Advertisement

ಹಿಜಾಬ್‌ ಸಹಿತ ಹಾಜರಾತಿಗೆ ಅವಕಾಶ; ಎಸಿಗೆ ಮನವಿ

03:03 PM Feb 18, 2022 | Team Udayavani |

ಸಾಗರ: ತಮ್ಮನ್ನು ಹಿಜಾಬ್‌ ಹಾಕಿಕೊಂಡುತರಗತಿಗೆ ಹಾಜರಾಗಲು ಅವಕಾಶಕಲ್ಪಿಸಬೇಕು ಎಂದು ಒತ್ತಾಯಿಸಿಗುರುವಾರ 20ಕ್ಕೂ ಹೆಚ್ಚು ಅಲ್ಪಸಂಖ್ಯಾತ ವಿದ್ಯಾರ್ಥಿನಿಯರು ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.ಇಲ್ಲಿನ ಸರ್ಕಾರಿ ಪಪೂ ಕಾಲೇಜಿನಲ್ಲಿ ಗುರುವಾರ ತರಗತಿಗಳು ಆರಂಭವಾಗಿವೆ.

Advertisement

ರಾಜ್ಯದ ಬೇರೆ ಜಿಲ್ಲೆಗಳಲ್ಲಿ ಬುಧವಾರಪಪೂ ತರಗತಿಗಳು ಆರಂಭಗೊಂಡಿದ್ದರೆಸಾಗರದಲ್ಲಿ ಕಾನೂನು ಸುವ್ಯವಸ್ಥೆದೃಷ್ಟಿಯಿಂದ ಗುರುವಾರ ತರಗತಿ ಪ್ರಾರಂಭಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು.ಗುರುವಾರ ಬೆಳಗ್ಗೆ 24 ವಿದ್ಯಾರ್ಥಿನಿಯರುಹಿಜಾಬ್‌ ಧರಿಸಿ ಬಂದಿದ್ದರು.ಪ್ರಾಚಾರ್ಯರು ಹಾಗೂ ಉಪನ್ಯಾಸಕವರ್ಗ ಅವರನ್ನು ಕಾಲೇಜು ಆವರಣದಲ್ಲಿತಡೆದು ಸರ್ಕಾರದ ನಿಯಮಪಾಲಿಸುವಂತೆ ಮನವಿ ಮಾಡಿದ್ದಾರೆ.

ವಿದ್ಯಾರ್ಥಿನಿಯರು ಹಿಜಾಬ್‌ ತೆಗೆಯಲು ನಿರಾಕರಿಸಿದ್ದಾರೆ. ಈ ಸಂದರ್ಭದಲ್ಲಿ ಸ್ವಲ್ಪಹೊತ್ತು ವಿದ್ಯಾರ್ಥಿನಿಯರು ಕಾಲೇಜುಆವರಣದಲ್ಲಿಯೇ ಇದ್ದು, ತಮಗೆ ತರಗತಿಗೆ ಹೋಗಲು ಅವಕಾಶ ಕೊಡಿ ಎಂದು ಮನವಿಮಾಡಿದ್ದಾರೆ. ಇದಕ್ಕೆ ಪ್ರಾಚಾರ್ಯರು ಒಪ್ಪಿಗೆನೀಡಲಿಲ್ಲ

Advertisement

Udayavani is now on Telegram. Click here to join our channel and stay updated with the latest news.

Next