Advertisement
ಪ್ರಧಾನ ವ್ಯವಹಾರ ನ್ಯಾಯಾಧೀಶ ಸೈಯದ್ ಅರಾಫತ್ ಇಬ್ರಾಹಿಂ, ತಾಪಂ ಕಾರ್ಯನಿರ್ವಹಣಾಧಿ ಕಾರಿ ಪುಷ್ಪಾ ಎಂ. ಕಮ್ಮಾರ್, ಉಪತಹಶೀಲ್ದಾರ್ ಕಲ್ಲಪ್ಪ,ವೈದ್ಯಾಧಿಕಾರಿ ಡಾ|ವಿನಾಯಕ್ ಭೇಟಿ ನೀಡಿ ಕಾರ್ಮಿಕರ ಸುರಕ್ಷತೆ ಬಗ್ಗೆ ಪರಿಶೀಲನೆ ನಡೆಸಿದರು. ತ್ಯಾಗರ್ತಿಯ ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್‌ನಲ್ಲಿ ಹಾವೇರಿ ಜಿಲ್ಲೆಯ 28 ಜನ, ಬೇಡರಕೊಪ್ಪದ ಸರ್ಕಾರಿ ಶಾಲೆಯಲ್ಲಿ 19 ಜನ ಕೂಲಿಕಾರ್ಮಿಕರು ಶುಂಠಿ ಕೆಲಸಕ್ಕೆ ಆಗಮಿಸಿದ್ದು ಲಾಕ್‌ಡೌನ್ ನಿಂದಾಗಿ ವಾಪಾಸ್ ಊರಿಗೆ ತೆರಳಲಾಗದೆ ಸರ್ಕಾರದ ನಿರಾಶ್ರಿತ ಶಿಬಿರದಲ್ಲಿ ಆಶ್ರಯ ಪಡೆದಿದ್ದಾರೆ. ಶಿಬಿರದಲ್ಲಿ ಸ್ವತ್ಛತೆ, ವಸತಿ ವ್ಯವಸ್ಥೆ ಹಾಗೂ ಆಹಾರ ಸುರಕ್ಷತೆಯ ಬಗ್ಗೆ ಪರಿಶೀಲನೆ ನಡೆಸಿದ ನಿಯೋಗ, ನಿರಾಶ್ರಿತರಿಗೆ ಯಾವುದೇ ತೊಂದರೆ ಆಗದಂತೆ ಸರ್ಕಾರ ನೋಡಿಕೊಳ್ಳುತ್ತಿದೆ. ಭೌತಿಕ ಅಂತರವನ್ನು ಕಾಯ್ದುಕೊಂಡು ಲಾಕ್ ಡೌನ್ ಮುಗಿಯುವವರೆಗೆ ಎಲ್ಲಿಗೂ ತೆರಳದೆ ಇಲ್ಲಿಯೇ ಇರಲು ಸೂಚಿಸಿದರು.
ಸಲ್ಲಿಸಲಾಗಿದ್ದು ಹೈಕೋರ್ಟ್‌ನ ಆದೇಶದಂತೆ ರಾಜ್ಯ ಕಾನೂನು ಸೇವಾ ಪ್ರಾಧಿಕಾರದಿಂದ ಪರಿಶೀಲನೆ ನಡೆಸಲು ಮುಂದಾಗಿದ್ದೇವೆ. ತಾಲೂಕಿನ 3 ಕಡೆ ನಿರಾಶ್ರಿತರ ಕೇಂದ್ರಗಳಿಗೆ ಭೇಟಿ ನೀಡಲಾಗಿದ್ದು, ಗ್ರಾಮ ಪಂಚಾಯ್ತಿ ಉಸ್ತುವಾರಿಯಲ್ಲಿ ಸೌಲಭ್ಯ, ಊಟ ವಸತಿ ಸಮಾಧಾನಕರವಾಗಿದೆ ಎಂದರು.
ಎಸಿ ಡಾ| ನಾಗರಾಜ್ ನಾಯ್ಕ ಮಾತನಾಡಿ, ತಾಲೂಕಿನಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 52 ಜನ ವಲಸೆ ಕಾರ್ಮಿಕರಿಗೆ ವಸತಿ ಕಲ್ಪಿಸಲಾಗಿದೆ.
ಆರೋಗ್ಯ ಇಲಾಖೆಯಿಂದ ಪ್ರತಿದಿನ ಆರೋಗ್ಯ ತಪಾಸಣೆ ನಡೆದಿದ್ದು, ಲಾಕ್ ಡೌನ್ ಮುಗಿಯುವವರೆಗೂ ಕಾರ್ಮಿಕರ ಸುರಕ್ಷತೆಗೆ ಅಗತ್ಯವಾದ ಸೌಕರ್ಯಗಳನ್ನು ನೀಡಲಾಗುವುದು ಎಂದು ಹೇಳಿದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ಚಂದ್ರಶೇಖರ್ ನಾಯ್ಕ, ತ್ಯಾಗರ್ತಿ, ಹಿರೇಬಿಲಗುಂಜಿ, ಹೊಸೂರು ಗ್ರಾಪಂ ಪಿಡಿಓಗಳಾದ ಮಂಜಾನಾಯ್ಕ, ಆಶ್ಪಾಕ್
ಅಹಮದ್, ರಾಜು, ವೈದ್ಯಾಕಾರಿ ಡಾ|ವಿನಾಯಕ್, ರೆವಿನ್ಯೂ ಇನ್ಸ್‌ಪೆಕ್ಟರ್ ರಘು, ಪಿಎಸ್‌ಐ ಭರತ್, ಕಾನೂನು ಸೇವಾ ಪ್ರಾಧಿಕಾರದ ವಕೀಲರಾದ ಸತೀಶ್‌ಕುಮಾರ್ ಇತರರು ಇದ್ದರು.