Advertisement

ಶಿವ ಶಿವ ಎನ್ನದೇ ವಿಧಿಯಿಲ್ಲ; ಸಹಸ್ರ ಲಿಂಗಗಳಿಗೆ ರಕ್ಷಣೆಯಿಲ್ಲ!

11:47 AM Mar 01, 2022 | Team Udayavani |

ಶಿರಸಿ: ರಾಜ್ಯದ ಅಪರೂಪದ ಶಿವ ತಾಣ, ನದಿಯೊಳಗೇ ಇರುವ ಸಹಸ್ರ ಲಿಂಗಳಿಗೆ ಇನ್ನೂ ರಕ್ಷಣೆಯ ಭಾಗ್ಯ ಸಿಕ್ಕಿಲ್ಲ.

Advertisement

ನಿತ್ಯ ಪ್ರವಾಸಿಗಳು, ಮಹಾ ಶಿವರಾತ್ರಿ, ಸಂಕ್ರಾಂತಿಗೆ ಆಗಮಿಸುವ ಹತ್ತು ‌ಸಹಸ್ರಕ್ಕೂ ಅಧಿಕ ಭಕ್ತರು ನದಿಯೊಳಗೆ ಇರುವ ‌ಲಿಂಗಗಳಿಗೆ  ಹರಿವ ನದಿ‌ ನೀರನ್ನೇ ಬಳಸಿ ಸ್ವತಃ ಅಭಿಷೇಕ‌ ಮಾಡಿ ಪೂಜೆ ಮಾಡುವದು ವಿಶೇಷ. ಕೆಲವರು ಮಳೆಗಾಲ ಹೊರತುಪಡಿಸಿ‌ ಇಲ್ಲೇ ನದಿಯೊಳಗೆ‌ ಸ್ನಾನ ಕೂಡ‌ ಮಾಡಿ ಪೂಜೆ ಸಲ್ಲಿಸುತ್ತಾರೆ. ಪರಿಸರ ಪ್ರವಾಸೋದ್ಯಮ ಹಾಗೂ‌ ಪುಣ್ಯ ಕ್ಷೇತ್ರ ಎರಡೂ ಇಲ್ಲಿ ಸಾಧ್ಯವಿದೆ.

ಜುಳು‌ಜುಳು ಎಂದುನ ಹರಿಯುವ ಶಾಲ್ಮಲಾ‌ ನದಿಯ ದಡದಲ್ಲಿ ಇರುವ ಸಹಸ್ರಲಿಂಗ ಶಿರಸಿಯಿಂದ‌ 17 ಕಿ.ಮಿ‌ ದೂರವಿದೆ‌. ಭೈರುಂಬೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹುಳಗೋಳ‌ ಪಕ್ಕದ ಸಹಸ್ರ ಲಿಂಗಗಳನ್ನು‌ ಹಿಂದೆ ಸೋದೆ ಅರಸ ಕೆತ್ತಿಸದನೆಂದು ಹೇಳಾಗುತ್ತದೆ. ದೇವತೇಗಳೆ ಕೆತ್ತಿ ಬೆಳಗಾಯಿತೆಂದು ಬಿಟ್ಟರೆಂದೂ ಕಥೆ ಇದೆ. ಇದೇ ಸಹಸ್ರಲಿಂಗದಲ್ಲಿ ಸ್ವರ್ಣವಲ್ಲೀ‌ಮಠ ಇತ್ತೆಂದೂ ಉಲ್ಲೇಖವಿದೆ.

ಹೆಸರಿಗೆ ಸಹಸ್ರಲಿಂಗವಾದರೂ‌ ನೂರಾರು ಲಿಂಗಗಳು ಕಾಣುತ್ತದೆ. ಕೆಲವು‌ ಲಿಂಗಗಳು ನೀರಿನ ರಭಸಕ್ಕೆ ಉರುಳಿವೆ. ನದಿಯ ನೆರೆಗೆ ಬಂದ ಮರದ ದಿಮ್ಮಿ ಕೂಡ ಲಿಂಗಗಳನ್ನು ಘಾಸೊಗೊಳಿಸಿದೆ. ಬಿಸಿಲಿನ ಝಳಕ್ಕೆ ಒಡದಿದೆ. ದೇವರಕೇರೆ ಭಾಗದಿಂದ ಸಹಸ್ರಲಿಂಗಗಳ ತನಕದ ಲಿಂಗಗಳ ರಕ್ಷಣೆ‌ ಮಾಡಬೇಕು, ಉರುಳಿದವನ್ನು ಪುನಃ ರಕ್ಷಿಸಬೇಕು ಎಂಬ ಪ್ರಸ್ತಾವನೆ ಹಿಂದೆ ಈ ತಾಣ ನೋಡಲು ಬಂದಿದ್ದ ರಾಜ್ಯ ಪಾಲೆ ರಮಾದೇವಿ‌ ಕಾಲದಿಂದಲೂ ಇದೆ. ಈಗ ಯಲ್ಲಾಪುರ‌ ಮುಖ್ಯರಸ್ತೆ ಹುಳಗೋಳದಿಂದ ಸಹಸ್ರಲಿಂಗದ ತನಕ ಒಳ್ಳೆ ರಸ್ತೆಯಿದೆ, ಒಂದು ಅಂಗಡಿ‌ ಕೂಡ ಇದೆ. ಆದರೆ, ಲಿಂಗಗಳ ರಕ್ಷಣೆ, ಉದ್ಯಾನ,  ಮಕ್ಕಳಾಟಿಕೆ ಬೇಕಿದೆ. ಹಿಂದೆ ಪಶ್ಚಿಮ ಘಟ್ಟ‌ಕಾರ್ಯ ಪಡೆ ಇದ್ದಾಗ ಇದನ್ನು ಜೀವ ವೈವಿಧ್ಯ ಸಂರಕ್ಷಣಾ ವಲಯ ಎಂದು ಅದರ ಅಧ್ಯಕ್ಷರಾಗಿದ್ದ ಅನಂತ ಅಶೀಸರ ಘೋಷಿಸಿದ್ದರು.

