Advertisement
ಭಾರೀ ಭರವಸೆಯೊಂದಿಗೆ “ಧೋನಿ ಉತ್ತರಾಧಿಕಾರಿ’ ಎಂಬ ಹೆಗ್ಗಳಿಕೆಯೊಂದಿಗೆ ಟೀಮ್ ಇಂಡಿಯಾ ಪ್ರವೇಶಿಸಿದ 21ರ ಹರೆಯದ ರಿಷಭ್ ಪಂತ್, ಮೊದಲ ಆಯ್ಕೆಯ ಕೀಪರ್ ಆಗಿಯೇ ಗುರುತಿಸಿಕೊಂಡಿದ್ದರು. ಆದರೆ ಅವರು ಆಯ್ಕೆಗಾರರು ಇರಿಸಿದ ನಂಬಿಕೆಯನ್ನು ನಿಧಾನವಾಗಿ ಕಳೆದುಕೊಳ್ಳುತ್ತಿದ್ದಾರೆ ಎಂಬುದಕ್ಕೆ ಇತ್ತೀಚಿನ ನಿರ್ವಹಣೆಯೇ ಸಾಕ್ಷಿ.
Related Articles
ಕೀಪಿಂಗ್‌ನಲ್ಲೂ ಪಂತ್ ಫೇಲ್
“ಪಂತ್ ಬ್ಯಾಟಿಂಗ್‌ನಲ್ಲಿ ವಿಫಲರಾಗುತ್ತಿದ್ದಾರೆ ಎಂಬುದನ್ನು ಹೇಗೂ ಸಹಿಸಿಕೊಳ್ಳಬಹುದು. ಆದರೆ ಪ್ರಮುಖ ಹೊಣೆಗಾರಿಕೆಯಾದ ಕೀಪಿಂಗ್‌ನಲ್ಲೂ ಅವರು ಯಶಸ್ಸು ಕಾಣದಿರುವುದನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಭಾರತದ ಟರ್ನಿಂಗ್ ಟ್ರ್ಯಾಕ್‌ಗಳಲ್ಲೇ ಪಂತ್ ಪರದಾಡುತ್ತಿದ್ದಾರೆ. ಡಿಆರ್‌ಎಸ್ ರಿವ್ಯೂಗಳೂ ಪರಿಣಾಮಕಾರಿ ಯಾಗಿಲ್ಲ.ಇವರಿಗಿಂತ ಸಾಹಾ ಅವರೇ ಎಷ್ಟೋ ಉತ್ತಮ ಕೀಪರ್. ಕೆಳ ಕ್ರಮಾಂಕದಲ್ಲಿ ಉಪಯುಕ್ತ ರನ್ ಕೂಡ ಗಳಿಸುತ್ತಾರೆ…’ ಎಂಬುದು ಬಿಸಿಸಿಐ ಅಧಿಕಾರಿಯೊಬ್ಬರ ಹೇಳಿಕೆ. ಈ ಬೆಳವಣಿಗೆಯನ್ನೆಲ್ಲ ಗಮನಿ ಸುವಾಗ ರಿಷಭ್ ಪಂತ್ ಅವರನ್ನು ಕೇವಲ ಸೀಮಿತ ಓವರ್‌ಗಳ ಪಂದ್ಯಗಳಲ್ಲಷ್ಟೇ ಆಡಿಸುವ ಸಾಧ್ಯತೆಯೊಂದು ಕಂಡುಬರುತ್ತದೆ. ಅವರದು ಹೊಡಿ-ಬಡಿ ಬ್ಯಾಟಿಂಗ್ ಶೈಲಿ ಆಗಿರುವುದೂ ಇದಕ್ಕೊಂದು ಕಾರಣ.
