Advertisement

ಸೈದಾಪುರ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ಕಟ್ಟಡಕ್ಕಿಲ್ಲ ಉದ್ಘಾಟನೆ ಭಾಗ್ಯ

04:41 PM Dec 02, 2019 | |

ಸೈದಾಪುರ: ಪಟ್ಟಣದಲ್ಲಿ ನಿರ್ಮಾಣವಾಗಿರುವ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ಕಟ್ಟಡಕ್ಕೆ ಇನ್ನು ಉದ್ಘಾಟನೆ ಭಾಗ್ಯ ಸಿಕ್ಕಿಲ್ಲ. ಸೈದಾಪುರ ಪಟ್ಟಣಕ್ಕೆ 2017ರಲ್ಲಿ ಪರಿಶಿಷ್ಟ ಪಂಗಡದ ನೂತನ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ಮಂಜೂರು ಮಾಡಲಾಗಿತ್ತು.

Advertisement

ಶಾಲೆ ಕಟ್ಟಡ ನಿರ್ಮಿಸಲು ಪಕ್ಕದ ರಾಚನಹಳ್ಳಿ ಸೀಮೆಯಲ್ಲಿ ನೀಡಲಾದ ನಿವೇಶನದಲ್ಲಿ ಸುಮಾರು ಹದಿನೇಳು ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಿಸಲಾಗಿದೆ. ಹೈದ್ರಾಬಾದ್‌ ಮೂಲದ ಕೆಎಂವಿ ಪ್ರಾಜೆಕ್ಟ್ ಗೆ 18 ತಿಂಗಳ ಗಡುವಿನೊಂದಿಗೆ ಗುತ್ತಿಗೆ ನೀಡಲಾಗಿತ್ತು. ನಿಗದಿಯಂತೆ ಕಟ್ಟಡ ನಿರ್ಮಾಣ ಕಾರ್ಯ ಸಹ ಮುಗಿದು ನಾಲ್ಕು ತಿಂಗಳು ಕಳೆದಿವೆ. ಆದರೂ ಉದ್ಘಾಟನೆ ಭಾಗ್ಯ ಕೂಡಿ ಬಂದಿಲ್ಲ. ಕಾರಣ ಮಕ್ಕಳು ಬಾಡಿಗೆ ಕಟ್ಟಡದಲ್ಲಿ ಅಕ್ಷರಭ್ಯಾಸ ಮಾಡುವುದು ಅನಿವಾರ್ಯವಾಗಿದೆ.

ಸೈದಾಪುರ ಬಾಡಿಗೆ ಕಟ್ಟಡದಲ್ಲಿ ಕಳೆದ ಎರಡು ವರ್ಷಗಳಿಂದ ನಡೆಸಲಾಗುತ್ತಿರುವ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ಆರನೇ ತರಗತಿಗೆ 46, ಏಳು 50, ಎಂಟು 44 ಸೇರಿ ಒಟ್ಟು 140 ವಿದ್ಯಾರ್ಥಿಗಳು ವ್ಯಾಸಾಂಗ ಮಾಡುತ್ತಿದ್ದಾರೆ. ಇಲ್ಲಿ ಮಂಜೂರಾದ ಒಟ್ಟು 8 ಜನರ ಪೈಕಿ ಸರಕಾರದಿಂದ ನೇಮಕಾತಿ ಪಡೆದ ಇಬ್ಬರು, ಐವರು ಅತಿಥಿ ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ವಾರ್ಡನ್‌ ಮತ್ತು ಮುಖ್ಯೋಪಾಧ್ಯಯರ ಹುದ್ದೆ ಖಾಲಿ ಇವೆ. ರಾತ್ರಿ ವಿದ್ಯುತ್‌ ಕೈ ಕೊಟ್ಟರೆ ಮಕ್ಕಳು ಕತ್ತಲಲ್ಲಿ ಕಾಲ ಕಳೆಯುವಂತಾಗಿದೆ. ಮಕ್ಕಳ ಅನುಕೂಲಕ್ಕಾಗಿ ವಿವಿಧ ಸಲಕರಣೆಗಳು ಬಂದರೂ ಸಹ ಸ್ಥಳದ ಸಮಸ್ಯೆಯಿಂದ ಅವುಗಳನ್ನು ಬಳಸಲು ಸಾಧ್ಯವಾಗುತ್ತಿಲ್ಲ.

