Advertisement

ಡಿ.4ರಂದು ಮುರುಘಾ ಮಠದಲ್ಲಿ ಶರಣ ಸಾಹಿತ್ಯ-ಭಾವೈಕ್ಯ ಸಮ್ಮೇಳನ

03:51 PM Dec 02, 2021 | Vishnudas Patil |

ಆನಂದಪುರ: ಸ್ಥಳೀಯ ಐತಿಹಾಸಿಕ ಆನಂದಪುರ ಮುರುಘಾಮಠದಲ್ಲಿ ಡಿ.4ರಂದು ಶನಿವಾರ ಬೆಳಗ್ಗೆಯಿಂದ ರಾತ್ರಿಯವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಡಾ| ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಸ್ವಾಮಿಗಳು ತಿಳಿಸಿದರು.

Advertisement

ಅಂದು ಬೆಳಗ್ಗೆ 5.30ಕ್ಕೆ ಕತೃì ಗದ್ದುಗೆಗೆ ಶತರುದ್ರಾಭಿಷೇಕ ವಿಶೇಷ ಪೂಜೆ ನಡೆಯಲಿದೆ. 10ಗಂಟೆಗೆ 548ನೇ ಮಾಸಿಕ ಶಿವಾನುಭವ ಗೋಷ್ಠಿ ಹಾಗೂ ಮುರುಘಾರಾಜೇಂದ್ರ ಮಹಾಸಂಸ್ಥಾನ ಮಠ ಹಾಗೂ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯ ಶಿವಮೊಗ್ಗ ಇವರ ಸಹಯೋಗದಲ್ಲಿ ಹೃದಯ ತಪಾಸನಾ ಶಿಬಿರ ಆಯೋಜಿಸಲಾಗಿದೆ ಎಂದು ಹೇಳಿದರು.

ಡಾ|ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಸ್ವಾಮಿಗಳ ಸಾನ್ನಿಧ್ಯದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಬೃಹನ್‌ ಹೊಸವ¾ಠದ ಚಂದ್ರಶೇಖರ ಶಿವಯೋಗಿ ರಾಜಯೋಗೀಂದ್ರ ಸ್ವಾಮಿಗಳು ಸಮ್ಮುಖ ವಹಿಸಲಿದ್ದಾರೆ. ಶಿರಾಳಕೊಪ್ಪ ವಿರಕ್ತಮಠದ ಸಿದ್ದೇಶ್ವರ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು. ಖ್ಯಾತ ವೈದ್ಯ ಡಾ|ಬಿ.ಜಿ.ಸಂಗಮ್‌ ಶಿಬಿರ ಉದ್ಘಾಟಿಸಲಿದ್ದಾರೆ. ಸಿಮ್ಸ್‌ನ ನಿರ್ದೇಶಕರಾದ ಡಾ|ಸಿದ್ದಪ್ಪ, ಬೆಂಗಳೂರಿನ ಡಾ| ಬಿ.ಟಿ. ಚಿದಾನಂದಮೂರ್ತಿ ಭಾಗವಹಿಸಲಿದ್ದಾರೆ. ರಾಂಚಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ| ನಾಗ ಎಚ್‌. ಹುಬ್ಳಿ ಅವರು ವಚನ ಸಾಹಿತ್ಯ ನಡೆದು ಬಂದ ಹಾದು ಕುರಿತು ಉಪನ್ಯಾಸ ನೀಡಲಿದ್ದಾರೆ. ಸುಮಾ ವಿ.ಹೆಗಡೆ ವಚನ ಸಂಗೀತ ಕಾರ್ಯಕ್ರಮ ನೀಡಲಿದ್ದಾರೆ ಎಂದರು.

ಭಾವೈಕ್ಯ ಸಮ್ಮೇಳನ:

ಶನಿವಾರ ಸಂಜೆ 4ಕ್ಕೆ ಭಾವೈಕ್ಯ ಸಮ್ಮೇಳನವನ್ನು ಆಯೋಜಿಸಲಾಗಿದ್ದು, ಕೋಡಿಮಠದ ಡಾ|ಶಿವಾನಂದ ಶಿವಯೋಗಿರಾಜೇಂದ್ರ ಸ್ವಾಮಿಗಳು ಸಮ್ಮುಖ ವಹಿಸಲಿದ್ದಾರೆ. ಕುವೆಂಪು ವಿವಿ ಕುಲಪತಿ ಪ್ರೊ| ಬಿ.ಪಿ.ವೀರಭದ್ರಪ್ಪ ಉದ್ಘಾಟಿಸಲಿದ್ದಾರೆ. ಖ್ಯಾತ ಹಾಸ್ಯ ಭಾಷಣಗಾರ್ತಿ ಇಂದುಮತಿ ಸಾಲಿಮಠ ಉಪನ್ಯಾಸ ನೀಡಲಿದ್ದಾರೆ.

