Advertisement

ಕ್ಯಾಂಟೀನ್‌ ರಾಮಣ ತರಕಾರಿ ವ್ಯಾಪಾರಿ!

03:07 PM Apr 18, 2020 | Naveen |

ಸಾಗರ: ನಗರದ ಕೋರ್ಟ್‌ ರಸ್ತೆಯಲ್ಲಿ ಕ್ಯಾಂಟೀನ್‌ ಮಾಡಿಕೊಂಡಿರುವ ರಾಮಣ್ಣ ಕೊರೊನಾ ದಾಳಿಗೆ ಮುನ್ನ ಬಿಡುವಿಲ್ಲದ ಹೋಟೆಲ್‌ ಉದ್ಯಮಿ. ಎಸಿ ಕಚೇರಿ, ತಾಲೂಕು ಪಂಚಾಯ್ತಿ, ನ್ಯಾಯಾಲಯ, ನರ್ಸಿಂಗ್‌ ಹೋಂ, ಮುಖ್ಯ ಪೋಸ್ಟ್‌ ಆಫೀಸ್‌, ಗಣಪತಿ ಬ್ಯಾಂಕ್‌ ಸೇರಿದಂತೆ ಜನನಿಬಿಡ ರಸ್ತೆಯ ಈ ಕ್ಯಾಂಟೀನ್‌ ಬೈಟು ಟೀ, ಪಕೋಡ ತಿನ್ನುವವರ ಹಾಟ್‌ ಸ್ಪಾಟ್‌ ಆಗಿತ್ತು.

Advertisement

ಇದಕ್ಕಿದ್ದಂತೆ ಕೊರೊನಾ ಹಾಟ್‌ಸ್ಪಾಟ್‌ ಆಗಬಾರದೆಂಬ ಕಾರಣಕ್ಕೆ ಸರ್ಕಾರದ ಆದೇಶದಂತೆ ರಾಮಣ್ಣನ ಕ್ಯಾಂಟೀನ್‌ ಬಂದ್‌. ಈಗ ಅದೇ ಕ್ಯಾಂಟೀನ್‌ ರಾಮಣ್ಣ ತರಕಾರಿ ವ್ಯಾಪಾರಕ್ಕಿಳಿದಿದ್ದಾರೆ. ನಗರದ ಜೋಗ್‌ ರಸ್ತೆಯ ಖಾಸಗಿ ಬಸ್‌ ನಿಲ್ದಾಣದಲ್ಲಿ ಅಂಗಡಿ ಹಾಕಿರುವ ಅವರು, ಲಾಕ್‌ಡೌನ್‌ ಪರಿಣಾಮ ಕುಟುಂಬ ನಿರ್ವಹಣೆಗೆ ತರಕಾರಿ ವ್ಯಾಪಾರದ ಮಾರ್ಗ ಕಂಡುಕೊಂಡಿದ್ದಾರೆ.

ಇದರಿಂದ ಬರುವ ತುಸು ಆದಾಯವೇ ಸದ್ಯಕ್ಕೆ ಸಾಕು. ಮನೆಯಲ್ಲಿ ಸುಮ್ಮನೆ ಕೂರುವ ಬದಲಿಗೆ ಹೀಗಾದರೂ ಮಾಡಿ ಬದುಕೋಣ ಎಂಬ ನಿಲುವು ಅವರದ್ದು.

Advertisement

Udayavani is now on Telegram. Click here to join our channel and stay updated with the latest news.

Next