Advertisement

Sagara: ಮಂಗಗಳ ಹಾವಳಿ; ಹಳ್ಳಿ ಮಹಿಳೆಯರ ಪ್ರತಿಭಟನೆ

08:51 PM Sep 27, 2024 | Shreeram Nayak |

ಸಾಗರ: ತಾಲೂಕಿನ ತ್ಯಾಗರ್ತಿ ಗ್ರಾಮದಲ್ಲಿ ವಿಪರೀತ ಮಂಗಗಳ ಹಾವಳಿಯಿಂದ ಬೇಸತ್ತು ಹೊಸಂತೆ ಗ್ರಾಮದ ಮಹಿಳೆಯರು ಗ್ರಾಮಸ್ಥರ ಜೊತೆಗೆ ಶುಕ್ರವಾರ ಹಿರೇಬಿಲಗುಂಜಿ ಗ್ರಾಮ ಪಂಚಾಯಿತಿ ಕಛೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

Advertisement

ಅರಣ್ಯ ಇಲಾಖೆ ಹಾಗೂ ಗ್ರಾಮ ಪಂಚಾಯ್ತಿಗೆ ಗ್ರಾಮದಲ್ಲಿ ಮಂಗನ ಹಾವಳಿ ತಡೆಗಟ್ಟಲು ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಮಂಗಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕೆಲವು ದಿನಗಳಿಂದ ಮನೆಗಳಿಗೆ ನುಗ್ಗಿ ದಾಂಧಲೆ ನಡೆಸುತ್ತಿವೆ. ತರಕಾರಿ ಫಸಲುಗಳನ್ನೆಲ್ಲ ಹಾಳು ಮಾಡುತ್ತಿವೆ. ಅವುಗಳ ಹಾವಳಿಯಿಂದ ನೆಮ್ಮದಿಯ ಜೀವನವನ್ನು ನಡೆಸಲು ಸಾಧ್ಯವಿಲ್ಲ. ಮಂಗಗಳ ಉಪಟಳದಿಂದಾಗಿ ಗ್ರಾಮದಲ್ಲಿ ಸಮಸ್ಯೆ ಉಲ್ಬಣ ವಾಗುತ್ತದೆ. ಅವುಗಳನ್ನು ಹೊಡೆದೋಡಿಸಲು ಅನುಮತಿ ನೀಡಿ ಮಂಗಗಳನ್ನು ಸಾಯಿಸಲು ಬಂದೋಕು ಪರವಾನಿಗೆ ಕೊಡಿಸಿ ಎಂದು ಪ್ರತಿಭಟನಕಾರರು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಸವಿತಾ ಮಂಜುನಾಥ್, ಶ್ವೇತಾ ರಾಯ್ಕರ್, ದಾಕ್ಷಾಯಿಣಿ, ಲತಾ, ಪುಷ್ಪಾ, ಶೈಲಜಾ, ಗೌರಮ್ಮ, ಪುಷ್ಪಾವತಿ, ಕಲ್ಪನಾ, ಅಕ್ಷತಾ, ಅಣ್ಣಪ್ಪ ಪೂಜಾರಿ ಇನ್ನಿತರರು ಇದ್ದರು.ಗ್ರಾಮಸ್ಥರ ಮನವಿ ಮೇರೆಗೆ ಗ್ರಾಮದಲ್ಲಿ ಮಂಗನ ಹಾವಳಿ ತಡೆಗಟ್ಟಲು ಅರಣ್ಯ ಇಲಾಖೆಗೆ ಪತ್ರ ಬರೆಯಲಾಗಿದೆ. ಪಂಚಾಯ್ತಿ ವತಿಯಿಂದ ಮಂಗಗಳ ಹಾವಳಿ ತಡೆಗಟ್ಟಲು ಸಾಧ್ಯವಿಲ್ಲ.

ಸಂಬಂಧಪಟ್ಟ ಇಲಾಖೆಯವರು ಕ್ರಮ ಕೈಗೊಳ್ಳಬೇಕು. ನಮಗೆ ಯಾವುದೇ ಪ್ರಾಣಿಗಳನ್ನು ಹಿಡಿದು ಬೇರೆ ಕಡೆ ಸಾಗಿಸಲು ಅವಕಾಶ ಇಲ್ಲ ಎಂದು ಹಿರೇಬಿಲಗುಂಜಿ ಪಿಡಿಓ ಶೇಖರಪ್ಪ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next