Advertisement

ಬೇಸಿಗೆ ಶಿಬಿರಗಳಿಂದ ಮಕ್ಕಳಿಗೆ ಅಜ್ಜಿಮನೆ ನೆನಪು: ಸಂತೋಷ್‌

05:29 PM Apr 27, 2019 | Team Udayavani |

ಸಾಗರ: ಅಜ್ಜಿಮನೆ ಸಂಸ್ಕೃತಿ ದೂರವಾಗುತ್ತಿರುವ ದಿನಗಳಲ್ಲಿ ಬೇಸಿಗೆ ಶಿಬಿರಗಳು ಮಕ್ಕಳಿಗೆ ಅಜ್ಜಿಮನೆ ನೆನಪು ಹಾಗೂ ಹೊಸ ವಿಷಯಗಳನ್ನು ಕಲಿತುಕೊಳ್ಳಲು ಅವಕಾಶ ಕಲ್ಪಿಸುತ್ತಿವೆ ಎಂದು ನಗರಸಭೆ ಮಾಜಿ ಸದಸ್ಯ ಸಂತೋಷ್‌ ಆರ್‌. ಶೇಟ್ ತಿಳಿಸಿದರು.

Advertisement

ನಗರದ ಪ್ರಜ್ವಲ್ ಅಬಾಕಸ್‌ ಸಂಸ್ಥೆ ವತಿಯಿಂದ ಹಮ್ಮಿಕೊಳ್ಳಲಾಗಿರುವ ಒಂದು ತಿಂಗಳ ಬೇಸಿಗೆ ರಜೆ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ದೊಡ್ಡವರು ಸಂಸ್ಕೃತಿ, ಸಂಸ್ಕಾರವನ್ನು ಮೀರಿ ನಡೆಯುತ್ತಿದ್ದಾರೆ. ಆದರೆ ಭವಿಷ್ಯ ಭಾರತದ ಪ್ರಜೆಗಳಾಗಿರುವ ಮಕ್ಕಳಲ್ಲಿ ನಮ್ಮ ಸಂಸ್ಕೃತಿ, ಪರಂಪರೆಯ ಶ್ರೇಷ್ಠತೆಯನ್ನು ಬಿತ್ತುವ ಕೆಲಸವಾಗಬೇಕು. ಕೇವಲ ನಾಲ್ಕು ಗೋಡೆ ನಡುವಿನ ಕಲಿಕೆಯಿಂದ ಮಕ್ಕಳ ಪರಿಪೂರ್ಣ ಅಭಿವೃದ್ಧಿ ಸಾಧ್ಯವಾಗುವುದಿಲ್ಲ. ಬೇಸಿಗೆ ರಜೆ ಸಂದರ್ಭದಲ್ಲಿ ಇಂತಹ ಶಿಬಿರಗಳಲ್ಲಿ ಪಾಲ್ಗೊಳ್ಳುವುದರಿಂದ ಮಕ್ಕಳ ಮನಸ್ಸು ವಿಕಸನಗೊಳ್ಳುತ್ತದೆ ಎಂದರು.

ಈಗಿನ ಮಕ್ಕಳು ಬಾಲ್ಯದಲ್ಲಿಯೇ ಮೊಬೈಲ್ನತ್ತ ಹೆಚ್ಚು ಆಸಕ್ತಿಯನ್ನು ತೋರಿಸುತ್ತಾರೆ. ದೊಡ್ಡವರಿಗಿಂತ ಮಕ್ಕಳ ಮೊಬೈಲ್ನಲ್ಲಿರುವ ಎಲ್ಲ ಆ್ಯಪ್‌ಗ್ಳನ್ನು ಕಂಡುಹಿಡಿದು ಉಪಯೋಗಿಸುತ್ತಾರೆ. ಮೊಬೈಲ್ ಬಳಕೆಯಿಂದ ಮಕ್ಕಳ ಮನಸ್ಸು ಅರಳುವ ಬದಲು ವಿಕಾರಗೊಳ್ಳುತ್ತದೆ. ರಜೆ ಸಂದರ್ಭದಲ್ಲಿ ನಡೆಸುವ ಶಿಬಿರಗಳಲ್ಲಿ ಮಕ್ಕಳು ಪಾಲ್ಗೊಂಡಾಗ ಅವರು ಕಲೆ, ಸಂಸ್ಕೃತಿ, ಸಾಹಿತ್ಯದ ಜೊತೆಗೆ ಚಿತ್ರಕಲೆ, ಬರವಣಿಗೆ, ಇಂಗ್ಲಿಷ್‌ ಸಂವಹನ ಕಲಿತು ಭವಿಷ್ಯದ ಸವಾಲಿಗೆ ಸಜ್ಜಾಗಲು ಸಾಧ್ಯವಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ‌ ಸಂಸ್ಥೆಯ ಅಧ್ಯಕ್ಷ ಮಾರುತಿ ಎಚ್. ಮಾತನಾಡಿ, ನಮ್ಮ ಸಂಸ್ಥೆ ವತಿಯಿಂದ ಮಕ್ಕಳ ಬೇಸಿಗೆ ರಜೆ ವ್ಯರ್ಥವಾಗಬಾರದು ಎನ್ನುವ ಉದ್ದೇಶದಿಂದ ಪ್ರತಿವರ್ಷ ಬೇಸಿಗೆ ರಜೆ ಶಿಬಿರವನ್ನು ನಡೆಸಿಕೊಂಡು ಬರಲಾಗುತ್ತಿದೆ. ಇದರ ಜೊತೆಗೆ ಸಿಇಟಿ ಕೋಚಿಂಗ್‌ ಕ್ಯಾಂಪ್‌, ಐಸಿಐಸಿಐ ಸಿಲಬಸ್‌, ಕೆ.ಎ.ಎಸ್‌., ಐ.ಎ.ಎಸ್‌. ತರಬೇತಿ ಶಿಬಿರಗಳನ್ನು ಸಹ ಬೇಸಿಗೆ ರಜೆ ಅಂಗವಾಗಿ ನಡೆಸಿಕೊಂಡು ಬರಲಾಗುತ್ತಿದೆ. ನಮ್ಮೂರಿನ ಮಕ್ಕಳು ದೊಡ್ಡದೊಡ್ಡ ನಗರಗಳ ಮಕ್ಕಳ ಜೊತೆಗೆ ಸ್ಪರ್ಧೆಯೊಡ್ಡಲು ಬೇಕಾದ ಮನೋಭೂಮಿಕೆ ಸಿದ್ಧಪಡಿಸುವುದು ನಮ್ಮ ಉದ್ದೇಶವಾಗಿದೆ ಎಂದು ತಿಳಿಸಿದರು.

ಉದ್ಯಮಿ ಸುಬ್ರಹ್ಮಣ್ಯ ಜಿಂಗಾಡೆ, ಭಾರತಿ ಇನ್ನಿತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next