Advertisement
ಸಹ್ಯಾದ್ರಿ ಪಂಚಮುಖೀಅವಿಭಜಿತ ದ.ಕ. ಜಿಲ್ಲೆಯಲ್ಲಿ ಮಳೆಗಾಲದಲ್ಲಿ ಅತಿಯಾದ ವರ್ಷಧಾರೆಯಿಂದ ತಗ್ಗು ಪ್ರದೇಶದ ಗದ್ದೆಯಲ್ಲಿ ನೀರು ತುಂಬಿಕೊಳ್ಳುವುದರಿಂದ ಭತ್ತದ ಬೆಳೆ ನಾಶವಾಗುತ್ತದೆ. ಈ ಸಮಸ್ಯೆಯನ್ನು ಅರಿತ ಕೃಷಿ ಸಂಶೋಧನಾ ಕೇಂದ್ರ ಕರಾವಳಿಯ ತಗ್ಗು ಪ್ರದೇಶಕ್ಕೆ ಸೂಕ್ತವಾದ ಸಹ್ಯಾದ್ರಿ ಪಂಚಮುಖೀ ತಳಿ ಅಭಿವೃದ್ಧಿಪಡಿಸಿದೆ.
ಕಡಿಮೆ ಖರ್ಚಿನಲ್ಲಿ ಅಧಿಕ ಇಳುವರಿ ಪಡೆಯಬಹುದಾದ ಕೆಂಪಕ್ಕಿ ತಳಿ ರೈತರಲ್ಲಿ ಆಶಾಕಿರಣ ಮೂಡಿಸಿದೆ. ಅವಿಭಜಿತ ದ.ಕ. ಜಿÇÉೆಯಲ್ಲಿ ಸಾಮಾನ್ಯವಾಗಿ ಎಂ.ಒ 4 ಭತ್ತ ಬೆಳೆಸುತ್ತಿದ್ದು, ಅತಿವೃಷ್ಟಿಯಿಂದಾಗಿ ತಗ್ಗು ಪ್ರದೇಶದಲ್ಲಿ ಹೆಚ್ಚು ಇಳುವರಿ ಸಿಗುತ್ತಿಲ್ಲ. ಜತೆಗೆ ಈ ತಳಿಯ ನಿರ್ವಹಣೆ ಕಷ್ಟವಾದೆ. ಇದೀಗ ಕರಾವಳಿ ಭಾಗಕ್ಕೆ ಕೆಂಪಕ್ಕಿ ಭತ್ತದ ತಳಿಯ ಪರಿಚಯಿಸಿದ್ದು, ಇದು ಹೆಚ್ಚಿನ ಇಳುವರಿಯ ಜತೆಗೆ ಆರ್ಥಿಕ ಲಾಭ ನೀಡಲಿದೆ. ನಾಲ್ಕೈದು ದಶಕಗಳ ಹಿಂದೆ ಕರಾವಳಿ, ಮಲೆನಾಡು ಭಾಗಗಳಲ್ಲಿ ಕೆಂಪಕ್ಕಿ ಚಾಲ್ತಿಯಲ್ಲಿತ್ತು. ಬಳಿಕ ಅಧಿಕ ಇಳುವರಿ ಎಂಬ ವಾಂಛೆಗೆ ಕಟ್ಟುಬಿದ್ದು ದೇಸೀ ತಳಿಗಳನ್ನು ಕೈಬಿಡುವಂತೆ ಮಾಡಲಾಗಿತ್ತು.
