Advertisement

ಸೂಕ್ತ ಸಾಕ್ಷಿ ಕೊಟ್ಟು ಆರೋಪ ಮಾಡಿ

12:53 PM Dec 08, 2021 | Adarsha |

ಸಾಗರ: ರಾಜ್ಯದ ಗ್ರಾಮೀಣಾಭಿವೃದ್ಧಿಯಹೆಸರಿನಲ್ಲಿ ಈವರೆಗೆ ನಡೆದ 39ಯೋಜನೆಗಳು ನಿಷ್ಪಲವಾಗಿರುವುದನ್ನುಕಾಣುತ್ತೇವೆ. ಈ ಹಿನ್ನೆಲೆಯಲ್ಲಿ ಸರ್ಕಾರ6ರಿಂದ 7 ಸಾವಿರ ಕೋಟಿ ರೂ. ವೆಚ್ಚದ ಆರುಯೋಜನೆಗಳನ್ನು ರೂಪಿಸುತ್ತಿದ್ದು,ಮುಂದಿನ ದಿನಗಳಲ್ಲಿ ಗ್ರಾಪಂಗಳಲ್ಲಿಅದನ್ನು ರಾಜ್ಯ ಸರ್ಕಾರವೇನೇರವಾಗಿ ನಿರ್ವಹಿಸುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತುಪಂಚಾಯತ್‌ ರಾಜ್‌ ಸಚಿವ ಕೆ.ಎಸ್‌.ಈಶ್ವರಪ್ಪ ಪ್ರತಿಪಾದಿಸಿದರು.

Advertisement

ಮಂಗಳವಾರ ಕರೆಯಲಾಗಿದ್ದಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಉದ್ಯೋಗ ಇಲ್ಲದ ಕಾಂಗ್ರೆಸ್‌ ಇನ್ನೆಂದೂಅ ಧಿಕಾರಕ್ಕೆ ಬರುವುದಿಲ್ಲ. ಅವರುಅದ್ಯಾರೋ ಗುತ್ತಿಗೆದಾರ ಪ್ರಧಾನಿಯವರಿಗೆಪತ್ರ ಬರೆದು ಶೇ. 40ರಷ್ಟು ಪರ್ಸಂಟೇಜ್‌ತೆಗೆದುಕೊಳ್ಳುತ್ತಿದ್ದಾರೆ ಎಂದುದೂರಿರುವುದನ್ನು ಅಸ್ತ್ರ ಮಾಡಿಕೊಂಡಿದ್ದಾರೆ.

ಸೂಕ್ತವಾದ ಸಾಕ್ಷಿಯನ್ನು ಒದಗಿಸಿ ಬಿಜೆಪಿಮೇಲೆ ಆರೋಪ ಮಾಡಿ ಎಂದೇ ನಾವುಹೇಳುತ್ತಿದ್ದೇವೆ ಎಂದು ತಿರುಗೇಟು ನೀಡಿದರು.

ವಿಧಾನ ಪರಿಷತ್‌ನಲ್ಲಿ ನಮಗೆಬಹುಮತವಿಲ್ಲ. ಇದರಿಂದ ಕಾಯ್ದೆಗಳಅಂಗೀಕಾರದಲ್ಲಿ ಕಷ್ಟ ಅನುಭವಿಸುವಂತಾಗಿದೆ.ಈ ನಿಟ್ಟಿನಲ್ಲಿ ಪಕ್ಷಕ್ಕಾಗಿ ದುಡಿದಕಾರ್ಯಕರ್ತರನ್ನೇ ಅಭ್ಯರ್ಥಿಗಳನ್ನಾಗಿಮಾಡಲಾಗಿದ್ದು, ಪಕ್ಷ ಚುನಾವಣೆಯನ್ನುಗಂಭೀರವಾಗಿ ಪರಿಗಣಿಸಿದೆ.

ಈ ಬಾರಿ 15-16ಸ್ಥಾನ ಗೆಲ್ಲುವ ಮೂಲಕ ವಿಧಾನ ಪರಿಷತ್‌ನಲ್ಲೂ ಬಹುಮತ ಪಡೆಯಲಿದ್ದೇವೆಎಂದರು.ಶಾಸಕ ಎಚ್‌.ಹಾಲಪ್ಪ ಹರತಾಳು, ವಿಧಾನಪರಿಷತ್‌ ಅಭ್ಯರ್ಥಿ ಡಿ.ಎಸ್‌.ಅರುಣ್‌,ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್‌,ತಾಲೂಕು ಅಧ್ಯಕ್ಷ ಲೋಕನಾಥ್‌ ಬಿಳಿಸಿರಿ,ನಗರ ಅಧ್ಯಕ್ಷ ಗಣೇಶಪ್ರಸಾದ್‌, ಎಪಿಎಂಸಿಅಧ್ಯಕ್ಷ ಚೇತನರಾಜ್‌ ಕಣ್ಣೂರು,ಪ್ರಮುಖರಾದ ವಿ.ಮಹೇಶ್‌,ಆರ್‌. ಶ್ರೀನಿವಾಸ್‌,ಸಂತೋಷ್‌ ಶೇಟ್‌ಇನ್ನಿತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next