Advertisement

ಕನ್ನಯ್ಯ ಲಾಲ್ ಹತ್ಯೆ : ತಪ್ಪಿತಸ್ಥರಿಗೆ ಗುಂಡಿನ ಮೂಲಕವೇ ಉತ್ತರ ನೀಡಬೇಕು ; ಬಿಜೆಪಿ ಒತ್ತಾಯ

03:30 PM Jun 29, 2022 | Team Udayavani |

ಸಾಗರ : ರಾಜಸ್ಥಾನದ ಉದಯಪುರದಲ್ಲಿ ಕನ್ನಯ್ಯ ಲಾಲ್ ಎಂಬುವವರನ್ನು ಮತಾಂಧರು ಅಮಾನುಷವಾಗಿ ಹತ್ಯೆ ಮಾಡಿ, ಪ್ರಧಾನಿ ನರೇಂದ್ರ ಮೋದಿಯವರಿಗೆ ಬೆದರಿಕೆ ಒಡ್ಡಿರುವ ಘಟನೆಯನ್ನು ಖಂಡಿಸಿ, ತಪ್ಪಿತಸ್ಥರಿಗೆ ಅತಿಘೋರ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿ ಬುಧವಾರ ಬಿಜೆಪಿ ವತಿಯಿಂದ ಉಪವಿಭಾಗಾಧಿಕಾರಿಗಳ ಕಚೇರಿ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.

Advertisement

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಶಾಸಕ, ಎಂಎಸ್‌ಐಎಲ್ ಅಧ್ಯಕ್ಷ ಎಚ್.ಹಾಲಪ್ಪ ಹರತಾಳು, ಕನ್ನಯ್ಯ ಅವರನ್ನು ಹತ್ಯೆ ಮಾಡಿರುವ ಘಟನೆ ನಾಗರೀಕ ಸಮಾಜ ತಲೆತಗ್ಗಿಸುವಂತೆ ಮಾಡಿದೆ. ಮತಾಂಧ ಶಕ್ತಿಗಳು, ಹೇಡಿಗಳಿಂದ ಇಂತಹ ಘನಘೋರ ಕೃತ್ಯ ನಡೆದಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ ಜರುಗಿಸಬೇಕು. ಇಂತಹ ಕೃತ್ಯ ನಡೆಸಿದವರಿಗೆ ಬ್ಲೂಸ್ಟಾರ್, ಸರ್ಜಿಕಲ್ ಸ್ಟ್ರೈಕ್ ಮಾದರಿಯಲ್ಲಿ ಹುಡುಕಿ, ಹುಡುಕಿ ಹೊಡೆಯಬೇಕು. ಇಂತಹ ದೇಶವಿರೋಧಿ, ಮನುಕುಲ ವಿರೋಧಿಗಳು ಯಾರೇ ಇದ್ದರೂ ಅವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಪಕ್ಷಾತೀತವಾಗಿ ಮತ್ತು ಜಾತ್ಯಾತೀತವಾಗಿ ಒತ್ತಾಯಿಸುವ ಕಾಲಘಟ್ಟ ಇದಾಗಿದೆ. ಐಸಿಸ್‌ನಂತಹ ರಾಕ್ಷಸ ಸಂಘಟನೆಗಳ ಬೆಂಬಲದಿಂದ ಇಂತಹ ಕೃತ್ಯ ನಡೆದಿದೆ ಎನ್ನುವ ದೂರುಗಳು ಇರುವ ಹಿನ್ನೆಲೆಯಲ್ಲಿ ಅಂತವರ ನೆಲೆಯನ್ನು ಗುರುತಿಸಿ, ಬೇರು ಸಹಿತ ಕಿತ್ತು ಹಾಕಬೇಕು. ಹೇಡಿಗಳಂತೆ ಕೃತ್ಯ ಎಸಗಿದ್ದಾರೆ. ಇದರ ಹಿಂದೆ ದೇಶವಿರೋಧಿಗಳ ಕೈವಾಡವಿದ್ದು, ಅಂತಹವರಿಗೆ ಸರ್ಕಾರ ಗುಂಡಿನ ಮೂಲಕವೇ ಉತ್ತರ ಕೊಡಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ : ಉದಯ್‌ಪುರ ಘಟನೆ: ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗಬೇಕು; ವೆರೋನಿಕಾ ಕರ್ನೆಲಿಯೊ

