Advertisement

ಸಹರಣ್‌ಪುರ ಗಲಭೆ: ಇಬ್ಬರು ಅಧಿಕಾರಿಗಳ ಅಮಾನತು

02:02 AM May 25, 2017 | Karthik A |

ಸಹರಣ್‌ಪುರ: ಉತ್ತರ ಪ್ರದೇಶದ ಸಹರಾನ್ಪುರದಲ್ಲಿ ಒಂದು ತಿಂಗಳಿಂದ ನಡೆಯುತ್ತಿರುವ ಕೋಮು ಹಿಂಸಾಚಾರ ಅತಿರೇಕಕ್ಕೆ ತಲುಪಿದ ಹಿನ್ನೆಲೆಯಲ್ಲಿ ಇಲ್ಲಿನ ಇಬ್ಬರು ಉನ್ನತ ಅಧಿಕಾರಿಗಳನ್ನು ಯೋಗಿ ಆದಿತ್ಯನಾಥ್‌ ಸರಕಾರ ಅಮಾನತುಗೊಳಿಸಿದೆ. ಬುಧವಾರವೂ ದಲಿತರು ಮತ್ತು ರಜಪೂತರ ನಡುವೆ ಹಿಂಸಾಚಾರ ನಡೆದು, ಓರ್ವ ವ್ಯಕ್ತಿಗೆ ಗುಂಡೇಟು ತಗಲಿ ಗಂಭೀರವಾಗಿ ಗಾಯಗೊಂಡಿದ್ದಾರೆ. 

Advertisement

ಅಧಿಕಾರಿಗಳಾದ ಎಸ್‌ಪಿ ಎಸ್‌.ಸಿ. ದುಬೆ ಮತ್ತು ಜಿಲ್ಲಾಧಿಕಾರಿ ಎನ್‌.ಪಿ. ಸಿಂಗ್‌ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿರ್ವಹಿಸಿಲ್ಲ ಎಂಬ ಕಾರಣಕ್ಕೆ ಸಸ್ಪೆಂಡ್‌ ಆಗಿದ್ದಾರೆ. ಅದಲ್ಲದೇ ಈ ಗಲಭೆಗೆ ರಾಜಕೀಯ ಬಣ್ಣಗಳೂ ಸೇರಿಕೊಂಡಿದ್ದು, ಗಲಭೆ ಪೀಡಿತ ಗ್ರಾಮದಲ್ಲಿ ಮಾಯಾವತಿ ರ್ಯಾಲಿ ನಡೆಸಿದ್ದಕ್ಕಾಗಿ ಅವರಿಗೂ ಛೀಮಾರಿ ಹಾಕಿದೆ.

Advertisement

Udayavani is now on Telegram. Click here to join our channel and stay updated with the latest news.

Next