ಶಹಾಪುರ: ಮೇ.12 ರಂದು ಕೊಳ್ಳೂರ(ಎಂ) ದಲ್ಲಿ ನಡೆದ ಉಪನ್ಯಾಸಕ ಮಾನಪ್ಪ ಗೋಪಾಳಪುರ ಎಂಬುವವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ತನಿಖೆಗೆ ಒಪ್ಪಿಸಿದ್ದಾರೆ.
ಬಸಲಿಂಗಪ್ಪ (27), ಸುರೇಶ (23) ಹಾಗೂ ಮಾದೇಶ (20) ಬಂಧಿತ ಆರೋಪಿಗಳು
ಘಟನೆ ವಿವರ: ಮೇ.12 ರಂದು ಉಪನ್ಯಾಸಕ ಮಾನಪ್ಪ ಅವರು ಎರಡನೇ ಪತ್ನಿ ತವರೂರಾದ ಹಯ್ಯಾಳ(ಬಿ) ಗ್ರಾಮಕ್ಕೆ ತೆರಳುತ್ತಿರುವಾಗ ಮೊದಲನೇಯ ಪತ್ನಿ ಮಗ ಬಸಲಿಂಗಪ್ಪ ಮತ್ತು ಇನ್ನಿಬ್ಬರು ಸ್ನೇಹಿತರು ಸೇರಿ ಕೊಲೆ ಮಾಡಲಾಗಿತ್ತು. ಆರೋಪಿಗಳ ವಿಚಾರಣೆಯಿಂದ ಇದೀಗ ಆರೋಪಿಗಳು ತಪ್ಪು ಒಪ್ಪಿಕೊಂಡಿದ್ದಾರೆ. ಮೊದಲನೇಯ ಪತ್ನಿಗೆ ಮೂವರು ಮಕ್ಕಳಿದ್ದು, ಅವರನ್ನು ಉಪನ್ಯಾಸಕ ದೂರ ಇಟ್ಟಿದ್ದ ಎನ್ನಲಾಗಿದೆ.
ತನ್ನ ತಾಯಿ ಹಾಗು ತನನ್ನು ತಂದೆ 25 ವರ್ಷದಿಂದ ನಿರ್ಲಕ್ಷವಹಿಸಿದ್ದು, ಯಾವುದೇ ಸಹಾಯ ಸಹಕಾರ ನೀಡಿಲ್ಲ. ಮೊನ್ನೆ ಅಕ್ಕಳ ಮದುವೆಗೆ ಬಂಗಾರ ಕೊಡುವುದಾಗಿ ಹೇಳಿ ಕೊನೆಗಳಿಗೆಯಲ್ಲಿ ಅದು ಕೊಡಲಿಲ್ಲ. ಇದರಿಂದ ನಾವೆಲ್ಲ ಸಾಕಷ್ಟು ಮುಜುಗರ ಪಡುವಂತಾಯಿತು. ವಿದ್ಯಾಭ್ಯಾಸಕ್ಕಾಗಿ ಬದುಕಿಗಾಗಲಿ ಯಾವುದೇ ಸಹಾಯ ಮಾಡಿರಲಿಲ್ಲ ನಮ್ಮ ತಾಯಿ ನಮ್ಮನ್ನು ಈ ಮೊದಲಿಂದಲೂ ನಮ್ಮ ತಂದೆ ಮಾನಪ್ಪ ಸೇರುವುದಿಲ್ಲ. ಜೀವನಾಂಶವು ನಮ್ಮ ತಾಯಿಗೆ ನೀಡುತ್ತಿರಲಿಲ್ಲ ಎಂದು ವಿಚಾರಣೆಯಲ್ಲಿ ಪೊಲೀಸರ ಮುಂದೆ ಬಸಲಿಂಗಪ್ಪ ಹೇಳಿದ್ದಾನೆ.
ಯಶಸ್ವಿ ಕಾರ್ಯಾಚರಣೆ: ಆರೋಪಿಗಳ ಬಂಧಿಸುವಲ್ಲಿ ಯಶಸ್ವಿ ಕಾರ್ಯಾಚರಣೆ ನಡೆಸಿದ ಪೊಲೀಸ್ ತಂಡದ ಎಸ್ಪಿ ಡಾ.ವೇದಮೂರ್ತಿ ಮಾರ್ಗದರ್ಶನದಲ್ಲಿ ಉಪ ವಿಭಾಗದ ಉಪ ಅಧೀಕ್ಷಕ ಜೇಮ್ಸ್ ಮಿನೇಜಸ್ ನೇತೃತ್ವದಲ್ಲಿ ಪಿಐ ಶ್ರೀನಿವಾಸ ಅಲ್ಲಾಪುರ ಮತ್ತು ಪಿಎಸ್‍ಐ ಶಾಮಸುಂದರ ಹಾಗೂ ಕಾನ್ಸಟೇಬಲ್ ತಂಡ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಎಸ್ಪಿ ವೇದಮೂರ್ತಿ ತಿಳಿಸಿದ್ದಾರೆ.