Advertisement

Temple; ಸಾಗರದಲ್ಲೊಂದು ವಿಶಿಷ್ಟ ಯೋಜನೆ; ಬೇಡದ ದೇವರ ಫೋಟೋಗಳಿಗೊಂದು ಹುಂಡಿ!

08:21 PM Sep 12, 2023 | Shreeram Nayak |

ಸಾಗರ: ಮನೆಯಲ್ಲಿ ಭಿನ್ನಗೊಂಡ, ಗಾಜು ಒಡೆದ, ಬೇಡದ ದೇವರ ಫೋಟೋಗಳನ್ನು ಅರಳಿ ಮರದ ಬುಡದಲ್ಲಿ, ಕೆರೆಗಳಲ್ಲಿ ಹಾಕುವುದು ನಮ್ಮಲ್ಲಿ ಸಂಪ್ರದಾಯವೇ ಆಗಿ ಜನರಿಗೆ ಸಮಸ್ಯೆಯಾಗಿರುವಾಗ ನಗರದ ಆನಂದ ಸಾಗರ ಟ್ರಸ್ಟ್ ಮತ್ತು ನೆರವಿನ ಕೈಗಳು ಟ್ರಸ್ಟ್ ಜಂಟಿಯಾಗಿ ವಿನೂತನವಾದ ಯೋಜನೆಯೊಂದನ್ನು ರೂಪಿಸಿದೆ.

Advertisement

ಇದೀಗ ನಗರದ ಮೂರು ದೇವಸ್ಥಾನಗಳ ಆವರಣದಲ್ಲಿ ಈ ತರಹದ ಫೋಟೋಗಳ ವಿಸರ್ಜನೆಗಾಗಿಯೇ ವಿಶೇಷ ಹುಂಡಿಯೊಂದನ್ನು ಸ್ಥಾಪಿಸಿವೆ.

ನಗರದ ಶಿವಪ್ಪ ನಾಯಕ ನಗರದಲ್ಲಿರುವ ಶ್ರೀರಾಮ ದೇವಸ್ಥಾನ, ಸೊರಬ ರಸ್ತೆಯಲ್ಲಿರುವ ದುರ್ಗಾಂಬಾ ದೇವಸ್ಥಾನದ ಎದುರಿನ ಮೈಲಾರೇಶ್ವರ ದೇವಸ್ಥಾನ ಹಾಗೂ ಶ್ರೀರಾಂಪುರ ಬಡಾವಣೆಯಲ್ಲಿರುವ ಲಕ್ಷ್ಮೀವೆಂಕಟರಮಣ ದೇವಸ್ಥಾನಗಳಲ್ಲಿ ತಲಾ ಒಂದು ಹುಂಡಿಯನ್ನು ಇಟ್ಟಿದ್ದು ಅದರಲ್ಲಿ ಸಾರ್ವಜನಿಕರು ತಮ್ಮ ಮನೆಯಲ್ಲಿರುವ ಹಳೆಯ, ಭಿನ್ನಗೊಂಡ ಮತ್ತು ಪೂಜೆಗೆ ಅರ್ಹವಲ್ಲದ ದೇವರ ಫೋಟೋಗಳನ್ನು ಹಾಕಲು ವಿನಂತಿಸಲಾಗಿದೆ.

ದೇವರ ಫೋಟೋಗಳನ್ನು ಅರಳಿಕಟ್ಟೆ, ಕೆರೆ ಮತ್ತು ನದಿಗಳಲ್ಲಿ ಹರಿಯ ಬಿಟ್ಟು ಪರಿಸರ ಹಾಳುಮಾಡುವ ಬದಲು ಈ ಹುಂಡಿಗಳಲ್ಲಿ ಹಾಕುವ ಸಂಪ್ರದಾಯ ಬೆಳೆಯಬೇಕಿದೆ. ಪ್ರತಿ ವಾರಕೊಮ್ಮೆ ಟ್ರಸ್ಟ್ ವತಿಯಿಂದ ಹುಂಡಿಯಲ್ಲಿ ಹಾಕಿದ ಫೋಟೋಗಳನ್ನು ಸಂಗ್ರಹಿಸಿ ಸಮರ್ಪಕವಾಗಿ ವಿಸರ್ಜಿಸುವ ಭರವಸೆಯನ್ನು ಈ ಸಂಘಟನೆಗಳು ನೀಡಿವೆ.

Advertisement

Udayavani is now on Telegram. Click here to join our channel and stay updated with the latest news.

Next