ಮೈಸೂರು: ರಂಗಾಯಣದ ಆವರಣದಲ್ಲಿ ಶುಕ್ರವಾರ ಸಂಜೆ ಕೊಡಗು ಭಾಗದ ಅರೆ ಭಾಷೆ ನಾಟಕವಾದ ಸಾಹೇಬ್ರು ಬಂದವೇ!!! ಪ್ರದರ್ಶನವಾಯಿತು. ಮೈಸೂರು ರಂಗಾಯಣ, ಕರ್ನಾಟಕ ಅರೆಭಾಷೆ ಸಂಸ್ಕೃತಿ-ಸಾಹಿತ್ಯ ಅಕಾಡೆಮಿ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಏರ್ಪ ಡಿಸಿದ್ದ ನಾಟಕ ಪ್ರದರ್ಶನ ಉದ್ಘಾಟನಾ ಕಾರ್ಯಕ್ರಮದಲ್ಲಿ ಮೈಸೂರು ರಂಗಾ ಯಣ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ ಮಾತನಾಡಿ, ಕೊಡವರು ಮತ್ತು ಅರೆಭಾಷೆ ಗೌಡರು ಅಣ್ಣತಮ್ಮಂದಿರಿದ್ದಂತೆ. ಇಬ್ಬರೂ ಕೊಡಗನ್ನು ಕಟ್ಟಿದರು. ಕೊಡವರು ಮತ್ತು ಅರೆಭಾಷೆಗೌಡರು ಈ 2 ಜನಾಂಗದವರು ಅನೇಕ ವೀರ ಯೋಧರರನ್ನು ನಾಡಿಗೆ ಸಮರ್ಪಿಸಿದರು. ಜತೆಗೆ ಜನರಲ್ ಅನ್ನು ಕೊಟ್ಟನಾಡು ಕೊಡಗು ಎಂದರು.
ಇದನ್ನೂ ಓದಿ: ಭಾರತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಚಲನಚಿತ್ರಗಳು ನಿರ್ಮಾಣಗೊಳ್ಳಬೇಕು : ಪ್ರಕಾಶ್ ಜಾವಡೇಕರ್
ರಂಗಾಯಣವನ್ನು ರಂಗಭೂಮಿ ಕಾಶಿ ಎಂದು ಹೇಳಬಹುದು. ಮೈಸೂರು ರಂಗಾಯಣದಲ್ಲಿ ನೂರಾರು ನಾಟಕಗಳು ಪ್ರದರ್ಶನಗೊಂಡಿವೆ. ದೇಶಿ-ವಿದೇಶಿಯ, ಎಲ್ಲಾ ರಾಜ್ಯಗಳ ನಾಟಕಗಳು ಪ್ರದರ್ಶನ ಗೊಂಡಿವೆ. ಇಂಥ ವೇದಿಕೆಯಲ್ಲಿ ಇಂದು ಅರೆಭಾಷೆ ನಾಟಕ ಪ್ರದರ್ಶನವಾಗುತ್ತಿ ರುವುದು ಸಂತೋಷ ತಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರಂಗ ಶಿಸ್ತಿಗಾಗಿ ಟಿಕೆಟ್: ರಂಗ ಶಿಸ್ತಿಗಾಗಿ ನಾಟಕ ವೀಕ್ಷಣೆಗೆ ಟಿಕೆಟ್ ಮಾಡಿದ್ದೇವೆ ಹೊರತು ದುಡ್ಡಿಗಾಗಿ ಅಲ್ಲ. ಉಚಿತವಾಗಿ ಯಾರೂ ನಾಟಕ ನೋಡಬಾರದು. ಉಚಿ ತವಾಗಿ ಅಕ್ಕಿ ನೀಡಿದರೆ ಅಂಗಡಿಗೆ ತೆಗೆದುಕೊಂಡು ಹೋಗಿ ಮಾರಿ ಬಿಡುತ್ತಾರೆ. ಹಾಗೆಯೇ ನಾಟಕದಿಂದಲೂ ಅರ್ಧಕ್ಕೆ ಎದ್ದು ಹೋಗುತ್ತಾರೆ. ಹಾಗಾಗದಿರಲಿ ಎಂದು ಟಿಕೆಟ್ ಮಾಡಿದ್ದೇವೆ. ಈ ನಾಟಕ ಕೋವಿಡ್ ಸಂದರ್ಭದಲ್ಲೂ 14 ಪ್ರದ ರ್ಶನ ಕಂಡಿರುವುದು ದೊಡ್ಡ ಸಾಧನೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ, ಕೊಡಗುಗೌಡ ಸಮಾಜದ ಅಧ್ಯಕ್ಷ ತೋಟಂಬೈಲು ಮನೋಹರ, ಕರ್ನಾಟಕ ಅರೆಭಾಷೆ ಸಂಸ್ಕೃತಿ-ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಲಕ್ಷ್ಮಿ ನಾರಾಯಣ ಕಜೆಗದ್ದೆ, ರಂಗಾಯಣ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿ ಕಾರ್ಜುನಸ್ವಾಮಿ ಇದ್ದರು.