ಹೀಗಾಗಿ ವಿದ್ಯಾರ್ಥಿ ಮತ್ತು ಶಿಕ್ಷಕರು ಇಕ್ಕಟ್ಟಾದ ಬಾಡಿಗೆ ಕಟ್ಟಡದಲ್ಲಿ ಅಕ್ಷರಾಭ್ಯಾಸಕ್ಕೆ ನಿತ್ಯ ಅಣಿಯಾಗುತ್ತಿದ್ದಾರೆ. ಬಾಡಿಗೆ ಕಟ್ಟಡದ ಮೊದಲ ಮಹಡಿಯೊಂದರಲ್ಲಿ ಮಾಸಿಕ ರೂ. 54,900 ರೂ. ಒಪ್ಪಂದದಂತೆ ಕಳೆದ ಎರಡು ವರ್ಷಗಳಿಂದ ತರಗತಿ ನಡೆಸಲಾಗುತ್ತಿದೆ.

ವಸತಿ ಶಾಲೆಗೆ ದೈಹಿಕ ಶಿಕ್ಷಕರನ್ನು ನೇಮಕಾತಿ ಮಾಡಲಾಗಿದೆಯಾದರೂ ಮಕ್ಕಳಿಗೆ ಆಟಕ್ಕಾಗಿ ಮೈದಾನ ಇಲ್ಲ. ಹಾಗಾಗಿ ಕ್ರೀಡೆಯಲ್ಲಿ ಹಿನ್ನೆಡೆ ಸಾ ಧಿಸುವಂತಾಗಿದೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ತಕ್ಷಣ ಎಚ್ಚೆತ್ತುಕೊಂಡು ಮಕ್ಕಳ ಅನುಕೂಲಕ್ಕಾಗಿ ನೂತನ ಶಾಲಾ ಕಟ್ಟಡ ಉದ್ಘಾಟನೆ ಮಾಡಬೇಕು ಎಂಬುದು ಪೋಷಕರ ಒತ್ತಾಯವಾಗಿದೆ.

Advertisement

ಸೈದಾಪುರದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲಾ ನೂತನ ಕಟ್ಟಡದ ಬಗ್ಗೆ ಸಂಬಂದಪಟ್ಟ ಇಲಾಖೆಯಿಂದ ಮಾಹಿತಿ ಪಡೆದು ಅತಿ ಶೀಘ್ರದಲ್ಲಿ ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುತ್ತೆವೆ.
ಎಂ. ಕೂರ್ಮಾರಾವ್‌
ಜಿಲ್ಲಾಧಿಕಾರಿ

ನಮ್ಮ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉಪಯೋಗವಾಗಲಿ ಎಂದು ಸರ್ಕಾರ ಕೋಟಿಗಟ್ಟಲೆ ಹಣ ಖರ್ಚು ಮಾಡಿ ನೂತನ ಕಟ್ಟಡ ನಿರ್ಮಿಸಿದೆ. ಆದರೆ ಸ್ಥಳೀಯ ಅಧಿಕಾರಿಗಳು ಮತ್ತು ಉಸ್ತವಾರಿ ಸಚಿವರ ಬೇಜವಾಬ್ದಾರಿಯಿಂದ ಉದ್ಘಾಟನೆ ವಿಳಂಬವಾಗಿದೆ.
ಶಶಿಕಲಾ ಬಿ. ಕ್ಯಾತ್ನಾಳ

Advertisement

Udayavani is now on Telegram. Click here to join our channel and stay updated with the latest news.

Next