Advertisement

ಸಾಯಿ ಪರಿವಾರ್‌ ನಾಗೇಶ್‌ ಶೆಟ್ಟಿಗೆ ಪುಣೆ ಮಹಾನಗರ ಪಾಲಿಕೆಯ ಪುರಸ್ಕಾರ

02:46 PM Aug 26, 2018 | Team Udayavani |

ಪುಣೆ: ಪುಣೆ ಸಾಯಿ ಪರಿವಾರ್‌ ನಾಗೇಶ್‌ ಶೆಟ್ಟಿಯವರಿಗೆ ವಿವಿಧ ಸಾಮಾಜಿಕ ಸೇವೆಯನ್ನು ಪರಿಗಣಿಸಿ ಆ. 15 ರಂದು  72 ನೇ ಸ್ವಾತಂತ್ರೊÂàತ್ಸವದಂದು ಪುಣೆ ಮಹಾ ನಗರಪಾಲಿಕೆಯ ವತಿಯಿಂದ ಸಮ್ಮಾನಿಸಲಾಯಿತು.

Advertisement

ಕ್ರೀಡೆ, ಶೈಕ್ಷಣಿಕ, ವೈದ್ಯಕೀಯ, ನೃತ್ಯ, ಉದ್ಯಮ, ಸಾಹಿತ್ಯ, ಕಲೆ ಹಾಗೂ ಸಂಗೀತ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ಪುಣೆಯಲ್ಲಿನ ಆಯ್ದ ನಾಗರಿಕರನ್ನು ಗುರುತಿಸಿ ಪ್ರತೀವರ್ಷ ಗಣರಾಜ್ಯೋತ್ಸವ ಹಾಗೂ ಸ್ವಾತಂತ್ರೊéàತ್ಸವದಂದು  ಮಹಾನಗರಪಾಲಿಕೆ ಪುರಸ್ಕಾರವನ್ನು ನೀಡುತ್ತಾ ಬಂದಿದೆ. 

ಆ. 15 ರಂದು  ರಂದು ಶಿವಾಜಿ ನಗರದಲ್ಲಿರುವ ಪುಣೆ ಮಹಾ ನಗರಪಾಲಿಕೆಯ  ಶ್ರೀ ಛತ್ರಪತಿ ಮಹಾರಾಜ್‌ ಸಭಾಗೃಹ, 
ಮನಪಾ ಭವನ ಇಲ್ಲಿ ನಡೆದ ಸಮಾರಂಭದಲ್ಲಿ ಪುಣೆಯ ಮೇಯರ್‌  ಮುಕ್ತಾ ತಿಲಕ್‌ ಅವರು ಸಮ್ಮಾನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next