Advertisement

ಮಾಜಿ ಶಾಸಕ ಎಚ್‌. ಎಂ. ಚಂದ್ರಶೇಖರಪ್ಪ, ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಎಸ್‌.ಎನ್‌. ರುದ್ರಮೂರ್ತಿ ಸಜ್ಜನ್‌, ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಜಿಲ್ಲಾಧ್ಯಕ್ಷ, ಸಿ.ಪಿ. ಈರೇಶ್‌ ಗೌಡ, ಬೆಂಗಳೂರು ಎಲ್‌.ನಾಗರಾಜ ಶೆಟ್ಟಿ, ಮೊದಲಾದವರು ಭಾಗವಹಿಸಲಿದ್ದಾರೆ. ಡಾ|ರಾಜಗುರು ನಿರಂಜನ ಚರಮೂರ್ತಿ ಸ್ವಾಮಿಯವರ ಆರೋಗ್ಯ ಸಮೃದ್ಧಿ ಕೃತಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಉಮೇಶ್‌ ಹಾಲಾಡಿ ಬಿಡುಗಡೆಗೊಳಿಸುವರು. ಅಖೀಲಾ ಭಾರತ ವೀರಶೈವ ಮಹಾಸಭಾದ ಮಹಿಳಾ ಘಟಕದ ರಾಜ್ಯಧ್ಯಕ್ಷೆ ಬಿ.ವೈ. ಅರುಣಾದೇವಿ ಅವರಿಗೆ ಕೆಳದಿರಾಣಿ ಚನ್ನಮ್ಮ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಹಾಲಪ್ಪ ಗೌಡರು, ಡಾ|ಎಚ್‌.ಎಂ. ಶಿವಕುಮಾರ್‌ ಹುನಾಲು ಮಡಿಕೆ, ಡಾ|ನಾಗರಾಜ್‌, ಮಲ್ಲನಗೌಡ ಬಿ.ಪಾಟೀಲ್‌, ಗೌರಮ್ಮ ಹುಚ್ಚಪ್ಪ ಮಾಸ್ತರ್‌, ಡಾ| ಜೆ.ಜಿ. ಮಂಜುನಾಥ ಜಣಬಳ್ಳಿ ಅವರಿಗೆ ಸಮಾಜ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಗುವುದು.

ಡಾ| ಪ್ರಕಾಶ್‌, ಸೋಮಶೇಖರಯ್ಯ, ತೀರ್ಥೇಶ್‌ ಬಟ್ಟೆಮಲ್ಲಪ್ಪ, ವಿ.ಪರಮೇಶ್ವರಯ್ಯ, ಎನ್‌. ಆರ್‌.ನಾಗರಾಜ್‌, ಜಿ.ಎಂ.ಈಶ ಅವರನ್ನು ಸನ್ಮಾನಿಸಲಾಗುವುದು. ಕಲಾರಾಧನ ಕಲ್ಚರಲ್‌ ಟ್ರಸ್ಟ್‌ ಸಾಗರ ಅವರು ವಚನ ನೃತ್ಯರೂಪಕ ಹಾಗೂ ಶಾಚಿತಾ ಆನಂದ ಅವರು ವಚನ ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಕಂಚಿನ ರಥೋತ್ಸವ: ಐತಿಹಾಸಿಕ ಮಹತ್ವವನ್ನು ಹೊಂದಿರುವ ಶ್ರೀಮಠದಲ್ಲಿರುವ ಹಾಗೂ ಕೆಳದಿ ಅರಸರ ಕಾಲದಿಂದಲೂ ನಡೆದುಕೊಂಡು ಬಂದಿರುವ ಕಂಚಿನ ರಥೋತ್ಸವ ಅಪರೂಪವಾಗಿದ್ದು, ವಿಶ್ವಮಾನವ ಸಂದೇಶ ಸಾರುವ ಕಂಚಿನ ರಥೋತ್ಸವ ಸಂಜೆ 7ಕ್ಕೆ ನೆರವೇರಲಿದೆ. ಕಾರ್ಯಕ್ರಮಗಳಲ್ಲಿ ಭಕ್ತರು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಶ್ರೀಗಳು ತಿಳಿಸಿದಾರೆ. ಈ ಸಂದರ್ಭದಲ್ಲಿ ದೀಪೋತ್ಸವ ಸಮಿತಿ ಅಧ್ಯಕ್ಷ ದಾನೇಶಪ್ಪ ಗೌಡ, ಕಾರ್ಯದರ್ಶಿ ಗಿರೀಶ್‌ ಕೆ.ಎಲ್‌. ಕೋಶಾಧ್ಯಕ್ಷ ವತೇìಶ್‌ ಗೌಡ, ದೇವೇಂದ್ರ ಗೌಡ, ಬಸವರಾಜಯ್ಯ ಮುರುಗೇಶ ಗೌಡ್ರು, ಹಾಲಸ್ವಾಮಿ, ನಾಗಭೂಷಣ್‌, ರಾಜು ಕೆ.ಆರ್‌, ರಾಜೇಂದ್ರ ಮುರುಘಾಮಠ, ರಾಜೇಂದ್ರ ಆವಿನಹಳ್ಳಿ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next