ಈ ಸಹಸ್ರಲಿಂಗಗಳ ಸಮಗ್ರ ಅಭಿವೃದ್ದಿ ಆಗಬೇಕು ಎಂದು ಅಂದಿನ ತಾಲೂಕು ಪಂಚಾಯತ್ ಅಧ್ಯಕ್ಷರಾಗಿದ್ದ ಸದಾನಂದ ಭಟ್ಟ ನಿಡಗೋಡ ಸರಕಾರವನ್ನು ಆಗ್ರಹಿಸಿದ್ದರು.

Advertisement

ಸಹಸ್ರಲಿಂಗಗಳ ಅಭಿವೃದ್ಧಿ ಆಗಬೇಕಾದರೆ ಸ್ಪೀಕರ್ ಅವರು ಮನಸ್ಸು ಮಾಡಿದರೆ ವರ್ಷದೊಳಗಿನ ಕೆಲಸ ಎಂದುಇ ನಾಗರೀಕರು ಹೇಳುವಲ್ಲಿ ಅರ್ಥವಿದೆ.

ಮೊನ್ನೆ ಮೊನ್ನೆ ಬಂದಿದ್ದ ಜಿಪಂ ಸಿಇಓ ಪ್ರಿಯಾಂಕಾ, ಇಲ್ಲಿ ಪಾರ್ಕ ಪ್ರಸ್ತಾಪ ಮಾಡಿದ್ದಾರೆ. ಸಹಸ್ರಲಿಂಗದಂಥ ಅಪರೂಪದ ತಾಣಗಳ ರಕ್ಷಣೆಗೆ ಹಸಿರು ಪೊಲೀಸ್ ಪ್ರಸ್ತಾಪವೂ ಮೊದಲಿತ್ತು ಎಂಬುದೂ ಉಲ್ಲೇಖನೀಯ. ಮಾಲಿನ

ಸಹಸ್ರಲಿಂಗಗಳ ಉಳಿವು‌ ಮುಂದಿನ ತಲೆಮಾರು ಹಾಗೂ ಜಿಲ್ಲೆಯ ಪ್ರವಾಸೋದ್ಯಮ, ಪುಣ್ಯ ‌ನೆಲೆಯ‌ ಕಾರಣದಿಂದ ಮಹತ್ವದ್ದೇ ಆಗಿದೆ.

ಇದೊಂದು ಪಿಕ್ನಿಕ್ ಸ್ಮಾರ್ಟ್ ಆಗುವುದಕ್ಕಿಂತ ಧಾರ್ಮಿಕ ಕ್ಷೇತ್ರವಾಗಿ ಮುಂದುವರಿಬೇಕು. ಪುರಾತನ ಕಾಲದಲ್ಲಿ ಇದ್ದ ಸಹಸ್ರಾರು ಲಿಂಗಗಳು ಇಂದು ನಶಿಸಿಹೋಗಿ ಕೇವಲ ಬೆರಳೆಣಿಕೆಯಲ್ಲಿ ಕಾಣುವಷ್ಟು ಲಿಂಗಗಳು ಇದೆ. ಐತಿಹಾಸಿಕ ಕ್ಷೇತ್ರವನ್ನು ಉಳಿಸಿಕೊಳ್ಳಲು ಸರಕಾರ ನೆರವಾಗಬೇಕು.-ರಾಘು ನಾಯ್ಕ, ಅಧ್ಯಕ್ಷ, ಭೈರುಂಬೆ ಗ್ರಾ.ಪಂ.

ಮಹಿಳೆಯರಿಗೆ ತೀರ್ಥ ಸ್ನಾನದ ನಂತರ ಬಟ್ಟೆಯನ್ನು ಬದಲಾಯಿಸಲು ಒಂದು ಕೊಠಡಿ ನಿರ್ಮಾಣವಾಗಬೇಕು.ರೂಪಾ ಪಾಟೀಲ, ಹುಬ್ಬಳ್ಳಿ, ಭಕ್ತೆ

 

-ರಾಘವೇಂದ್ರ ಬೆಟ್ಟಕೊಪ್ಪ

Advertisement

Udayavani is now on Telegram. Click here to join our channel and stay updated with the latest news.

Next