Advertisement
ಗೈರು ಹಾಜರಾದರೆ ಕ್ರಮಮೇ 4 ರಂದು ಡಿಎಂಇಆರ್ ನಗರದ 25 ಸಾವಿರ ನೋಂದಾಯಿತ ವೈದ್ಯರನ್ನು 15 ದಿನಗಳ ಕಡ್ಡಾಯ ಕೋವಿಡ್-19 ಕರ್ತವ್ಯಕ್ಕಾಗಿ ವರದಿ ಮಾಡುವಂತೆ ಸುತ್ತೋಲೆ ಹೊರಡಿಸಿತ್ತು. ಒಂದು ವೇಳೆ ಗೈರು ಹಾಜರಾದರೆ ವೈದ್ಯಕೀಯ ಕೌನ್ಸಿಲ್ ಆಫ್ ಇಂಡಿಯಾ ಕೋಡ್ ಉಲ್ಲಂಘನೆ ಎಂದು ಪರಿಗಣಿಸಲಾಗುತ್ತದೆ. ಇದು ವೈದ್ಯರ ಪರವಾನಗಿಯನ್ನು ಅಮಾನತುಗೊಳಿಸಬಹುದು ಅಥವಾ ರದ್ದುಗೊಳಿಸಬಹುದು ಎಂದು ಆದೇಶಿಸಲಾಗಿತ್ತು. ಸುತ್ತೋಲೆಗೆ ಪ್ರತಿಕ್ರಿಯಿಸಿದ 20, 000 ನೋಂದಾಯಿತ ವೈದ್ಯರಲ್ಲಿ, ಡಿಎಂಇಆರ್ 4,246 ಜನರನ್ನು ಆಯ್ಕೆ ಮಾಡಿ ಈ ಪಟ್ಟಿಯ ನ್ನು ತಪಾಸಣೆಗಾಗಿ ಬಿಎಂಸಿಗೆ ಕಳುಹಿಸಿದೆ. ಕೋವಿಡ್ ಕರ್ತವ್ಯಕ್ಕಾಗಿ ಡಿಎಂಇಆರ್ 55 ವರ್ಷಕ್ಕಿಂತ ಮೇಲ್ಪಟ್ಟ ವೈದ್ಯರನ್ನು ಅನರ್ಹಗೊಳಿ ಸುವುದರಿಂದ ಶಾರ್ಟ್‌ಲಿಸ್ಟ್ ಮಾಡಿದ ವೈದ್ಯರು 25ರಿಂದ 45 ವರ್ಷ ವಯಸ್ಸಿನವರಾಗಿದ್ದರು.
ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರ ನಡೆಸುವ ಆಸ್ಪತ್ರೆಗಳಲ್ಲಿ ಕೆಲಸ ಮಾಡುವವರಿಗೆ ವಿನಾಯಿತಿ ನೀಡಲಾಗಿತ್ತು. ಈಗಾಗಲೇ ಆಸ್ಪತ್ರೆಗಳಲ್ಲಿ ಅಭ್ಯಾಸ ಮಾಡುತ್ತಿದ್ದ ವೈದ್ಯರಿಗೂ ವಿನಾಯಿತಿ ನೀಡಲಾಗಿದೆ. ಶಾರ್ಟ್‌ಲಿಸ್ಟ್ ಮಾಡಿದ ವೈದ್ಯರನ್ನು ಪರೀಕ್ಷಿಸಿದ ಅನಂತರ ಬಿಎಂಸಿ 700 ವೈದ್ಯರು ಮಾತ್ರ ಲಭ್ಯವಿರುವುದು ಎಂದು ತಿಳಿಸಿದೆ. ಹೆಚ್ಚಿನ ವೈದ್ಯರು ಭಾರತದ ಹೊರಗಿದ್ದಾರೆ. ಮುಂಬಯಿಯಲ್ಲಿ ನಾವು ಅವರನ್ನು ಕೋವಿಡ್ ಡ್ನೂಟಿಗೆ ನಿಯೋಜಿಸುವುದು ಹೇಗೆ? ಅಲ್ಲದೆ ಅನೇಕ ವೈದ್ಯರು ಈಗಾಗಲೇ ಖಾಸಗಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರನ್ನು ಅಲ್ಲೇ ಕೋವಿಡ್ ಕರ್ತವ್ಯಕ್ಕೆ ನಿಯೋಜಿಸಿದ್ದೇವೆ. ಕೋವಿಡ್ ಅಲ್ಲದ ವೈದ್ಯರ ಅವಶ್ಯಕತೆಯೂ ನಮಗಿದೆ. ಚಿಕಿತ್ಸಾಲಯಗಳನ್ನು ನಡೆಸುವ ಸಾಮಾನ್ಯ ವೈದ್ಯರು ನಮಗೆ ಬೇಕಾಗಿದ್ದಾರೆ ಎಂದು ಬಿಎಂಸಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಖಾಸಗಿ ಚಿಕಿತ್ಸಾಲಯಗಳ ವೈದ್ಯರ ಅಗತ್ಯತೆ
ಖಾಸಗಿ ಚಿಕಿತ್ಸಾಲಯಗಳನ್ನು ನಡೆಸುತ್ತಿರುವ ವೈದ್ಯರ ಸಂಖ್ಯೆಯ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲದಿದ್ದರೂ, ಮಹಾರಾಷ್ಟ್ರ ವೈದ್ಯಕೀಯ ಮಂಡಳಿ ಅಂದಾಜಿನ ಪ್ರಕಾರ ಮುಂಬಯಿಯಲ್ಲಿ ಸುಮಾರು 5,000 ವೈದ್ಯರು ಲಭ್ಯವಿದ್ದಾರೆ, ಅವರು 55 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದು, ನೋಟಿಸ್ ಮುಖ್ಯವಾಗಿ ಚಿಕಿತ್ಸಾಲಯಗಳನ್ನು ಹೊಂದಿರುವ ವೈದ್ಯರನ್ನು ಗುರಿಯಾಗಿರಿಸಿಕೊಂಡಿದೆ. ಅವರು ನಾಗರಿಕ ಆಸ್ಪತ್ರೆಗಳಲ್ಲಿ ಮತ್ತು ಅವರ ಚಿಕಿತ್ಸಾಲಯಗಳಲ್ಲಿ ಏಕಕಾಲದಲ್ಲಿ ಕೆಲಸ ಮಾಡಬಹುದು ಎಂದು ಎಂಎಂಸಿಯ ಅಧ್ಯಕ್ಷ ಡಾ| ಶಿವಕುಮಾರ್ ಉತ್ತೂರ್ ಹೇಳಿದ್ದಾರೆ, ವಿಶೇಷವೆಂದರೆ ನೋಂದಾಯಿತ ಸುಮಾರು ಶೇ. 5ರಷ್ಟು ಜನರು ವಿದೇಶದಲ್ಲಿ ವಾಸಿಸುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದರು. ಸಕ್ರಿಯ ಕೋವಿಡ್ -19 ಪ್ರಕರಣಗಳ ಸಂಖ್ಯೆ ಏರುತ್ತಿರುವುದರಿಂದ, ಹೆಚ್ಚಿನ ವೈದ್ಯರು ತುರ್ತಾಗಿ ಅಗತ್ಯವಿದೆ ಎಂದು ಬಿಎಂಸಿ ಹೇಳಿದೆ. ವೈದ್ಯರ ಕೊರತೆಯನ್ನು ಪೂರೈಸಲು ನಮಗೆ ಶಾಶ್ವತ ಪರಿಹಾರ ಬೇಕು. ಪ್ರತಿ 15 ದಿನಗಳ ಅನಂತರ, ನಾವು ವೈದ್ಯರನ್ನು ಸ್ಕ್ಯಾನ್ ಮತ್ತು ಪರೀಕ್ಷೆಗೊಳಪಡಿಸುವ ಪ್ರಕ್ರಿಯೆಯ ಮೂಲಕ ಸಾಗುತ್ತಿ ದ್ದೇವೆ ಎಂದು ಬಿಎಂಸಿಯ ಆರೋಗ್ಯ ವಿಭಾಗದ ಅಧಿಕಾರಿಯೊಬ್ಬರು ಹೇಳಿದರು.