ಸಾಗರ: ಮಲೆನಾಡಿನ ಭಾಗದ ರೈತರಿಗೆಹಾಗೂ ಅವರ ಕುಟುಂಬ ಸದಸ್ಯರಿಗೆ ಕೃಷಿಉತ್ಪನ್ನ, ಉಪಕರಣ ಇನ್ನಿತರ ಮಾಹಿತಿಗಳನ್ನುಪಡೆಯಲು ಜ್ಞಾನ ವಿಸ್ತಾರದ ಕನಸು ಹೊತ್ತಕೃಷಿ ಮೇಳವನ್ನು ಬ್ಯಾಂಕ್ ನೇತೃತ್ವದಲ್ಲಿ ಮಾಡುವ ಚಿಂತನೆ ಕೋವಿಡ್ ಕಾರಣದಿಂದಸ್ವಲ್ಪ ಕಾಲ ಮುಂದಕ್ಕೆ ಹೋಗಿದೆಯೇ ವಿನಃಅದನ್ನು ಸಾಕಾರಗೊಳಿಸಲು ಬರುವ ದಿನಗಳಲ್ಲಿ ಪೂರ್ಣ ಪ್ರಯತ್ನ ಮಾಡಲಾಗುವುದು ಎಂದು ಭೀಮನಕೋಣೆ ಪ್ರಾಥಮಿಕ ಸಹಕಾರಿ ಕೃಷಿ ಮತ್ತುಗ್ರಾಮೀಣಾಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ವ.ಶಂ.ರಾಮಚಂದ್ರ ಭಟ್ ತಿಳಿಸಿದರು.
ತಾಲೂಕಿನ ಭೀಮನಕೋಣೆಯ ಲಕ್ಷ್ಮೀನಾರಾಯಣಕಲ್ಯಾಣ ಮಂಟಪದಲ್ಲಿ ಸೋಮವಾರ ಪಿಎಲ್‌ಡಿಬ್ಯಾಂಕ್‌ನಿಂದ ಆಯೋಜಿಸಿದ್ದ ವಾರ್ಷಿಕ ಸಭೆಯಲ್ಲಿಅವರು ಕೃಷಿ ಕ್ಷೇತ್ರದ ಸಾಧಕರನ್ನು ಸನ್ಮಾನಿಸಿಮಾತನಾಡಿದರು.ಕೃಷಿ ಮೇಳ ನಡೆಸುವುದು ನಮ್ಮ ಕನಸು.ಇದಕ್ಕಾಗಿ ಎಲ್ಲ ತಯಾರಿಗಳನ್ನು ನಡೆಸಿದ್ದು,ಶಾಸಕ ಎಚ್. ಹಾಲಪ್ಪ ಕೂಡ ಪೂರ್ಣ ಬೆಂಬಲನೀಡಿದ್ದಾರೆ. ಈ ಹಿಂದೆಯೇ ಮುಖ್ಯಮಂತ್ರಿಗಳನ್ನುಭೇಟಿ ಮಾಡಲಾಗಿತ್ತು.
ಆದರೆ ಕೊರೊನಾಕಾರಣದಿಂದ ನಾವು ಅದನ್ನು ತಾತ್ಕಾಲಿಕವಾಗಿಮುಂದೂಡುವಂತಾಗಿದೆ ಎಂದರು.ಹಿಂದಿನ ವರ್ಷಗಳ ನಷ್ಟವನ್ನು ತುಂಬಿಕೊಂಡಿರುವಬ್ಯಾಂಕ್ ಈ ಬಾರಿ 78 ಲಕ್ಷ ರೂ.ಗಳ ನಿವ್ವಳಲಾಭವನ್ನು ತನ್ನದಾಗಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿರೈತ ಷೇರುದಾರರಿಗೆ ಶೇ. 15ರ ದರದಲ್ಲಿ ಲಾಭಾಂಶಹಂಚಲಾಗುವುದು ಎಂದು ಹೇಳಿದರು.ಇದೇ ಸಂದರ್ಭದಲ್ಲಿ ರಾಷ್ಟ್ರಪ್ರಶಸ್ತಿ ಪುರಸ್ಕೃತಪ್ರಗತಿಪರ ಕೃಷಿಕ ಪ್ರಕಾಶ್ ಮಂಚಾಲೆ,ಜಿಲ್ಲಾ ಕೃಷಿ ಪ್ರಶಸ್ತಿ ಪುರಸ್ಕೃತರಾದ ಸತೀಶ್‌ಮುಂಗರವಳ್ಳಿ, ಜಯಲಕ್ಷಿ ¾à ನೇದರವಳ್ಳಿ ಅವರನ್ನುಸನ್ಮಾನಿಸಲಾಯಿತು.
ಈ ವೇಳೆ ಜಾನಪದ ತಜ್ಞಬಿ. ಟಾಕಪ್ಪ, ನಿರ್ದೇಶಕರಾದ ಕೆರೆಯಮ್ಮ,ಶಾಂತಕುಮಾರ್, ಪ್ರಸನ್ನ ಸಿ.ಎ., ಗಣೇಶ್ ಟಿ.ಜಿ.,ಅಮೃತೇಶ್ವರ ಬಿ.ಎಂ., ಕಮಲಾಕ್ಷಮ್ಮ, ಲಕ್ಷಿ ¾,ಗಣೇಶ್ ಎಂ.ಸಿ., ಶಿವಪ್ಪ ಎಚ್., ನಾಗರಾಜ್‌ಎಚ್.ಪಿ., ನಾಗರಾಜ್ ಬಿ., ಜಟ್ಟಪ್ಪ ಕೆ., ಧನರಾಜ್‌ಕೆ.ವಿ., ರಮೇಶ್ ಕೆ. ಕಾನುಮನೆ, ಎಂ.ಎಚ್.ಭರತ್ ಕುಮಾರ್, ಕೆ.ಎಸ್. ಸುಬ್ರಾವ್ ಇನ್ನಿತರರುಇದ್ದರು.