ಸಾಗರ: ರಾಯಚೂರು ಜಿಲ್ಲಾ ನ್ಯಾಯಾಲಯದಮುಖ್ಯ ನ್ಯಾಯಾಧಿಧೀಶರ ವಿರುದ್ಧ ಕ್ರಮಕ್ಕೆಒತ್ತಾಯಿಸಿ ಗುರುವಾರ ದಲಿತ ಸಂಘರ್ಷಸಮಿತಿಯ ಮಹಾತ್ಮ ಪ್ರೊ| ಬಿ. ಕೃಷ್ಣಪ್ಪ ಬಣಮತ್ತು ಸಂಯುಕ್ತ ಕಿಸಾನ್ ಮೋರ್ಚಾವತಿಯಿಂದ ಉಪ ವಿಭಾಗಾ ಧಿಕಾರಿಗಳ ಕಚೇರಿಗೆಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ದಲಿತಸಂಘರ್ಷ ಸಮಿತಿ ತಾಲೂಕು ಸಂಚಾಲಕಲಕ್ಷ್ಮಣ್ ಸಾಗರ್, ದೇಶಕ್ಕೆ ಸಮಗ್ರವಾದಸಂವಿಧಾನ ನೀಡಿ ಜಾತ್ಯಾತೀತ ನೆಲೆಗಟ್ಟನ್ನುಹಾಕಿಕೊಟ್ಟವರು ಡಾ| ಬಿ.ಆರ್.ಅಂಬೇಡ್ಕರ್.ನ್ಯಾಯಾಧೀಶರು ನ್ಯಾಯಪೀಠದಲ್ಲಿಕುಳಿತಿದ್ದಾರೆಂದರೆ ಅದು ಅಂಬೇಡ್ಕರ್‌ನೀಡಿದ ಕಾಣಿಕೆಯಾಗಿದೆ.
ಎಲ್ಲ ವರ್ಗವೂಮೆಚ್ಚುವಂತಹ ಸಂವಿಧಾನವನ್ನು ಅಂಬೇಡ್ಕರ್‌ನೀಡಿದ್ದಾರೆ. ಇಂತಹ ವೇಳೆ ನ್ಯಾಯಾ ಧೀಶರುಗಣರಾಜ್ಯೋತ್ಸವದ ದಿನ ಅಂಬೇಡ್ಕರ್‌ಫೋಟೋ ಇದ್ದರೆ ತಾವು ಧ್ವಜಾರೋಹಣನೆರವೇರಿಸುವುದಿಲ್ಲ ಎಂದು ಹೇಳಿ ಭಾವಚಿತ್ರತೆಗೆಸಿದ್ದು ಖಂಡನೀಯ ಎಂದರು.
ಸಂಯುಕ್ತ ಕಿಸಾನ್ ಮೋರ್ಚಾದ ಎಚ್.ಬಿ.ರಾಘವೇಂದ್ರ ಮಾತನಾಡಿ, ಅಂಬೇಡ್ಕರ್‌ಭಾವಚಿತ್ರ ತೆಗೆಸಿದ್ದು ಸಮಸ್ತ ಭಾರತೀಯರಿಗೆ ಮಾಡಿದ ಅವಮಾನವಾಗಿದೆ ಎಂದರು.
ನಗರಸಭೆ ಮಾಜಿ ಸದಸ್ಯ ರವಿ ಜಂಬಗಾರುಮಾತನಾಡಿದರು. ಸಮಿತಿಯ ರಾಜ್ಯವಿಭಾಗೀಯ ಸಂಚಾಲಕ ಗುರುರಾಜ್,ಪ್ರಮುಖರಾದ ಸುರೇಶ್ ಮಂಡ್ಯ, ಎ.ಎ. ಶೇಕ್,ಡಿ. ದಿನೇಶ್, ಸತ್ಯನಾರಾಯಣ್, ರಾಘವೇಂದ್ರಆವಿನಹಳ್ಳಿ, ಮಹಾದೇವಪ್ಪ, ರಾಮಯ್ಯ,ಮಂಜಪ್ಪ ತ್ಯಾಗರ್ತಿ ಇನ್ನಿತರರು ಇದ್ದರು.