Advertisement
ಜ. 9ರಂದು ತಾಲೂಕು ಘಟಕದ ಅಧ್ಯಕ್ಷ ಬಿ. ಪುಂಡಲೀಕ ಮರಾಠೆ ಅವರ ಅಧ್ಯಕ್ಷತೆ ಯಲ್ಲಿ ಪಡುಬಿದ್ರೆಯ ಗಣಪತಿ ಶಾಲೆಯ ಸಭಾಂಗಣದಲ್ಲಿ ನಡೆದ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಾಪು ತಾಲೂಕು ಘಟಕದ ಆಶ್ರಯದಲ್ಲಿ ಜರಗಲಿರುವ ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಸಮ್ಮೇಳನದ ಅಧ್ಯಕ್ಷರನ್ನಾಗಿ ಡಾ| ಭರತ್ ಕುಮಾರ್ ಪೊಲಿಪು ಅವರ ಆಯ್ಕೆಯನ್ನು ಘೋಷಿಸಲಾಯಿತು. ಕಾಪು ತಾಲೂಕು ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನವು ಜ. 29ರಂದು ಪಡುಬಿದ್ರೆಯ ಶ್ರೀ ಮಹಾಲಿಂಗೇಶ್ವರ ಮತ್ತು ಮಹಾಗಣಪತಿ ದೇವಸ್ಥಾನದ ಪ್ರಾಂಗಣದಲ್ಲಿ ನಡೆಯಲಿದೆ.
Related Articles
Advertisement
ಅವರು ರಚಿಸಿದ ತುಳು ನಾಟಕ “ಅರುಂಧತಿಗೆ’ ದಿ| ರತ್ನಮ್ಮ ಹೆಗ್ಗಡೆ ಪ್ರಶಸ್ತಿಯೂ ಲಭಿಸಿದೆ. ಮುಂಬಯಿ ರಂಗಭೂಮಿಯ ಕುರಿತು ಅವರ ಹಲವಾರು ವಿಮಶಾìತ್ಮಕ ಲೇಖನಗಳು, ಸಂಶೋಧನ ಲೇಖನಗಳು, ಅಂಕಣ ಬರಹಗಳು ಹಲವಾರು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಕಳೆದ ಮೂರು ದಶಕಗಳಿಂದ ಮುಂಬಯಿಯಲ್ಲಿ ಕ್ರಿಯಾಶೀಲರಾಗಿರುವ ಅವರು ಈಗಾಗಲೇ “ರಾವಿ ನದಿ ದಂಡೆಯಲ್ಲಿ’, “ಆಷಾಢದ ಒಂದು ದಿನ’, “ನೀ ಮಾಯೆಯೋಳಗೂ’, “ಪೊಲೀಸರಿದ್ದಾರೆ ಎಚ್ಚರಿಕೆ’, “ಗುಮ್ಮನೆಲ್ಲಿಹನೆ ತೋರಮ್ಮ’, “ಬದುಕ ಮನ್ನಿಸು ಪ್ರಭುವೇ’, “ಸಾಯೋ ಆಟ’, “ಯಾವ ನದಿ ಯಾವ ಪಾತ್ರ’, “ಗಿಡಗಳ ಜೊತೆ’, “ಮಾತ ನಾಡುವ ಹುಡುಗ’, ಆಷಾಢದ ಒಂದು ದಿನ, ಕೋಮಲ ಗಾಂಧಾರ, ಶಾಕುಂತಲಾ, ಇನ್ನೊಬ್ಬ ದ್ರೋಣಾಚಾರ್ಯ, ಅಂಬೆ ಮೊದಲಾದ ನಾಟಕಗಳನ್ನು ನಿರ್ದೇಶಿಸಿ ಹೆಸರು ಮಾಡಿದ್ದಾರೆ.
ತುಳುಕೂಟ ಉಡುಪಿ ಆಯೋಜಿಸಿದ ದಿ| ಕೆಮೂ¤ರು ಸ್ಮಾರಕ ರಾಜ್ಯಮಟ್ಟದ ನಾಟಕ ಸ್ಪರ್ಧೆಯಲ್ಲಿ ಇವರ ನೇತೃತ್ವದ ಕರ್ನಾಟಕ ಸಂಘ ಮುಂಬಯಿ ಇದರ ಕಲಾಭಾರತಿ ತಂಡವು ಸತತವಾಗಿ ಆರು ಬಾರಿ ಭಾಗವಹಿಸಿ ಮೂರು ಬಾರಿ ಪ್ರಥಮ, ಎರಡು ಬಾರಿ ದ್ವಿತೀಯ ಬಹುಮಾನ ಗಳಿಸಿದೆ. ಇತ್ತೀಚೆಗೆ ಕರ್ನಾಟಕ ನಾಟಕ ಅಕಾಡೆಮಿಯ ಫೆಲೋಶಿಪ್ ಇವರಿಗೆ ಲಭಿಸಿದ್ದು, ಅದಕ್ಕಾಗಿ ಕನ್ನಡ, ಹಿಂದಿ, ಮರಾಠಿ ರಂಗಭೂಮಿಯ ಇತ್ತೀಚೆಗಿನ ಬೆಳವಣಿಗೆಯ ಬಗ್ಗೆ ಪ್ರಬಂಧ ರಚಿಸಿ ಅಕಾಡೆಮಿಗೆ ಸಲ್ಲಿಸಿರುವುದು ಇವರ ಪಾಂಡಿತ್ಯಕ್ಕೆ ಸಂದ ಗೌರವವಾಗಿದೆ.
ಅವರು ನಿರ್ದೇಶಿಸಿದ ನಾಟಕಗಳಿಗೆ ರಾಜ್ಯ, ರಾಷ್ಟ್ರ ಮಟ್ಟದ ಪ್ರಶಸ್ತಿಗಳೂ ಲಭಿಸಿವೆ. ಅವರ “ರಾವಿ ನದಿ ದಂಡೆಯಲ್ಲಿ’ ನಾಟಕವು ದಿಲ್ಲಿಯಲ್ಲಿ ರಂಗ ಗಂಗೊತ್ರಿ ಆಯೋಜಿಸಿದ ನಾಟಕ ಸ್ಪರ್ಧೆ ಯಲ್ಲಿ ಅತ್ಯುತ್ತಮ ಪ್ರಯೋಗಾತ್ಮಕ ನಾಟಕ ವೆಂಬ ಪ್ರಶಸ್ತಿಯನ್ನು ಪಡೆದ್ದಾರೆ.