Advertisement

ಕಾಗೋಡು ಹೋರಾಟಕ್ಕೆ ಕೊಳಗವೇ ಪ್ರೇರಣೆ

06:26 PM Nov 04, 2021 | Adarsha |

ಸಾಗರ: ಅಂದು ಕಾಗೋಡಿನಲ್ಲಿ ಭೂ ಹೋರಾಟಆರಂಭವಾಗಲು ಕೊಳಗ ಕಾರಣವಾಯಿತು.ಕಾಗೋಡಿನ ಕೆ.ಜಿ. ಒಡೆಯರ್‌ ಹಾಗೂಗಣಪತಿಯಪ್ಪ ಆತ್ಮೀಯ ಸ್ನೇಹಿತರಾಗಿದ್ದರು.

Advertisement

ಸ್ವಾತಂತ್ರ ಸತ್ಯಾಗ್ರಹದಲ್ಲಿ ಒಟ್ಟಿಗೆ ಭಾಗವಹಿಸಿದ್ದರು.ಒಡೆಯರ್‌ ಬಗ್ಗೆ ತಮ್ಮ ಜೀವಿತಾವಧಿ ವರೆಗೂಅಪಾರ ಗೌರವ ಇಟ್ಟುಕೊಂಡಿದ್ದ ಗಣಪತಿಯಪ್ಪ ಅಂದಿನ ರೈತ ಪರ ಹೋರಾಟದ ನಾಯಕತ್ವವಹಿಸಲು ಕಾರಣವಾಗಿದ್ದೇ ಕೊಳಗ ಎಂದು ಆನಂದಪುರ ಮುರುಘಾಮಠದ ಮಲ್ಲಿಕಾರ್ಜುನಮುರುಘಾರಾಜೇಂದ್ರ ಸ್ವಾಮೀಜಿವಿಶ್ಲೇಷಿಸಿದರು.ತಾಲೂಕಿನ ಜಂಬಗಾರಿನಲ್ಲಿ ಡಾ|ಎಚ್‌.ಗಣಪತಿಯಪ್ಪ ಸ್ಮಾರಕ ಭೂಮಣ್ಣಿ ಪಾರ್ಕ್‌ನಾಮಫಲಕ ಅನಾವರಣಗೊಳಿಸಿ ಮಾತನಾಡಿದಅವರು, ಗಣಪತಿಯಪ್ಪ ನಮ್ಮ ಮಠಕ್ಕೆ ಬಂದಾಗಅನೇಕ ವಿಚಾರಗಳ ಸಂಘರ್ಷ ನಡೆಯುತ್ತಿತ್ತು.

ಅದರಲ್ಲಿ ಭೂ ಹೋರಾಟದ ಬಗ್ಗೆ ನನ್ನಲ್ಲಿ ಚರ್ಚೆಮಾಡುತ್ತಿದ್ದರು. ಹೋರಾಟದ ನಾಯಕತ್ವವನ್ನುವಿದ್ಯಾವಂತ ವಿಚಾರವಾದಿಯಾಗಿದ್ದ ಗಣಪತಿಯಪ್ಪ ಉಳುವವನೇ ಹೊಲದೊಡೆಯ ಎಂಬವಿಚಾರಕ್ರಾಂತಿಯ ಮೂಲಕ ವಹಿಸಿದ್ದು, ಅಂದಿನರೈತರಿಗೆ ಭೂಮಿಯ ಹಕ್ಕು ಬೇಕೆಂಬ ಆಶಯವೂಅಹಿಂಸಾ ವಾದಿ ಹೋರಾಟದ ರೂಪ ತಾಳಿತುಎಂದು ನೆನಪಿಸಿಕೊಂಡರು.ಬಸವಣ್ಣ ನಡೆಸಿದ ಸಮಾನತೆಯ ಸಮಾಜನಿರ್ಮಾಣದ ಪರಿಕಲ್ಪನೆಗೆ ಸಮೀಪವಾದವಿಷಯವೇ ಹೊರತು ಗಣಪತಿಯಪ್ಪ ಯಾವುದೇಜಾತಿ ಮತಗಳ ವಿರುದ್ಧ ನಡೆಸಿದ ಹೋರಾಟವಲ್ಲ.ಇದೇ ಪ್ರಕಾರ ಅನೇಕ ವಿಚಾರಗಳನ್ನುವಿವರಿಸುತ್ತಿದ್ದ ಗಣಪತಿಯಪ್ಪನವರು, ಮಠಕ್ಕೆಆತ್ಮೀಯರಾಗಿದ್ದರು.

ಇಂತಹ ಆದರ್ಶಗಳನ್ನುಮುಂದಿಟ್ಟುಕೊಂಡ ಅವರ ಪುತ್ರ ಕೃಷ್ಣಗಣಪತಿಯಪ್ಪ ಸಹ ತಂದೆಯವರ ಆದರ್ಶಗಳನ್ನುಕ್ರೋಢೀಕರಿಸಿಕೊಂಡು ತಾವೂ ಇಂತಹಸಮಾಜಮುಖೀ ಕೆಲಸಗಳನ್ನು ಮಾಡುತ್ತಿರುವುದುಸಂತೋಷದ ವಿಷಯ ಎಂದು ಹೇಳಿದರು.ಕೊಳಗ ಕೃತಿ ರಚಿಸಿದ ಹಿರಿಯ ಸಾಹಿತಿಡಾ|ನಾ.ಡಿಸೋಜಾ ಅವರಿಗೆ ಆತ್ಮಭೂಷಣ ಪ್ರಶಸ್ತಿಪ್ರದಾನ ಮಾಡಿ ಗೌರವಿಸಲಾಯಿತು. ವಿಶೇಷಆಹ್ವಾನಿತರಾದ ವಿದ್ವಾನ್‌ ಗಜಾನನ ಜೋಯಿಸ್‌ಅವರನ್ನು ಸನ್ಮಾನಿಸಲಾಯಿತು.

ಕಳೆದ ಸಾಲಿನಆತ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಮಿಥಿಲಾ, ಭೂಮಣ್ಣಿಪಾರ್ಕ್‌ ಟ್ರಸ್ಟ್‌ ಗೌರವಾಧ್ಯಕ್ಷರಾದ ಮಂಜಮ್ಮಎಚ್‌. ಗಣಪತಿಯಪ್ಪ, ಸುರೇಶ್‌ ಗೌಡ, ಬರದಳ್ಳಿಲೋಕೇಶ್‌, ಲಲಿತಾ ಹೊಯ್ಸಳ, ವಿಜಯ ಕೃಷ್ಣಜಿ., ಪ್ರಜ್ವಲ್‌ ಕೆ., ಲೋಹಿಯಾ ಕೆ.ಎಚ್‌., ಆರ್‌.ಕೊಳಗಿ, ಕೋದಂಡ ಆರ್‌. ಇತರರು ಇದ್ದರು.ಶ್ರೀ ಜನ್ಯ ಮತ್ತು ಜಾನ್ಸಿ ನಿತ್ಯೋತ್ಸವ ಗೀತೆಹಾಡಿದರು. ಸವಿತಾ ಪ್ರಾರ್ಥಿಸಿ, ಶ್ರೀಕೃಷ್ಣ ಜಿ.ಸ್ವಾಗತಿಸಿ, ಪಂಚಮಿ ಸಾಗರ ನಿರೂಪಿಸಿ, ಅಂಬಿಕಾವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next