Advertisement

ಒಲಿಂಪಿಕ್ಸ್‌  ಸಿದ್ಧತೆಗೆ 398 ತರಬೇತುದಾರರು 

08:34 AM Feb 18, 2022 | Team Udayavani |

ಹೊಸದಿಲ್ಲಿ:  ಮುಂಬರುವ ಪ್ಯಾರಿಸ್‌ (2024) ಮತ್ತು ಲಾಸ್‌ ಏಂಜಲೀಸ್‌ (2028) ಒಲಿಂಪಿಕ್ಸ್‌ ಸೇರಿದಂತೆ ಪ್ರಮುಖ ಕ್ರೀಡಾಕೂಟಗಳಿಗೆ ತಯಾರಿ ನಡೆಸಲು 398 ತರಬೇತುದಾರರನ್ನು ನೇಮಿಸಲಾಗಿದೆ ಎಂದು ಭಾರತ ಕ್ರೀಡಾ ಪ್ರಾಧಿಕಾರ (ಸಾಯ್) ತಿಳಿಸಿದೆ.

Advertisement

“ಮುಂದಿನೆರಡು ಒಲಿಂಪಿಕ್ಸ್‌ ಸೇರಿದಂತೆ ಪ್ರಮುಖ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕೂಟಗಳಿಗೆ ತಯಾರಿ ನಡೆಸುತ್ತಿರುವ ಕ್ರೀಡಾಪಟುಗಳಿಗೆ ಸಂಪೂರ್ಣ ಬೆಂಬಲವನ್ನು ಒದಗಿಸಲು ಸಚಿವಾಲಯದ ಪ್ರಯತ್ನದ ಭಾಗವಾಗಿ ಈ ನೇಮಕಾತಿ ನಡೆದಿದೆ’ ಎಂದು ಕ್ರೀಡಾ ಸಚಿವಾಲಯದ ಪ್ರಕಟನೆ ತಿಳಿಸಿದೆ.

ತರಬೇತುದಾರರು ಮತ್ತು ಸಹಾಯಕ ತರ ಬೇತುದಾರರನ್ನು ಒಳಗೊಂಡ ಗುಂಪಿನಲ್ಲಿ ಏಶ್ಯಾಡ್‌ ಚಿನ್ನದ ಪದಕ ವಿಜೇತ ರೋಯಿಂಗ್‌ಪಟು ಬಜರಂಗ್‌ ಲಾಲ್‌ ಥಕ್ಕರ್‌ ಸೇರಿದಂತೆ ಪ್ರಮುಖರು ಇ¨ªಾರೆ. ಬಜರಂಗ್‌ ಅವರಿಗೆ ರೋಯಿಂಗ್‌ ತರಬೇತಿಯ ಹೊಣೆ ನೀಡಲಾಗಿದೆ.

ಉಳಿದಂತೆ ಕಾಮನ್ವೆಲ್ತ್‌ ಚಾಂಪಿಯಶಿಪ್‌ ಚಿನ್ನದ ಪದಕ ವಿಜೇತ ಕುಸ್ತಿಪಟು ಶಿಲ್ಪಿ ಶೆರಾನ್‌ ಅವರು ಕುಸ್ತಿಯ ಸಹಾಯಕ ಕೋಚ್‌ ಆಗಿರುವರು. ಒಲಿಂಪಿಯನ್‌ ಜಿನ್ಸಿ ಫಿಲಿಪ್‌ ಆ್ಯತ್ಲೆಟಿಕ್ಸ್‌, ಪ್ರಣಾಮಿಕಾ ಬೋರಾ ಬಾಕ್ಸಿಂಗ್‌ ಕೋಚ್‌ ಆಗಿ ನೇಮಕಗೊಂಡಿದ್ದಾರೆ. 398 ಕೋಚ್‌ಗಳ ಪೈಕಿ 101 ಮಂದಿಯನ್ನು ಸಾರ್ವಜನಿಕ ವಲಯದ ಉದ್ದಿಮೆಗಳು (ಪಿಎಸ್‌ಯು) ಮತ್ತು ಸರಕಾರದ ಇನ್ನುಳಿದ ಸಂಸ್ಥೆಗಳಿಂದ ನಿಯೋಜನೆ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next