Advertisement

ಸಾಯ್‌, ಟಾಪ್‌ ಸಹಾಯಧನದಲ್ಲಿ ಗಣನೀಯ ಇಳಿಕೆ

10:52 PM Feb 01, 2020 | Lakshmi GovindaRaj |

ಕ್ರೀಡಾ ಬಜೆಟ್‌ನಲ್ಲಿ ಕಳೆದ ಬಾರಿಗಿಂತ 50 ಕೋಟಿ ರೂ.ಗಳಷ್ಟು ಏರಿಕೆಯಾಗಿದೆ. 2,826.92 ಕೋಟಿ ರೂ. ಅನುದಾನ ನೀಡಲಾಗಿದೆ. ಆದರೆ ಕ್ರೀಡೆಗೆ ಹೇಳಿಕೊಳ್ಳು ವಷ್ಟು ಹಣ ನೀಡಿಲ್ಲ ಎನ್ನುವು ದನ್ನು ಇಲ್ಲಿ ಗಮನಿಸಬೇಕು. ತಳಹಂತದಲ್ಲಿ, ಹೊಸ ಹೊಸ ಪ್ರತಿಭೆಗಳನ್ನು ಬೆಳಕಿಗೆ ತರುವ ಸಲುವಾಗಿ ಸರ್ಕಾರ ಪ್ರಾರಂಭಿಸಿದ ಮಹತ್ವಾಕಾಂಕ್ಷಿ ಯೋಜನೆ “ಖೇಲೋ ಇಂಡಿಯಾ’ಗೆ 291.42 ಕೋಟಿ ರೂ. ನಿಗದಿಪಡಿಸಲಾ ಗಿರುವುದು ಗಮನಾರ್ಹ. ಒಲಿಂಪಿಕ್ಸ್‌ ಕ್ರೀಡಾಳುಗಳಿಗೆ ನೀಡಲಾಗುತ್ತಿದ್ದ ಸಹಾಯಧನದಲ್ಲಿ (ಟಾಪ್‌) ಗಣ ನೀಯ ಇಳಿಕೆ ಕಂಡುಬರಲಿದೆ.

Advertisement

ಅವರಿಗೆ ನೀಡಲಾಗುತ್ತಿದ್ದ 111 ಕೋಟಿ ರೂ. ಅನುದಾನವನ್ನು 70 ಕೋಟಿ ರೂ.ಗೆ ಇಳಿಸಿರುವುದು ಅದಕ್ಕೆ ಕಾರಣ. ಭಾರತೀಯ ಕ್ರೀಡಾ ಪ್ರಾಧಿಕಾರ(ಸಿಎಐ) ಕ್ಕೆ ನೀಡುತ್ತಿದ್ದ ಅನುದಾನವನ್ನೂ ಕಡಿತಗೊಳಿಸಲಾಗಿದೆ. ಇದುವರೆಗೂ ಇದ್ದ 615 ಕೋಟಿ ರೂ. ಅನುದಾನವನ್ನು 500 ಕೋಟಿ ರೂ.ಗಳಿಗೆ ಇಳಿಸ ಲಾಗಿದೆ. ಸಿಎಐ ಒಂದು ನೋಡಲ್‌ ಸಂಸ್ಥೆಯಾಗಿದ್ದು ದೇಶಾದ್ಯಂತ ಕ್ರೀಡಾಪಟುಗಳಿಗೆ, ಶಿಬಿರಗಳು, ಮೂಲ ಸೌಕರ್ಯ, ಆಟದ ಪರಿಕರಗಳನ್ನು ಒದಗಿಸುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next