Advertisement

Indian Navy: ನೌಕಾಪಡೆಗೆ ಸೇರಲಿದೆ “ಸಾಗರದಾಳದ ಸಾರೋಟು”?

09:32 PM Dec 10, 2023 | Team Udayavani |

ನವದೆಹಲಿ: ಸದ್ಯದಲ್ಲೇ ದೇಶದ ನೌಕಾಪಡೆಗೆ “ಸಾಗರದಾಳದ ಸಾರೋಟು” ಎಂದು ಕರೆಯಲ್ಪಡುವ ಮಧ್ಯಮ ಗಾತ್ರದ ಜಲಾಂತರ್ಗಾಮಿಗಳು (ಮಿಡ್‌ಜೆಟ್‌ ಸಬ್‌ಮರೀನ್‌) ಸೇರ್ಪಡೆಯಾಗಲಿದೆ. ಸಮುದ್ರದಾಳದ ವಿಶೇಷ ಕಾರ್ಯಾಚರಣೆಗೆ ನೌಕಾ ಕಮಾಂಡೋ (ಮಾರ್ಕೋಸ್‌)ಗಳ ಸಾಮರ್ಥ್ಯವನ್ನು ಹೆಚ್ಚಿಸುವ ಮತ್ತು ಅವರಿಗೆ ಅತ್ಯಾಧುನಿಕ ವ್ಯವಸ್ಥೆಗಳನ್ನು ಕಲ್ಪಿಸುವ ಉದ್ದೇಶದಿಂದ ನೌಕಾಪಡೆಯು ದೇಶೀಯವಾಗಿ ಅಭಿವೃದ್ಧಿಪಡಿಸಲಾದ ಮಧ್ಯಮಗಾತ್ರದ ಜಲಾಂತರ್ಗಾಮಿಗಳನ್ನು ಖರೀದಿಸಲು ಚಿಂತನೆ ನಡೆಸಿದೆ.

Advertisement

ಇವುಗಳು ಲೀಥಿಯಂ-ಅಯಾನ್‌ ಬ್ಯಾಟರಿ ಚಾಲಿತ ಸಬ್‌ಮರೀನ್‌ಗಳಾಗಿದ್ದು, ಕನಿಷ್ಠ 6 ಮಂದಿ ಸಿಬ್ಬಂದಿಯನ್ನು ಹೊತ್ತೂಯ್ಯುವ ಸಾಮರ್ಥ್ಯ ಹೊಂದಿರುತ್ತವೆ. ಇವುಗಳು ಮಧ್ಯಮ ಗಾತ್ರದ ಜಲಾಂತರ್ಗಾಮಿಗಳಾದ ಕಾರಣ, ಡೈವರ್‌ಗಳು ದೊಡ್ಡ ಗಾತ್ರದ ಸಿಲಿಂಡರ್‌ಗಳನ್ನು ಅದರಲ್ಲಿ ಒಯ್ಯಬಹುದು. ಇದರಿಂದ ಅವರು ದೀರ್ಘ‌ ಅವಧಿಗೆ ಸಮುದ್ರದಾಳದಲ್ಲಿ ಉಳಿಯಲು ಸಹಾಯಕವಾಗಲಿದೆ. ಅದೇ ರೀತಿ, ವಿವಿಧ ಕಾರ್ಯಾಚರಣೆಗಳಿಗಾಗಿ ಹೆಚ್ಚುವರಿ ಶಸ್ತ್ರಾಸ್ತ್ರಗಳನ್ನೂ ಒಯ್ಯಬಹುದಾಗಿದೆ.

ಇಂಥ ಅತ್ಯಾಧುನಿಕ ಸಾರೋಟುಗಳನ್ನು ಜಗತ್ತಿನ ಬಹುತೇಕ ಎಲ್ಲ ಸುಧಾರಿತ ನೌಕಾಪಡೆಗಳು ಬಳಸುತ್ತಿವೆ. ನೀರೊಳಗಿನ ಕಣ್ಗಾವಲು, ಶತ್ರುಗಳ ಕರಾವಳಿ ಪ್ರದೇಶಗಳ ಮೇಲೆ ದಾಳಿ, ಬಂದರುಗಳಲ್ಲಿರುವ ಶತ್ರು ನೌಕೆಗಳ ಮೇಲೆ ದಾಳಿಗೂ ಇವುಗಳನ್ನು ಬಳಸಬಹುದು ಎಂದು ರಕ್ಷಣಾ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next