ಶ್ರೆಯಾಂಕರಹಿತ ಆಟಗಾರ ಪ್ರಣೀತ್ 21-17, 21-13 ಗೇಮ್‌ಗಳಿಂದ ಗೆದ್ದು ಬಂದರು. ಕೇವಲ 42 ನಿಮಿಷಗಳಲ್ಲಿ ನಿಶಿಮೊಟೊ ಅವರನ್ನು ಉರುಳಿಸಿ ಮುನ್ನಡೆದರು. ದ್ವಿತೀಯ ಸುತ್ತಿನಲ್ಲಿ ಅವರು ಮತ್ತೆ ಜಪಾನಿನ ಎದುರಾಳಿ ಕಂಟ ಸುನೆಯಾಮ ಅವರನ್ನು ಎದುರಿಸಲಿದ್ದಾರೆ.
Advertisement
ಇಂದು ಸಿಂಧು ಆಟಭಾರತೀಯ ಶಟ್ಲರ್‌ಗಳಾದ ಪಿ.ವಿ. ಸಿಂಧು ಮತ್ತು ಕಿದಂಬಿ ಶ್ರೀಕಾಂತ್ ಬುಧವಾರ ತಮ್ಮ ಅಭಿಯಾನ ಆರಂಭಿಸಲಿದ್ದಾರೆ. ಇಂಡೋನೇಶ್ಯ ಓಪನ್‌ನಲ್ಲಿ ಫೈನಲ್‌ತನಕ ಏರಿದ್ದ ಸಿಂಧು ಮೊದಲ ಸುತ್ತಿನಲ್ಲಿ ಚೀನದ ಯುಯಿ ಹಾನ್ ಅವರನ್ನು ಎದುರಿಸಲಿದ್ದಾರೆ. ಇದೇ ವೇಳೆ ಶ್ರೀಕಾಂತ್ ತನ್ನ ದೇಶದವರೇ ಆದ ಎಚ್. ಎಸ್. ಪ್ರಣಯ್ ಅವರನ್ನು ಎದುರಿಸಲಿದ್ದಾರೆ.
ಮಿಕ್ಸೆಡ್ ಡಬಲ್ಸ್‌ನಲ್ಲಿ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಮತ್ತು ಅಶ್ವಿನಿ ಪೊನ್ನಪ್ಪ ಅವರು ಗೆಲುವಿನೊಂದಿಗೆ ತಮ್ಮ ಅಭಿಯಾನ ಆರಂಭಿಸಿದ್ದಾರೆ. ಅವರಿಬ್ಬರು ಮೊದಲ ಸುತ್ತಿನಲ್ಲಿ ಜರ್ಮನಿಯ ಮಾರ್ವಿನ್ ಸೈಡೆಲ್ ಮತ್ತು ಲಿಂಡಾ ಎಫ್ಲೆರ್ ಅವರನ್ನು 21-14, 21-19 ಗೇಮ್‌ಗಳಿಂದ ಉರುಳಿಸಿದರು.
ಆದರೆ ಪುರುಷರ ಡಬಲ್ಸ್‌ನಲ್ಲಿ ಭಾರತೀಯರು ನಿರಾಶೆ ಅನುಭವಿಸಿದರು. ಮನು ಅತ್ರಿ ಮತ್ತು ಸುಮೀತ್ ಬಿ. ರೆಡ್ಡಿ ಅವರು ಮಲೇಶ್ಯದ ಗೋಹ್ ಝಿ ಮತ್ತು ನುರ್ ಇಝುದಿನ್ ಅವರಿಗೆ 12-21, 16-21 ನೇರ ಗೇಮ್‌ಗಳಿಂದ ಶರಣಾಗಿದ್ದಾರೆ.