Advertisement

ಸಾಗರ: ಭಾರಿ ಮಳೆಗೆ ಕುಸಿದು ಬಿದ್ದ ಶಾಲೆಯ ಕಾಂಪೌಂಡ್: ತಪ್ಪಿದ ಅನಾಹುತ

03:41 PM Jul 06, 2023 | Team Udayavani |

ಸಾಗರ: ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ನೆಹರೂ ನಗರದಲ್ಲಿರುವ ಅರಳಿಕಟ್ಟೆ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಕಾಂಪೌಂಡ್ ಗುರುವಾರ ಕುಸಿದು ಬಿದ್ದಿದ್ದು ಯಾವುದೇ ವಿದ್ಯಾರ್ಥಿಗಳಿಗೆ ತೊಂದರೆಯಾಗಿಲ್ಲ.

Advertisement

ಹದಿನೈದು ದಿನಗಳ ಹಿಂದೆ ಶಾಲೆಯ ಮೇಲ್ಛಾವಣಿ ಕುಸಿದು ಬಿದ್ದಿತ್ತು. ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಸೇರಿದಂತೆ ಶಿಕ್ಷಣ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ಸಂದರ್ಭದಲ್ಲಿ ಪೋಷಕರು ಶಾಲೆಯ ದುಸ್ಥಿತಿ ಬಗ್ಗೆ ಅಧಿಕಾರಿಗಳಿಗೆ ಮನವಿ ಮಾಡಿದ್ದರು.

ಪೋಷಕರು, ಶಾಲಾಭಿವೃದ್ಧಿ ಸಮಿತಿ ಅಧಿಕಾರಿಗಳಿಗೆ ಮನವಿ ಮಾಡಿದ್ದಾಗ್ಯೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಗುರುವಾರ ಶಾಲೆಯ ಕಾಂಪೌಂಡ್ ಕುಸಿದು ಬಿದ್ದಿದ್ದು, ಅಧಿಕಾರಿಗಳ ನಿರ್ಲಕ್ಷ್ಯತನಕ್ಕೆ ಸ್ಥಳೀಯ ನಗರಸಭೆ ಸದಸ್ಯ ಸೈಯದ್ ಜಾಕೀರ್, ಶಾಲಾಭಿವೃದ್ಧಿ ಸಮಿತಿ ರಶೀದ್, ಅಕ್ಬರ್ ಖಾನ್ ಇನ್ನಿತರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ವಿಹಿಂಪ ಹಿರಿಯ ಮುಖಂಡ ಕೇಶವ ಹೆಗಡೆ ವಿಧಿವಶ: ಸಹಸ್ರಾರು ಜನರ ನಡುವೆ ಅಂತಿಮ‌ ನಮನ

Advertisement

Udayavani is now on Telegram. Click here to join our channel and stay updated with the latest news.

Next