Advertisement
ಡಿವೈಎಸ್‌ಪಿ ಕಚೇರಿ ಎದುರು ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಕೆಳದಿ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಎಚ್.ಎಸ್.ರಮೇಶ್, ನ. ೫ರಂದು ಸೂರ್ಯನಾರಾಯಣ ಅವರು ರಾತ್ರಿ 7- 45ರ ಸುಮಾರಿಗೆ ಡೈರಿಗೆ ಹೋಗಿ ವಾಪಾಸ್ ಮನೆಗೆ ಬರುತ್ತಿರುವ ಸಂದರ್ಭದಲ್ಲಿ ದೀಪಕ್, ರಮೇಶ್, ಅಮಿತ್, ನಾಗರಾಜ್ ಮತ್ತು ಅಣ್ಣಪ್ಪ ಎಂಬುವವರು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ದೊಣ್ಣೆಯಿಂದ ಹೊಡೆದು ಹಲ್ಲೆ ನಡೆಸಿದ್ದಾರೆ. ಮೆಳವರಿಗೆಯಲ್ಲಿ ಸೂರ್ಯನಾರಾಯಣ ಅವರು 7.5 ಎಕರೆ ಜಮೀನು ಹೊಂದಿದ್ದು ಅಲ್ಲಿ ಕೃಷಿ ಮಾಡಲು ಗ್ರಾಮದ ಕೆಲವರು ತೊಂದರೆ ಕೊಟ್ಟಿದ್ದಾರೆ. ಈ ಕಾರಣ ಸೂರ್ಯನಾರಾಯಣರು ಜಮೀನನ್ನು ಬೇರೆಯವರಿಗೆ ಮಾರಾಟ ಮಾಡಿದ್ದಾರೆ. ಹೀಗೆ ಮಾರಾಟ ಮಾಡಿದ್ದೇ ತಪ್ಪು ಎನ್ನುವಂತೆ ಕೆಲವರು ವರ್ತನೆ ಮಾಡಿ ಹಲ್ಲೆ ನಡೆಸಿದ್ದಾರೆ. ಹಲ್ಲೆಗೆ ಸಂಬಂಧಪಟ್ಟಂತೆ ಪೊಲೀಸರಿಗೆ ದೂರು ಕೊಟ್ಟರೂ ಕ್ಷಿಪ್ರವಾಗಿ ಪೊಲೀಸರು ಕ್ರಮಕ್ಕೆ ಮುಂದಾಗಿಲ್ಲ. ಹಲ್ಲೆ ಮಾಡಿದವರಿಂದಲೇ ಸುಳ್ಳು ದೂರು ದಾಖಲಿಸಿಕೊಂಡಿದ್ದಾರೆ. ಒಟ್ಟಾರೆ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಸೂರ್ಯನಾರಾಯಣ ಅವರ ಕುಟುಂಬಕ್ಕೆ ಗ್ರಾಮದಲ್ಲಿ ರಕ್ಷಣೆ ಇಲ್ಲದಂತೆ ಆಗಿದೆ. ಈ ಹಿನ್ನೆಲೆಯಲ್ಲಿ ಹಲ್ಲೆ ನಡೆಸಿದವರನ್ನು ತಕ್ಷಣ ಬಂಧಿಸುವಂತೆ ಮನವಿ ಮಾಡಿದರು.
Related Articles
Advertisement
ಬ್ರಾಹ್ಮಣ ಸಮುದಾಯದ ಪ್ರಮುಖರಾದ ಅ.ಪು.ನಾರಾಯಣಪ್ಪ, ಎಲ್.ಟಿ.ತಿಮ್ಮಪ್ಪ, ಎಂ.ಜಿ.ರಾಮಚಂದ್ರ, ಹು.ಭಾ.ಅಶೋಕ್, ವೆಂಕಟರಾವ್, ಗಣೇಶ್ ಪ್ರಸಾದ್, ಕೆ.ಸಿ.ದೇವಪ್ಪ, ಗಿರೀಶ್ ಹಕ್ರೆ, ಕೃಷಿ ಇಲಾಖೆಯ ಅಧಿಕಾರಿಯಾದ ಬಿ.ಆರ್. ವಿನಾಯಕರಾವ್, ವಿ.ಜಿ.ಶ್ರೀಧರ್, ವೆಂಕಟರಾವ್ ಕಾನುಗೋಡು, ಶ್ರೀಧರ ಸಾಗರ್ ರಾಜಶೇಖರ್ ಹಂದಿಗೋಡು, ರಾಧಾಕೃಷ್ಣ ಬಂದಗದ್ದೆ, ದೇವೇಂದ್ರ ಬೆಳೆಯೂರು, ಶ್ರೀಪಾದ ಎಂ.ಎನ್., ಪ್ರಸನ್ನ ಚಿಪ್ಳಿ, ಸುಬ್ರಮಣ್ಯ ಸಿ.ಎನ್. ಇನ್ನಿತರರು ಹಾಜರಿದ್ದರು.
ಇದನ್ನೂ ಓದಿ: Timed Out ಇದೇ ಮೊದಲಲ್ಲ; ಸಂಧಿವಾತದಿಂದ ಬಳಲುತ್ತಿದ್ದ ಬ್ಯಾಟರ್ ಗೆ ಔಟ್ ಕೊಟ್ಟಿದ್ದ ಅಂಪೈರ್