Advertisement

ರೈತರ ಧ್ವನಿಯಾಗಲು ನನ್ನನ್ನು ಆಯ್ಕೆ ಮಾಡಿ

01:51 PM Apr 08, 2019 | Naveen |

ಸಾಗರ: ಬಿಜೆಪಿಯವರು ರೈತರಿಗೆ ವಿಶ್ವಾಸದ್ರೋಹ ಮಾಡಿದ್ದು ಅರಣ್ಯ ಹಕ್ಕು ಪತ್ರದ ವಿಚಾರದಲ್ಲಿ ರೈತರ ಪರವಾಗಿ ಸಂಸತ್ತಿನಲ್ಲಿ ಧ್ವನಿ ಎತ್ತಲಿಲ್ಲ. ಕಸ್ತೂರಿ ರಂಗನ್‌ ವರದಿ ಜಾರಿಯಾದರೆ ಈ ಭಾಗದ ಜನರಿಗೆ ಮಾರಕವಾಗುತ್ತದೆ.

Advertisement

ಕೇಂದ್ರ ಸರ್ಕಾರ ಇದರ ಬಗ್ಗೆ ಗಮನ ಹರಿಸಲಿಲ್ಲ. ರೈತರಿಗೆ ಮಾರಕವಾದ ಕಾನೂನು ತಿದ್ದುಪಡಿ ಆಗಬೇಕಾಗಿದ್ದು ರೈತರ ಧ್ವನಿಯಾಗಿ ಕೆಲಸ ಮಾಡಲು ಸಂಸತ್ತಿಗೆ ಆಯ್ಕೆ ಬಯಸುತ್ತಿದ್ದೇನೆ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಜೆಡಿಎಸ್‌- ಕಾಂಗ್ರೆಸ್‌ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ತಿಳಿಸಿದರು.

ತಾಲೂಕಿನ ತ್ಯಾಗರ್ತಿಯಲ್ಲಿ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಪಕ್ಷದ ಮೊದಲ ಅಕ್ಷರ ಬಿ- ಬ್ಯುಸಿನೆಸ್‌ ನ್ನು ಸೂಚಿಸುತ್ತದೆ. ಈ ಬ್ಯುಸಿನೆಸ್‌ ಜನತಾ ಪಕ್ಷ ನಮ್ಮ ಸರ್ಕಾರದ ಯೋಜನೆಗಳನ್ನು ಉದ್ಘಾಟನೆ ಮಾಡಿ ತಮ್ಮದೆಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಸುಳ್ಳುಗಳನ್ನೇ ಗಟ್ಟಿಯಾಗಿ ಪದೇ ಪದೇ ಹೇಳಿದರೆ ಜನ ನಂಬುತ್ತಾರೆ ಎಂಬ ಹುಚ್ಚು ವಿಶ್ವಾಸವನ್ನು ಬಿಜೆಪಿ ಹೊಂದಿದೆ.  ಅವರಿಗೆ ಮತದಾರರು ನಾವು
ಮೂರ್ಖರಲ್ಲ ಎಂಬುದನ್ನು ತೋರಿಸಿಕೊಡಬೇಕಾಗಿದೆ ಎಂದರು.

ಜಿಪಂ ಸದಸ್ಯೆ, ಜಿಲ್ಲಾ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಅನಿತಾಕುಮಾರಿ ಮಾತನಾಡಿ, ಹಿಂದುತ್ವದ ಬಾವುಟ ಹಿಡಿದು ರೈತರ ಮಕ್ಕಳು, ಯುವಕರು ಅಡ್ಡ ದಾರಿ ಹಿಡಿಯುತ್ತಿದ್ದಾರೆ. ಪರಿಸ್ಥಿತಿಯ ಅರಿವು ಅವರಿಗಿಲ್ಲ. ಎಲ್ಲರನ್ನೂ ಸರಿದಾರಿಯಲ್ಲಿ ಕರೆದುಕೊಂಡು ಹೋಗಲು ಸಮರ್ಥ ನಾಯಕತ್ವ ಬೇಕಾಗಿದೆ.