Advertisement
ಬ್ಯಾಟಿಂಗ್ ಜತೆಗೆ ಕೀಪಿಂಗ್‌ನಲ್ಲೂ ಸಾಮಾನ್ಯ ಮಟ್ಟದ ನಿರ್ವಹಣೆಮಾಜಿಗಳಿಂದ ಎಚ್ಚರಿಕೆ, ಮಾರ್ಗದರ್ಶನ
ರಿಷಭ್ ಪಂತ್ ಅಂತಾರಾಷ್ಟ್ರೀಯ ಕ್ರಿಕೆಟನ್ನು ಹೆಚ್ಚು ಗಂಭೀರವಾಗಿ ತೆಗೆದುಕೊಳ್ಳಬೇಕು, ಬದ್ಧತೆ ಪ್ರದರ್ಶಿಸಬೇಕು ಎಂದು ಮಾಜಿ ಕ್ರಿಕೆಟಿಗರನೇಕರು ಸಲಹೆ ನೀಡಿದ್ದನ್ನು, ಎಚ್ಚರಿಕೆ ಕೊಟ್ಟಿದ್ದನ್ನು ಇಲ್ಲಿ ಉಲ್ಲೇಖೀಸಬೇಕಾಗುತ್ತದೆ. ಮುಖ್ಯವಾಗಿ, ದಿಲ್ಲಿಯವರೇ ಆದ ಮಾಜಿ ಆರಂಭಕಾರ ಸೆಹವಾಗ್ ತಮ್ಮದೇ ಉದಾಹರಣೆ ನೀಡಿ ಪಂತ್‌ಗೆ ಬೆಂಬಲ ನೀಡಿದ್ದಾರೆ. “ನಾನು ಕೂಡ ಭಾರತ ತಂಡವನ್ನು ಪ್ರವೇಶಿಸಿದ ಆರಂಭದ ದಿನಗಳಲ್ಲಿ ಇದೇ ರೀತಿ ಆಡಿ ವಿಕೆಟ್ ಕೈಚೆಲ್ಲುತ್ತಿದ್ದೆ. ಧೋನಿ ಕೂಡ ಆರಂಭಿಕ ದಿನಗಳಲ್ಲಿ ನಿರೀಕ್ಷಿತ ಯಶಸ್ಸು ಕಂಡವರಲ್ಲ. ಪಳಗಿದ ಬಳಿಕವಷ್ಟೇ ಅವರು ಬೆಸ್ಟ್ ಫಿನಿಶರ್ ಎನಿಸಿಕೊಂಡರು. ನಾನು ಸ್ಫೋಟಕ ಆಟಕ್ಕೆ ಕುದುರಿಕೊಂಡೆ. ಆದ್ದರಿಂದ ಪಂತ್ ಅವರಿಗೆ ಇನ್ನಷ್ಟು ಅವಕಾಶ ನೀಡಬೇಕು ಹಾಗೂ ಅವರು ಇದರ ಪ್ರಯೋಜನ ಎತ್ತಬೇಕು’ ಎಂದಿದ್ದಾರೆ ಸೆಹವಾಗ್. ಸುನೀಲ್ ಗಾವಸ್ಕರ್ ಕೂಡ ಪಂತ್ ಪರ ಬ್ಯಾಟ್ ಬೀಸಿದ್ದಾರೆ. ಹುಡುಗಾಟಿಕೆ ಬಿಟ್ಟು ಗಂಭೀರವಾಗಿ ಆಡಬೇಕು ಎಂದು ಪಂತ್‌ಗೆ ಎಚ್ಚರಿಕೆ ನೀಡಿದವರಲ್ಲಿ ಕೋಚ್ ರವಿಶಾಸ್ತ್ರೀ ಪ್ರಮುಖರು. ಜತೆಗೆ ಪಂತ್ ವಿಶ್ವ ದರ್ಜೆಯ ಆಟಗಾರ ಎಂದೂ ಸರ್ಟಿಫಿಕೇಟ್ ಕೊಟ್ಟಿದ್ದಾರೆ.