Advertisement

ಇಷ್ಟದ ಕೆಲಸದಿಂದ ಯಶಸ್ಸು: ನಂಜುಂಡಸ್ವಾಮಿ

07:13 PM Jan 23, 2021 | Team Udayavani |

ಸಾಗರ: ನಾವು ಮಾಡುವ ಕೆಲಸ ಇಷ್ಟವಾಗಿದ್ದರೆ ಯಶಸ್ಸು ಗಳಿಸಲು ಯಾವುದೂ ಕಷ್ಟವಾಗುವುದಿಲ್ಲ ಎಂದು ಆರೋಗ್ಯ ಇಲಾಖೆ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಮ.ಸ. ನಂಜುಂಡಸ್ವಾಮಿ ಹೇಳಿದರು.

Advertisement

ಸಂಘಟನೆ ಪ್ರವಾಸದ ನಿಮಿತ್ತ ಕಾರವಾರಕ್ಕೆ ತೆರಳುವ ಸಂದರ್ಭದಲ್ಲಿ ಆಗಮಿಸಿದ್ದ ಜಿಲ್ಲಾ ಸರ್ಕಾರಿ ಫಾರ್ಮಸಿ ಅಧಿ ಕಾರಿಗಳ ಸಂಘದ ಅಧ್ಯಕ್ಷ ವಿ. ಪ್ರಭಾಕರ್‌, ಸರ್ಕಾರಿ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಐ.ಪಿ. ಶಾಂತರಾಜು ಹಾಗೂ ಜಿಲ್ಲಾ ಸರ್ಕಾರಿ ಫಾರ್ಮಸಿ ಅಧಿ ಕಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಬೋರಯ್ಯ ಅವರನ್ನು ಅಭಿನಂದಿಸಿ ಮಾತನಾಡಿದ ಅವರು, ಇಚ್ಛಾಶಕ್ತಿ ಇದ್ದರೆ ಏನನ್ನೂ ಸಾಧಿ ಸಬಹುದು ಎಂದರು.

ಕೊರೊನಾ ಹಾಗೂ ಇತರ ಸಂದರ್ಭದಲ್ಲಿ ನೊಂದವರ ಪಾಲಿಗೆ ಸಂಜೀವಿನಿಯಾಗಿರುವ ಈ ಮೂವರು ಕೆಲವು ತಿಂಗಳ ಹಿಂದೆ ಹಾವು ಕಚ್ಚಿ ಶಿವಮೊಗ್ಗದ ತೀವ್ರ ನಿಗಾ ಘಟಕದಲ್ಲಿದ್ದ ಸಾಗರದ ಕಂಪ್ಯೂಟರ್‌ ಆಪರೇಟರ್‌ ಪ್ರತಿಭಾ ಅವರನ್ನು ಉಳಿಸಲು ಹರಸಾಹಸ ಮಾಡಿದ್ದರು. ಬೇರೆ ಕಡೆಯಾಗಿದ್ದರೆ ಹತ್ತಾರು ಲಕ್ಷ ರೂ. ಖರ್ಚಾಗುತ್ತಿತ್ತು. ಫಾರ್ಮಾಸಿಸ್ಟ್‌ ಅಸೋಸಿಯೇಶನ್‌ನಿಂದ ಆರ್ಥಿಕ ನೆರವನ್ನೂ ನೀಡಿ ಮಾನವೀಯತೆ ಮೆರೆದಿದ್ದಾರೆ.ಇಂಥವರ ಕಳಕಳಿ ನಮಗೆ ಆದರ್ಶಪ್ರಾಯವಾಗಿದೆ. ಒಳ್ಳೆಯ ಕೆಲಸ ಮಾಡಿದವರನ್ನು ಗುರುತಿಸಿ ಅಭಿನಂದಿಸಬೇಕು ಎಂದರು.

ಅಭಿನಂದನೆ ಸ್ವೀಕರಿಸಿದ ವಿ.ಪ್ರಭಾಕರ್‌ ಮಾತನಾಡಿ, ಸರ್ಕಾರಿ ನೌಕರರಾಗಿ ಹೇಗೆ ಕೆಲಸ ಮಾಡಬೇಕೆಂದು ನಂಜುಂಡಸ್ವಾಮಿಯವರು ನಮಗೆ ಸಲಹೆ ನೀಡುತ್ತಿರುತ್ತಾರೆ. ಸಂಘಟನೆಯಲ್ಲೂ ಅವರು ಅನುಕರಣೀಯರಾಗಿದ್ದಾರೆ. ಎಲ್ಲ ಹಂತದಲ್ಲೂ ವ್ಯಕ್ತಿಯನ್ನು, ಸಂಘವನ್ನು ಬೆಳೆಸುವ ವರ್ಚಸ್ಸು ಅವರಿಗಿದೆ. ಜೊತೆಗಿದ್ದವರನ್ನು ಅವರ ಪ್ರತಿಭೆ ಗುರುತಿಸಿ ತಮ್ಮ ಜೊತೆ ಬೆಳೆಸುತ್ತಾರೆ. ನಮಗೆಲ್ಲ ಅವರು ಗುರುವಿನ ರೀತಿಯಲ್ಲಿ ಮಾರ್ಗದರ್ಶನ ನೀಡುತ್ತಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ಸತತ 55ನೇ ರುದ್ರ ಪಾರಾಯಣ ಮುಗಿಸಿರುವ ವೈದಿಕ ಪರಿಷತ್ತಿನ ಪುರೋಹಿತರಾದ ಗೋಪಾಲಕೃಷ್ಣ ಭಟ್ಟ, ನವೀನ್‌ ಜೋಯ್ಸ, ದರ್ಶನ ಭಟ್ಟ ಅವರು ಅಭಿನಂದಿತರನ್ನು ಆಶೀರ್ವದಿಸಿದರು.

Advertisement

ತಾಲೂಕು ಕಸಾಪ ಅಧ್ಯಕ್ಷ ಎಸ್‌.ವಿ. ಹಿತಕರ ಜೈನ್‌, ಬೆಂಗಳೂರು ಸರ್ಕಾರಿ ಫಾರ್ಮಸಿ ಅ ಧಿಕಾರಿಗಳ ಸಂಘದ ಉಪಾಧ್ಯಕ್ಷ ವೈ. ಮೋಹನ್‌, ಶುಶ್ರೂಷಕ ಅಧಿ ಕಾರಿ ಜುಬೇದ ಅಲಿ, ಉಪ ವಿಭಾಗೀಯ ಆಸ್ಪತ್ರೆಯ ರಾಜು ಈಳಿಗೇರ್‌, ಆರ್‌.ಎನ್‌. ರವಿ, ಪ್ರಾಧ್ಯಾಪಕ ಎಲ್‌.ಎಂ. ಹೆಗಡೆ, ವಿಪ್ರ ನೌಕರರ ಸಂಘದ ಬದ್ರಿನಾಥ್‌, ಸಂತೋಷ್‌, ರವಿ ಮತ್ತಿತರರು ಇದ್ದರು.

ಇದನ್ನೂ ಓದಿ··“ನಾರಾಯಣಗುರುಗಳ ಜೀವನ ಶೈಲಿ ನಮಗೆಲ್ಲ ಮಾದರಿ”

Advertisement

Udayavani is now on Telegram. Click here to join our channel and stay updated with the latest news.

Next