ಭೂಮಿ ವಿಚಾರದಲ್ಲಿ ಈ ಭಾಗದ ರೈತರು ಸಂಕಷ್ಟ ಎದುರಿಸುತ್ತಿದ್ದು ಮಧು ಬಂಗಾರಪ್ಪನವರು ರೈತರ ಪರವಾಗಿ ನಿಲ್ಲಲು ಸಮರ್ಥ ನಾಯಕರಾಗಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಮಾತನಾಡಿ, ನಮ್ಮ ಸರ್ಕಾರ ಅನೇಕ ಉತ್ತಮ ಕೆಲಸಗಳನ್ನು ಮಾಡಿದ್ದರೂ ಜನರ ವಿಶ್ವಾಸ ಸಂಪಾದನೆ ಮಾಡಲು ವಿಫಲರಾಗಿದ್ದರಿಂದ ಸೋಲನುಭವಿಸಬೇಕಾಯಿತು. ಜನರ ನಡುವೆ ಅನೇಕ ಸವಾಲುಗಳಿವೆ. ಅದರ ಪರಿಹಾರ ಆಗಬೇಕಾದರೆ ಮತ್ತೂಮ್ಮೆ ಕೇಂದ್ರದಲ್ಲಿ ಕಾಂಗ್ರೆಸ್‌ ನೇತೃತ್ವದ ಸರ್ಕಾರ ಅಧಿ ಕಾರಕ್ಕೆ ಬರಬೇಕು ಎಂದರು.

ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿ, ಯಡಿಯೂರಪ್ಪ ರೈತರ ಪರವಾಗಿ ಕೆಲಸ ಮಾಡಿದ್ದರೆ ತಮ್ಮ ಹೆಸರು ಹೇಳಿ ಮತ ಯಾಚಿಸುತ್ತಿದ್ದರು. ಆದರೆ ಅದು ಆಗಿಲ್ಲ ಎಂಬ ಕಾರಣಕ್ಕೆ ಮೋದಿ ಹೆಸರಲ್ಲಿ ಮತ ಯಾಚಿಸುತ್ತಿದ್ದಾರೆ. ತಾಲೂಕಿನ ಗಡಿಭಾಗದ ರೈತರ ಜಮೀನನ್ನು ಮುಳುಗಡೆ ಮಾಡಿ ಕಲ್ಲೊಡ್ಡು ಡ್ಯಾಂ ನಿರ್ಮಾಣ ಮಾಡಲು ಹೊರಟಿರುವುದನ್ನು ನಾವು
ಖಂಡತುಂಡವಾಗಿ ವಿರೋ ಸುತ್ತೇವೆ ಎಂದು ಘೋಷಿಸಿದರು.

ತಾಲೂಕು ಕಾಂಗ್ರೆಸ್‌ ಘಟಕದ ಅಧ್ಯಕ್ಷ ಬಿ.ಆರ್‌. ಜಯಂತ್‌, ಜಿಲ್ಲಾ
ಜೆಡಿಎಸ್‌ ಅಧ್ಯಕ್ಷ ಎಂ.ಎಂ. ಮಂಜುನಾಥ ಗೌಡ, ವಿಧಾನ ಪರಿಷತ್‌
ಮಾಜಿ ಸದಸ್ಯೆ ಪ್ರಫುಲ್ಲಾ ಮಧುಕರ್‌, ತಾಪಂ ಅಧ್ಯಕ್ಷ ಮಲ್ಲಿಕಾರ್ಜುನ್‌ ಹಕ್ರೆ, ತ್ಯಾಗರ್ತಿ ಗ್ರಾಪಂ ಅಧ್ಯಕ್ಷ ರಾಮಕೃಷ್ಣ, ಮುಖಂಡರಾದ ಹೊನಗೋಡು ರತ್ನಾಕರ್‌, ಹಮೀದ್‌ ಖಾನ್‌, ಗುರುನಾಥ ಗೌಡ ವೀರಾಪುರ, ಗೋಪಿನಾಥ್‌ ತ್ಯಾಗರ್ತಿ, ಕಲ್ಸೆ ಚಂದ್ರಪ್ಪ, ಭರ್ಮಪ್ಪ, ಪ್ರೇಮ್‌ ಸಾಗರ್‌, ಹೊಳೆಯಪ್ಪ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next