ಸಾಗರ: ಯಾವುದೇ ಕ್ಷೇತ್ರದಲ್ಲಾದರೂಸತತ ಪರಿಶ್ರಮವಿದ್ದರೆ ಮಾತ್ರ ಯಶಸ್ಸಿನಮೆಟ್ಟಿಲೇರಲು ಸಾಧ್ಯ ಎಂದು ಹಂಪಿ ಕನ್ನಡವಿಶ್ವವಿದ್ಯಾಲಯದ ಉಪ ನಿರ್ದೇಶಕರವೀಂದ್ರ ಎಚ್.ಬಿ. ಹೇಳಿದರು.
ಇಲ್ಲಿನ ಗೋಪಾಲಗೌಡಕ್ರೀಡಾಂಗಣದಲ್ಲಿ ಸಾಗರ್ ನ್ಪೋರ್ಟ್ಸ್ಅಕಾಡೆಮಿ ಮಂಗಳವಾರ ಏರ್ಪಡಿಸಿದ್ದಕಾರ್ಯಕ್ರಮದಲ್ಲಿ 19 ವರ್ಷದೊಳಗಿನರಾಜ್ಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿರುವ ಮಿಥೇಶ್ ಕುಮಾರ್ ಅವರನ್ನು ಅಭಿನಂದಿಸಿ ಅವರು ಮಾತನಾಡಿ, ಕ್ರಿಕೆಟ್‌ನಲ್ಲಿ ನಗರಪ್ರದೇಶಕ್ಕೆ ಸೇರಿದವರು ಮಾತ್ರ ಉನ್ನತಸ್ಥಾನಕ್ಕೆ ಏರಬಹುದು ಎಂಬ ಮಾತನ್ನುಮಿಥೇಶ್‌ಕುಮಾರ್ ಸುಳ್ಳು ಮಾಡಿದ್ದಾರೆ.
ಹಲವು ವರ್ಷಗಳ ಪರಿಶ್ರಮದ ಸಾಧನೆಯಫಲವಾಗಿ ಅವರಿಗೆ ರಾಜ್ಯ ಕಿರಿಯರಕ್ರಿಕೆಟ್ ತಂಡದಲ್ಲಿ ಸ್ಥಾನ ದೊರಕಿದೆ. ಈಭಾಗದ ಯುವ ಕ್ರೀಡಾ ಪ್ರತಿಭೆಗಳುಅವರ ಸಾಧನೆಯನ್ನು ಸ್ಪೂರ್ತಿಯಾಗಿಸ್ವೀಕರಿಸಬೇಕು ಎಂದು ಹೇಳಿದರು.
ಸಾಗರ್ ಕ್ರಿಕೆಟ್ ಕ್ಲಬ್‌ನ ಅಧ್ಯಕ್ಷ ಎಚ್.ಎಲ್. ಶ್ರೀಧರ್, ಕ್ರೀಡಾ ಕ್ಷೇತ್ರದಲ್ಲಿ ತಮ್ಮಮಕ್ಕಳು ಉತ್ತಮ ಸಾಧನೆ ಮಾಡಬೇಕುಅಂತಾದರೆ ಪೋಷಕರಾದವರು ತಕ್ಷಣದಫಲಿತಾಂಶ ನಿರೀಕ್ಷಿಸುವಂತಿಲ್ಲ. ಮಕ್ಕಳಮೇಲೆ ಒತ್ತಡ ಹೇರದೆ ಅವರ ಸಾಧನೆಗೆಪ್ರೋತ್ಸಾಹ ನೀಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಮಿಥೇಶ್‌ಕುಮಾರ್ ತಂದೆ ಸಿದ್ದರಾಜು,ಸಾಗರ್ ನ್ಪೋರ್ಟ್ಸ್ ಅಕಾಡೆಮಿಯಐ.ಎನ್. ಸುರೇಶ್ ಬಾಬು, ರವಿನಾಯ್ಡು,ಗಣೇಶ್, ಪತ್ರಕರ್ತರ ಸಂಘದ ತಾಲೂಕುಅಧ್ಯಕ್ಷ ಜಿ. ನಾಗೇಶ್, ಕಾರ್ತಿಕ್, ಪ್ರಸನ್ನ,ಹರ್ಷಕುಮಾರ್ ಇದ್ದರು.