Related Articles
Advertisement
ರುಚಿಕರ ಅನ್ನ ಎಂಒ 4 ತಳಿಗಿಂತಲೂ ಸಹ್ಯಾದ್ರಿ ಪಂಚಮುಖೀ ಭತ್ತದ ಅನ್ನ ಹೆಚ್ಚು ರುಚಿಯಾಗಿದ್ದು, ಸುವಾಸನೆ ಭರಿತವಾಗಿರಲಿದೆ. ಅಕ್ಕಿಯಿಂದ ಅನ್ನವಾಗಿಸಲು ಬಳಕೆಯಾಗುವ ನೀರಿನ ಪ್ರಮಾಣ ಸಹ ಕಡಿಮೆ. ಅಕ್ಕಿ ಬೇಯಿಸಿದ ಬಳಿಕ ಅನ್ನ ಒಡೆಯದು ಎಂದು ಬೆಂಗಳೂರಿನ ಸಂಶೋಧನಾಲಯ ದಲ್ಲಿ ದೃಢಪಟ್ಟಿದೆ. 135 ದಿನಗಳಲ್ಲಿ ಕಟಾವು
ಭತ್ತದ ಸಸಿಯ ಗಾತ್ರ ಸುಮಾರು 10 ಸೆ.ಮೀ. ನಷ್ಟು ಎತ್ತರವಿದ್ದು, ಗಾಳಿ ಮಳೆಯನ್ನು ತಡೆಯಲು ಸಶಕ್ತವಾಗಿದೆ. ರೋಗಬಾಧೆಯೂ ಕಡಿಮೆ. ಮುಂಗಾರು ಹಂಗಾಮಿಗೆ ಈ ತಳಿ ನಾಟಿ ಮಾಡಿದ 130ರಿಂದ 135 ದಿನಗಳಲ್ಲಿ ಕಟಾವಿಗೆ ಬರಲಿದೆ. ಪ್ರತಿ ಹೆಕ್ಟೇರ್‌ಗೆ 50ರಿಂದ 56 ಕ್ವಿಂಟಲ್ ಭತ್ತವನ್ನು ಇಳುವರಿ ಪಡೆಯಬಹುದು. ಇತರೆ ಭತ್ತದ ತಳಿಗೆ ಹೋಲಿಸಿದರೆ ಅಧಿಕ ಪ್ರಮಾಣದ ಭತ್ತದ ಹುಲ್ಲನ್ನೂ ಪಡೆಯಬಹುದು. ಕರಾವಳಿಗೆ ಸೂಕ್ತ
ಸಹ್ಯಾದ್ರಿ ಪಂಚಮುಖೀ ಭತ್ತದ ತಳಿ ಕರಾವಳಿಗೆ ಸೂಕ್ತ. ಈ ತಳಿಯ ಕುರಿತು ಬ್ರಹ್ಮಾವರ ಕೃಷಿ ಸಂಶೋಧನಾ ಕೇಂದ್ರ 4 ವರ್ಷಗಳ ಕಾಲ ಸಂಶೋಧನೆ ನಡೆಸಿದೆ. ರೈತರು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು.
-ಡಾ| ಶ್ರೀದೇವಿ ಜಕ್ಕೇರಾಳ,
ಬ್ರಹ್ಮಾವರ ಕೃಷಿ ಸಂಶೋಧನಾ ಕೇಂದ್ರದ ತಳಿಶಾಸ್ತ್ರ ವಿಭಾಗದ ವಿಜ್ಞಾನಿ. ಉತ್ತಮ ಫಲಿತಾಂಶ
ಐದಾರು ವರ್ಷಗಳ ಪ್ರಯತ್ನದಿಂದ ಸಹ್ಯಾದ್ರಿ ಪಂಚಮುಖೀ (ಜಿrಜಚ 31811692ಚಿ) ತಳಿಯನ್ನು ಬ್ರಹ್ಮಾವರ ವಲಯ ಕೃಷಿ ಸಂಶೋಧನಾ ಕೇಂದ್ರದಲ್ಲಿ ಸಂಶೋಧಿಸಲಾಗಿದೆ. ಉಡುಪಿ ಮತ್ತು ದಕ್ಷಿಣ ಜಿÇÉೆ ಸೇರಿದಂತೆ 14 ತಾಲೂಕುಗಳಿಗೆ ಈ ತಳಿಯನ್ನು ನೀಡಿದ್ದು, ಉತ್ತಮ ಫಲಿತಾಂಶ ದೊರಕಿದೆ.