Advertisement

ಬಾಲಛೇಡದಲ್ಲಿ ನೈರ್ಮಲ್ಯ ಮರೀಚಿಕ

05:46 PM Nov 22, 2019 | Naveen |

„ಭೀಮಣ್ಣ ಬಿ. ವಡವಟ್‌
ಸೈದಾಪುರ:
ಸೈದಾಪುರ ಗ್ರಾಪಂ ಅಧ್ಯಕ್ಷೆ ರಾಮಲಿಂಗಮ್ಮ ಅವರ ತವರೂರು ಬಾಲಛೇಡ ಗ್ರಾಮದಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ. ಸದಾ ಕೊಳಕು ತುಂಬಿದ ಚರಂಡಿಗಳ ಅವ್ಯವಸ್ಥೆಯಿಂದ ನೀರು ರಸ್ತೆಯಲ್ಲಿ ಸಂಗ್ರಹವಾಗಿ ಇಲ್ಲಿನ ನಿವಾಸಿಗಳು ಸಂಚರಿಸಲು ಹಿಂದೇಟು ಹಾಕುತ್ತಿದ್ದಾರೆ.

Advertisement

ಗ್ರಾಮದಲ್ಲಿ ಅವೈಜ್ಞಾನಿಕ ಚರಂಡಿ ಅವ್ಯವಸ್ಥೆಯಿಂದ ನೈರ್ಮಲ್ಯ ಸಮಸ್ಯೆ ತಾಂಡವಾಡುತ್ತಿದೆ. ನಿಯಮಿತವಾಗಿ ಚರಂಡಿ ಹೂಳೆತ್ತದ ಗ್ರಾಪಂ ನಿರ್ಲಕ್ಷ್ಯ
ವಹಿಸಿದೆ. ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ತಗ್ಗು ಪ್ರದೇಶಗಳಲ್ಲಿ ಕೊಳಕು ನೀರು ಸಂಗ್ರಹವಾಗುತ್ತಿದೆ. ಕೊಳಕು ನೀರು ನಿಲ್ಲುವ ರಸ್ತೆಯಲ್ಲಿ ತಿರುಗಾಡುವ ಜನರು, ವಾಹನ ಸವಾರರು ಹಿಂದೇಟು ಹಾಕುತ್ತಿದ್ದಾರೆ. ಗ್ರಾಮದ ಜಾತ್ರೆ ಮುಗಿದ ನಂತರ ಕೆಲ ಪ್ರದೇಶಗಳಲ್ಲಿ ಸ್ವಚ್ಚ ಮಾಡಲಾಗಿದೆ. ಆದರೆ ಇನ್ನು ಅನೇಕ ಕಡೆಗಳಲ್ಲಿ ರಸ್ತೆ ಮೇಲೆಯೇ ನೀರು ಹರಿದು ಹೋಗುತ್ತಿದೆ.

ರಾತ್ರಿ ಸಮಯದಲ್ಲಿ ತಿರುಗಾಡಲು ವಯಸ್ಸಾದವರು, ಚಿಕ್ಕ ಮಕ್ಕಳು ಪ್ರಯಾಸ ಪಡುವಂತಾಗಿದೆ. ಅಲ್ಲದೆ ಸೊಳ್ಳೆ ಕಾಟ ತುಂಬಾ ಹೆಚ್ಚಾಗಿದೆ. ಇದರಿಂದ ರಾತ್ರಿ ನೆಮ್ಮದಿಯಿಂದ ನಿದ್ದೆ ಮಾಡಲು ಆಗುತ್ತಿಲ್ಲ. ಸಮಸ್ಯೆ ಕುರಿತು ಹಲವು ಬಾರಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ಸಲ್ಲಿಸಲು ಪ್ರಯತ್ನಿಸಿದಾಗ ಸಂರ್ಪಕಕ್ಕೆ ಸಿಗುವುದಿಲ್ಲ ಎಂಬುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next