Advertisement

ಕಲಾವಿದ- ಸಂಘಟಕ ಆಗುವುದು ಕಷ್ಟ: ಡಾ|ಜಿ.ಎಸ್‌. ಭಟ್‌

11:45 AM Dec 30, 2019 | Naveen |

ಸಾಗರ: ಪ್ರಾದೇಶಿಕ ರಂಗಭೂಮಿ ಮತ್ತು ರಾಷ್ಟ್ರೀಯ ರಂಗಭೂಮಿ ಸಮ್ಮಿಲನವೇ ನಾಟ್ಯ ತರಂಗದ ಸಂಸ್ಕೃತಿ ಸಪ್ತಾಹ ಎಂದು ನಿವೃತ್ತ ಪ್ರಾಚಾರ್ಯ, ಯಕ್ಷಗಾನ ವಿದ್ವಾಂಸ ಡಾ| ಜಿ.ಎಸ್‌. ಭಟ್‌ ತಿಳಿಸಿದರು.

Advertisement

ನಗರದ ಶ್ರೀನಗರದ ನಾಟ್ಯತರಂಗ ಸಂಸ್ಥೆ ನೃತ್ಯ ಭಾಸ್ಕರ ಸಭಾಂಗಣದಲ್ಲಿ ಆಯೋಜಿಸಿರುವ ರಾಷ್ಟ್ರೀಯ ಸಂಸ್ಕೃತಿ ಸಪ್ತಾಹ ಕಾರ್ಯಕ್ರಮದಲ್ಲಿ ಅವರು ಸಭಾ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.

ಇಂದಿನ ದಿನಗಳಲ್ಲಿ ಕಲಾವಿದ ಮತ್ತು ಸಂಘಟಕ ಆಗುವುದು ಕಷ್ಟ. ಆದರೆ ನಾಟ್ಯತರಂಗದ ಸಂಚಾಲಕ ವಿದ್ವಾನ್‌ ಜಿ.ಬಿ. ಜನಾರ್ದನ್‌ ಕಲಾವಿದನಾಗಿ, ಸಂಘಟಕನಾಗಿ ಎರಡೂ ಜವಾಬ್ದಾರಿಯನ್ನು ಅತ್ಯಂತ ಆಸಕ್ತಿಯಿಂದ ನಿರ್ವಹಿಸಿಕೊಂಡು ಬರುತ್ತಿದ್ದಾರೆ. ಇವರಲ್ಲಿ ಕಲಿತ ವಿದ್ಯಾರ್ಥಿಗಳು ದೊಡ್ಡ ವೇದಿಕೆಯಲ್ಲಿ ಸಹ ಕಾರ್ಯಕ್ರಮ ನೀಡುವಷ್ಟು ಪ್ರಾವೀಣ್ಯತೆ ಸಂಪಾದಿಸಿರುವುದು ಜನಾರ್ದನ್‌ ಅವರ ಕಲಿಕೆಗೆ ಹಿಡಿದ ಕನ್ನಡಿಯಾಗಿದೆ ಎಂದು ತಿಳಿಸಿದರು.

ಕೆ.ಟಿ.ರಾಧಾಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಗಾಯಕಿ ಸುಧಾ ಕುಷ್ಟಗಿ, ಜಿ.ಬಿ. ಜನಾರ್ದನ್‌ ಇದ್ದರು. ಸೌಖ್ಯ ಸ್ವಾಗತಿಸಿದರು. ಪ್ರತಿಮಾ ವಂದಿಸಿದರು. ಅರ್ಚನ ಮತ್ತು ರಂಜನ ನಿರೂಪಿಸಿದರು. ನಂತರ ಸುಧಾ ಅರವಿಂದ್‌ ಮತ್ತು ಸುಧಾ ಕುಷ್ಟಗಿ ಅವರಿಂದ ದೇವ-ಭಾವ ಹಾಗೂ ಯಕ್ಷಗಾನ ಪ್ರದರ್ಶನ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next