

ಕಳೆದ ಬಾರಿ ನಡೆದ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ವಿನಯ್ ಅವರು ಸೈದೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ತಡಗಳಲೆ ವಾರ್ಡ್ ನಂ. ೧ಕ್ಕೆ ಬಿಸಿಎಂ ‘ಬಿ’ ಮೀಸಲಾತಿಯಡಿ ಕಣಕ್ಕೆ ಇಳಿದು ಜಯಗಳಿಸಿದ್ದರು. ನಂತರ ಅಧ್ಯಕ್ಷರಾಗಿ ಉತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಗ್ರಾಮ ಪಂಚಾಯ್ತಿ ಅಭಿವೃದ್ಧಿಗೆ ವಿನಯ್ ಅವರು ತಮ್ಮದೇ ದೃಷ್ಟಿಕೋನ ಇರಿಸಿಕೊಂಡು ಎಲ್ಲ ಸದಸ್ಯರು, ಗ್ರಾಮಸ್ಥರ ನೆರವಿನಿಂದ ಶ್ರಮಿಸುತ್ತಿದ್ದರು.

ಶುಕ್ರವಾರ ಬೆಳಿಗ್ಗೆ ವಿನಯ್ ಅವರು ಮನೆಯಲ್ಲಿ ಅಡಕೆ ತುಂಬುತ್ತಿದ್ದಾಗ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಸ್ಥಳೀಯ ವೈದ್ಯರು ಪರೀಕ್ಷೆ ನಡೆಸಿ ಪ್ರಾಥಮಿಕ ಚಿಕಿತ್ಸೆ ನೀಡಿ, ಸಾಗರ ಉಪವಿಭಾಗೀಯ ಆಸ್ಪತ್ರೆಗೆ ಕರೆದೊಯ್ಯುವಂತೆ ತಿಳಿಸಿದ್ದರು. ವಿನಯ್ ಅವರನ್ನು ಸಾಗರ ಆಸ್ಪತ್ರೆಗೆ ಕರೆ ತರುತ್ತಿದ್ದಾಗ ಮಾರ್ಗಮಧ್ಯದಲ್ಲಿ ಮೃತಪಟ್ಟಿದ್ದಾರೆ. ವಿನಯ್ ನಿಧನಕ್ಕೆ ಸೈದೂರು ಗ್ರಾಮ ಪಂಚಾಯ್ತಿ ಆಡಳಿತ ಸಂತಾಪ ಸೂಚಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next