Advertisement

ರಾಹುಲ್‌ ಟ್ವೀಟ್‌ಗೆ ಶಿರ್ಡಿ ಟ್ರಸ್ಟ್‌ ಖಂಡನೆ,ಕ್ಷಮೆಯಾಚನೆಗೆ ಆಗ್ರಹ

12:14 PM Apr 12, 2018 | Team Udayavani |

ಹೊಸದಿಲ್ಲಿ : ಕೇಂದ್ರ ಸಚಿವ ಮತ್ತು ಬಿಜೆಪಿ ನಾಯಕ ಪಿಯೂಶ್‌ ಚಾವ್ಲಾ ಅವರನ್ನು ಟೀಕಿಸುವ ಭರದಲ್ಲಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು “ಶಿರ್ಡಿ ಪವಾಡಗಳಿಗೆ ಮಿತಿಯೇ ಇಲ್ಲ” ಎಂಬುದಾಗಿ ಹೇಳಿರುವುದನ್ನು ಶ್ರೀ ಸಾಯಿಬಾಬಾ ಸಂಸ್ಥಾನ ಟ್ರಸ್ಟ್‌ ಶಿರ್ಡಿ ತೀವ್ರವಾಗಿ ಆಕ್ಷೇಪಿಸಿದೆ.

Advertisement

“ರಾಜಕೀಯ ಆರೋಪ – ಪ್ರತ್ಯಾರೋಪಗಳಿಗಾಗಿ ಶಿರ್ಡಿ ಹೆಸರನ್ನು ಎಳೆದು ತರುವ ಮೂಲಕ ನೀವು ದೇಶ-ವಿದೇಶದಲ್ಲಿನ ಶಿರ್ಡಿ ಸಾಯಿಬಾಬಾ ಭಕ್ತರ ಮನಸ್ಸಿಗೆ ನೋವುಂಟುಮಾಡಿದ್ದೀರಿ; ನಾವಿದನ್ನು ಖಂಡಿಸುತ್ತೇವೆ; ಆದುದರಿಂದ ಸಾಯಿಬಾಬಾ ಭಕ್ತರನ್ನು ಅವಮಾನಿಸಿರುವುದಕ್ಕಾಗಿ ನೀವು  ಕ್ಷಮೆ ಯಾಚಿಸಬೇಕು ಎಂದು ಸಮಸ್ತ ಭಕ್ತಾಭಿಮಾನಗಳ ಪರವಾಗಿ ನಾನು ನಿಮ್ಮಲ್ಲಿ ಕೇಳಿಕೊಳ್ಳುತ್ತೇನೆ”  ಎಂದು ಶ್ರೀ ಸಾಯಿಬಾಬಾ ಸಂಸ್ಥಾನ ಟ್ರಸ್ಟ್‌ ಶಿರ್ಡಿ ಇದರ ಅಧ್ಯಕ್ಷರಾಗಿರುವ ಡಾ. ಸುರೇಶ್‌ ಹವಾರೆ ಟ್ವೀಟ್‌ ಮಾಡಿದ್ದಾರೆ.

ಆದರೆ ಕಾಂಗ್ರೆಸ್‌ ವಕ್ತಾರ ರಣದೀಪ್‌ ಸಿಂಗ್‌ ಸುರ್‌ಜೇವಾಲಾ ಅವರು ತಮ್ಮ ಪಕ್ಷದ ಅಧ್ಯಕ್ಷರನ್ನು ಸಮರ್ಥಿಸಿಕೊಂಡು, ಗೋಯಲ್‌ ಮತ್ತು ಅವರ ಕಂಪೆನಿ ಪವಿತ್ರ ಶಿರ್ಡಿ ಹೆಸರನ್ನು ದುರುಪಯೋಗಿಸಿಕೊಂಡು ಸಾರ್ವಜನಿಕರ ಹಣವನ್ನು ಕೊಳ್ಳೆ ಹೊಡೆದಿರುವುದರಿಂದ ಶಿರ್ಡಿ ಟ್ರಸ್ಟ್‌ನವು ಸೆಬಿಗೆ ಮತ್ತು ಪ್ರಧಾನಿ ನರೇಂದ್ರ ಮೋದಿಗೆ ದೂರು ಕೊಟ್ಟು ಯಾವುದೇ ಖಾಸಗಿ ವ್ಯಕ್ತಿಗಳು ಅಥವಾ ಸಾರ್ವಜನಿಕ ಕಂಪೆನಿ ಶಿರ್ಡಿ ಹೆಸರು ಬಳಸುವುದನ್ನು ನಿಷೇಧಿಸುವಂತೆ ಆಗ್ರಹಿಸಬೇಕು’ ಎಂದು ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next