Advertisement

ಸಾಮಾಜಿಕ ವಿಶ್ವಾಸ ಕಾಪಾಡಿಕೊಳ್ಳುವುದು ಸವಾಲು

03:40 PM Nov 24, 2021 | Adarsha |

ಸಾಗರ: ಕಲಾ ಪ್ರಕಾರಗಳ ಶಿಕ್ಷಣ ನೀಡುವಸಂಸ್ಥೆಗಳು ಸಾಮಾಜಿಕ ವಿಶ್ವಾಸವನ್ನುನಿರಂತರವಾಗಿ ಕಾಪಾಡಿಕೊಳ್ಳುವುದು ಬಹಳದೊಡ್ಡ ಸವಾಲು. ಆದರೆ ವಿದುಷಿ ವಸುಧಾಶರ್ಮಾ ಅಂತಹ ಸಮೂಹ ವಿಶ್ವಾಸವನ್ನು ಸತತ21 ವರ್ಷಗಳಿಂದ ಸಾಬೀತು ಮಾಡಿದ್ದಾರೆಎಂದು ಹಿರಿಯ ಸಾಹಿತಿ ಡಾ| ಜಿ.ಎಸ್‌. ಭಟ್ಟಹೇಳಿದರು.

Advertisement

ಇಲ್ಲಿನ ನಗರಸಭೆ ಆವರಣದ ಬಯಲುರಂಗಮಂದಿರದಲ್ಲಿ ವೇದನಾದ ಪ್ರತಿಷ್ಠಾನಮತ್ತು ಸದ್ಗುರು ಹಿಂದೂಸ್ತಾನಿ ಶಾಸ್ತ್ರೀಯಸಂಗೀತ ವಿದ್ಯಾಲಯದ ಆಶ್ರಯದಲ್ಲಿಭಾರತ ಸರಕಾರದ ಸಂಸ್ಕೃತಿ ಸಚಿವಾಲಯ,ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಸಹಯೋಗದೊಂದಿಗೆ ನಡೆದ 21ನೇ ವರ್ಷದ ಏಕವಿಂಶಃ ರಾಷ್ಟ್ರೀಯ ಸಂಗೀತೋತ್ಸವಕಾರ್ಯಕ್ರಮದ ಸಮಾರೋಪದ ನಿಮಿತ್ತಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರುಮಾತನಾಡಿದರು.

ಸಂಗೀತ ಕಲಿಯುತ್ತಿರುವ ವಿದ್ಯಾರ್ಥಿಗಳುವೇದಿಕೆಯಲ್ಲಿ ಕಾರ್ಯಕ್ರಮ ನೀಡುವ ಜತೆಗೆಪ್ರಸಿದ್ಧ ಕಲಾವಿದರ ಗಾಯನ ಪ್ರದರ್ಶನದ,ಸಾಥ್‌ ನೀಡುವ ಕಲಾವಿದರ ವಾದನ ಕ್ರಮಗಳಬಗ್ಗೆ ಸಹ ಗಮನಿಸಲು ಅವಕಾಶ ಕೊಡುವಸಂಗೀತೋತ್ಸವ ಬಹಳ ಅಪರೂಪದಕಾರ್ಯಕ್ರಮವಾಗಿದೆ ಎಂದರು.

ಪಂಡಿತ್‌ ಮೋಹನ್‌ ಹೆಗಡೆಹುಣಸೆಕೊಪ್ಪ ಮಾತನಾಡಿ, ಸಂಗೀತನಾದೋಪಾಸನೆಯಾಗಿದೆ. ಸಭ್ಯ ಸಮಾಜನಿರ್ಮಾಣಕ್ಕೆ ಪೂರಕ ಮಾರ್ಗ, ವಾತಾವರಣಸೃಷ್ಟಿಸುವ ಸಂಗೀತ ಕಲಿಸುವ ಸಂಸ್ಥೆಗಳಿಗೆಪ್ರೋತ್ಸಾಹ ಅಗತ್ಯ ಎಂದರು.ವರಲಕ್ಷಿ ¾ ಮೋಹನ ಹೆಗಡೆ ಮತ್ತುಜಾಹ್ನವಿ ನಾರಾಯಣ ಶರ್ಮಾ ಅವರನ್ನುಸನ್ಮಾನಿಸಲಾಯಿತು. ಹುಲಿಮನೆ ಎಚ್‌.ಕೆ.ವೆಂಕಟೇಶ್‌ ಅಧ್ಯಕ್ಷತೆ ವಹಿಸಿದ್ದರು. ವಿದ್ವಾನ್‌ನರಸಿಂಹಮೂರ್ತಿ ಹಳೇಇಕ್ಕೇರಿ, ಮೋಹನ್‌ಮುಂತಾದವರಿದ್ದರು. ಅನಘ ಅರುಣ್‌ ಅವರಿಗೆಶ್ರೀಧರ ಹೆಗಡೆ ದಂಪತಿ ಕೊಡಮಾಡುವವಿದ್ಯಾರ್ಥಿ ಪುರಸ್ಕಾರದ ಶೃತಿಪೆಟ್ಟಿಗೆಯನ್ನುನೀಡಲಾಯಿತು.

ನಿರೂಪಕ ಡಾ| ಎ.ಆರ್‌.ಸಿದ್ದಲಿಂಗಮೂರ್ತಿ, ಸತೀಶ್‌ ಕುಮಾರ, ನಿನಾದರಾಮಣ್ಣ ಅವರನ್ನು ಗೌರವಿಸಲಾಯಿತು.ಐ.ವಿ. ಹೆಗಡೆ ಸ್ವಾಗತಿಸಿದರು. ವಿದುಷಿವಸುಧಾ ಶರ್ಮ ವಂದಿಸಿದರು. ಗುರುದತ್ತಶರ್ಮ ನಿರೂಪಿಸಿದರು

Advertisement
Advertisement

Udayavani is now on Telegram. Click here to join our channel and stay updated with the latest news.

Next