Advertisement

ತಂಪು ಪಾನೀಯಗಳಿಗೆ ಹೆಚ್ಚಿದ ಬೇಡಿಕೆ

12:04 PM May 08, 2019 | Naveen |

ಸೈದಾಪುರ: ಬೇಸಿಗೆ ಬಿಸಿಲಿನ ಝಳ ಏರಿಕೆಯಾದಂತೆ ಪಟ್ಟಣದಲ್ಲಿ ತಂಪು ಪಾನಿ ಅಂಗಡಿಗಳ ವ್ಯಾಪಾರ ಭರ್ಜರಿಯಾಗಿ ನಡೆದಿದೆ.

Advertisement

ಪಟ್ಟಣ ಸೇರಿದಂತೆ ಇನ್ನಿತರ ಪ್ರದೇಶಗಳಲ್ಲಿ ಬಿಸಿಲಿನ ತಾಪ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು. ಜನತೆ ತಂಪು ಪಾನಿಯಳಾದ, ಜ್ಯೂಸ್‌, ಎಳೆ ನೀರು, ಕಬ್ಬಿನ ಹಾಲಿನ ಅಂಗಡಿಗಳತ್ತ ಮುಖ ಮಾಡುತ್ತಿರುವುದು ಸಾಮಾನ್ಯವಾಗಿದೆ. ಇದರಿಂದಾಗಿ ದೇಹ ತಣಿಸುವ ತಂಪು ಪಾನಿಯಗಳ ಬೇಡಿಕೆ ಹೆಚ್ಚಾಗಿದೆ ಎನ್ನುತ್ತಾರೆ ವ್ಯಾಪಾರಿಗಳು.

ಇದಕ್ಕೆ ಪೂರಕವೆಂಬಂತೆ ಗ್ರಾಹಕರನ್ನು ಆಕರ್ಷಿಸುತ್ತವೆ. ಬಿಸಿಲಿನ ತಾಪ 42 ಡಿಗ್ರಿ ಸೆಲ್ಸಿಯಸ್‌ ಗಡಿ ತಲುಪಿದೆ. ಹೆಚ್ಚುತ್ತಿರುವ ಬಿಸಿಲಿನ ತಾಪದಿಂದಾಗಿ ಜನ ಕಂಗಾಲಾಗಿದ್ದು, ಊಟಕ್ಕಿಂತಲೂ ನೀರು ಹಾಗೂ ನಾನಾ ರೀತಿಯ ಹಣ್ಣಿನ ರಸಗಳ ಸೇವನೆಗೆ ಮುಂದಾಗಿದ್ದಾರೆ.

ಕಬ್ಬಿನ ಹಾಲಿಗೂ ಬೇಡಿಕೆ
ದಿನದಿಂದ ದಿನಕ್ಕೆ ಬಿಸಿಲಿನ ಧಗೆ ಹೆಚ್ಚುತ್ತಿದ್ದಂತೆ ಇತ್ತ ಹಣ್ಣಿನ ರಸಗಳ ಜತೆಗೆ ಎಳೆ ನೀರು ಹಾಗೂ ಕಬ್ಬಿನ‌ ಹಾಲು ವ್ಯಾಪಾರ ಜೋರು ನಡೆದಿದೆ. ಸೈದಾಪುರ ಪಟ್ಟಣದಲ್ಲಿ ಒಂದು ಕಬ್ಬಿನ ಹಾಲು ಲೋಟಕ್ಕೆ 10 ರೂ. ಹಾಗೂ ಒಂದು ಎಳೆ ನೀರಿಗೆ 25 ರೂ. ವರೆಗೆ ಮಾರಾಟ ಮಾಡಲಾಗುತ್ತಿದ್ದು, ವ್ಯಾಪಾರವೂ ಉತ್ತಮವಾಗಿ ಸಾಗಿದೆ ಎಂದು ವ್ಯಾಪಾರಸ್ಥರು ತಿಳಿಸಿದ್ದಾರೆ.

ನಾನು ಕಳೆದ ಐದಾರು ವರ್ಷಗಳಿಂದ ಜ್ಯೂಸ್‌ ಅಂಗಡಿ ಮಾಡಿಕೊಂಡಿದ್ದು, ಎಲ್ಲಾ ತರಹದ ಜ್ಯೂಸ್‌ ತಯಾರಿಸುತ್ತೇನೆ. ಜೊತೆಗೆ ಐಸ್‌ಕ್ರೀಮ್‌ ಸೇರಿದಂತೆ ಇತರೆ ತಂಪು ಪಾನೀಯಗಳನ್ನು ಸಹ ಮಾರಾಟ ಮಾಡುತ್ತೇನೆ. ಇದರಿಂದಾಗಿ ಇಲ್ಲಿಯವರೆಗೆ ಉತ್ತಮ ಆದಾಯ ಬಂದಿದೆ.
•ಮಹಿಪಾಲರೆಡ್ಡಿ, ಜ್ಯೂಸ್‌ ಅಂಗಡಿ ಮಾಲೀಕ
Advertisement

Udayavani is now on Telegram. Click here to join our channel and stay updated with the latest news.

Next