ನಗರ ಬಿಜೆಪಿ ಅಧ್ಯಕ್ಷ ಕೆ.ಆರ್.ಗಣೇಶಪ್ರಸಾದ್ ಮಾತನಾಡಿ, ದೇಶದ ಏಳಿಗೆ ಸಹಿಸಲು ಸಾಧ್ಯವಿಲ್ಲದೆ ಕೆಲವರು ಇಂತಹ ದುಷ್ಕೃತ್ಯದ ಮೂಲಕ ದೇಶದಲ್ಲಿ ಅಶಾಂತಿ, ಭಯ ಉಂಟು ಮಾಡುವ ಪ್ರಯತ್ನ ನಡೆಸುತ್ತಿದ್ದಾರೆ. ಈಗಾಗಲೇ ಅಗ್ನಿಪಥ್ ವಿರುದ್ಧ ದೇಶದಲ್ಲಿ ಗಲಭೆ ಸೃಷ್ಟಿಸುವ ಪ್ರಯತ್ನ ನಡೆಸಲಾಗಿತ್ತು. ಇದೀಗ ನೂಪುರ್ ಶರ್ಮ ಅವರನ್ನು ಬೆಂಬಲಿಸಿ ಪೋಸ್ಟ್ ಹಾಕಿದ ಕನ್ನಯ್ಯ ಲಾಲ್ ಅವರನ್ನು ಬರ್ಬರವಾಗಿ ಹತ್ಯೆ ಮಾಡಿದ ಮತಾಂಧರ ಕೃತ್ಯವನ್ನು ಸಮಸ್ತ ದೇಶವಾಸಿಗಳು ಖಂಡಿಸಬೇಕು. ಪ್ರಧಾನಿ ಮೋದಿಯವರಿಗೆ ಎಚ್ಚರಿಕೆ ನೀಡಿದ್ದು ಮತಾಂಧರ ದುರಾಲೋಚನೆಗೆ ಸಾಕ್ಷಿಯಾಗಿದೆ. ಕೇಂದ್ರ ಸರ್ಕಾರ ಇಂತಹ ದುಷ್ಕೃತ್ಯ ನಡೆಸಿದವರಿಗೆ ಮತ್ತು ಅವರ ಹಿಂದೆ ಇದ್ದು ಸಹಕಾರ ನೀಡುತ್ತಿರುವ ಮತಾಂಧ ಶಕ್ತಿಗಳನ್ನು ತಕ್ಕಪಾಠ ಕಲಿಸಬೇಕು ಎಂದು ಒತ್ತಾಯಿಸಿದರು.

ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್ ಮಾತನಾಡಿದರು. ಉಪಾಧ್ಯಕ್ಷ ವಿ.ಮಹೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಅರವಿಂದ ರಾಯ್ಕರ್, ಟೈಲರ್ ಅಸೋಸಿಯೇಷನ್‌ನ ಕೆ.ಎಸ್.ಶ್ರೀಧರ್, ಬಿ.ಜಿ.ರಾಜು, ಪ್ರಮುಖರಾದ ಮೈತ್ರಿ ಪಾಟೀಲ್, ಚೇತನರಾಜ್ ಕಣ್ಣೂರು, ಭಾಷಾ ಸಾಬ್, ಸಂತೋಷ್ ಶೇಟ್, ಸತೀಶ್ ಕೆ., ಶಂಕರ ಅಳವಿಕೋಡಿ, ಅರುಣ ಕುಗ್ವೆ, ಕೃಷ್ಣ ಶೇಟ್, ಸವಿತಾ ವಾಸು, ಭಾವನಾ ಸಂತೋಷ್, ಪರಶುರಾಮ್, ಶ್ರೀಕರ ಇನ್ನಿತರರು ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next