Advertisement

ಸಾಗರ : ಶಿಶು ಮಾರಾಟ ಯತ್ನ ವಿಫಲಗೊಳಿಸಿದ ಮಕ್ಕಳ ರಕ್ಷಣಾ ಘಟಕ

10:40 PM Jul 12, 2022 | Team Udayavani |

ಸಾಗರ : ನವಜಾತ ಶಿಶು ಮಾರಾಟಯತ್ನ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಮಹಿಳಾ ಮತ್ತು ಮಕ್ಕಳ ರಕ್ಷಣಾ ಘಟಕ ವತಿಯಿಂದ ಮಹಿಳೆಯ ಮನವೊಲಿಸಿ ಶಿಶು ಮಾರಾಟ ಯತ್ನ ವಿಫಲಗೊಳಿಸಿದ ಘಟನೆ ಮಂಗಳವಾರ ತಾಲೂಕಿನ ತ್ಯಾಗರ್ತಿ ಸಮೀಪದ ಕೋಟೆಕೊಪ್ಪದಲ್ಲಿ ನಡೆದಿದೆ.

Advertisement

ಕೋಟೆಕೊಪ್ಪ ಗ್ರಾಮದ ಎಸ್ಸಿ ಕಾಲೋನಿಯ ಮಹಿಳೆಯೊಬ್ಬರು ನವಜಾತ ಶಿಶುವಿನ್ನು ಮಾರಾಟ ಮಾಡುತ್ತಾರೆ ಎಂಬ ಸಾರ್ವಜನಿಕ ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಮಕ್ಕಳ ರಕ್ಷಣಾ ಘಟಕದ ಕಾರ್ಯಕರ್ತರು ಮಗುವಿನ ಆರೈಕೆ ಮಾಡಲಾಗದಿದ್ದರೆ ಸರ್ಕಾರದ ವಶಕ್ಕೆ ಒಪ್ಪಿಸುವಂತೆ ಸೂಚನೆ ನೀಡಿ ಪ್ರಕರಣವನ್ನು ಮುಗಿಸಿದ್ದಾರೆ.

ಎಂಟು ವರ್ಷಗಳ ಹಿಂದೆ ಮೊದಲ ಮದುವೆಯಾಗಿದ್ದ ಮಹಿಳೆಯು ಗಂಡನನ್ನು ಬಿಟ್ಟು ತವರುಮನೆಯಲ್ಲಿ ವಾಸವಿದ್ದರು. ಇತ್ತೀಚೆಗೆ ಸ್ನೇಹಿತನ ಜೊತೆಗೆ ಎರಡನೇ ಮದುವೆಯಾಗುವ ಇಚ್ಛೆಯಿಂದ ಸಲುಗೆ ಬೆಳೆದು ಮಹಿಳೆ ಗರ್ಭಿಣಿಯಾಗಿದ್ದರು. ಈ ನಡುವೆ ಮದುವೆಯಾಗಬೇಕಿದ್ದ ವ್ಯಕ್ತಿ ಹಿಂಸೆ ನೀಡುತ್ತಿದ್ದ ಎಂಬ ಕಾರಣಕ್ಕಾಗಿ ಆತನಿಂದಲೂ ದೂರ ಆಗಿದ್ದಳು. ಹುಟ್ಟುವ ಮಗುವನ್ನು ಮಾರಾಟ ಮಾಡುತ್ತಾರೆ ಎಂದು ಸುದ್ದಿ ಹಬ್ಬಿದ್ದ ಹಿನ್ನೆಲೆಯಲ್ಲಿ ಶಿವಮೊಗ್ಗ ಮಕ್ಕಳ ರಕ್ಷಣಾ ಘಟಕದ ಕಾರ್ಯಕರ್ತರು ಈಕೆಯ ಚಲನವಲನದ ಮೇಲೆ ನಿಗಾ ಇಟ್ಟಿದ್ದರು.

ಇದನ್ನೂ ಓದಿ : ಮಳೆಯ ಆರ್ಭಟ: 24 ಗಂಟೆಯಲ್ಲಿ ಮಳೆಗೆ 10 ಬಲಿ: ಗುಜರಾತ್‌ನಲ್ಲಿ 7, ಮಹಾರಾಷ್ಟ್ರದಲ್ಲಿ 3 ಬಲಿ

ಮಹಿಳೆ ಹತ್ತು ದಿನಗಳ ಹಿಂದೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮನೆಯಲ್ಲಿ ಬಡತನದ ಕಾರಣದಿಂದ ಶಿಶು ಮಾರಾಟ ಯತ್ನ ನಡೆಯುತ್ತಿದೆ ಎಂಬ ಸಂಶಯ ತಿಳಿದ ಮಕ್ಕಳ ರಕ್ಷಣಾ ಘಟಕದ ಕಾರ್ಯಕರ್ತರು ಮಹಿಳೆಯ ಮನವೊಲಿಸಿ ಮಗುವನ್ನು ಸಾಕಲು ಕಷ್ಟವಾದರೆ ಸರ್ಕಾರದ ವಶಕ್ಕೆ ಒಪ್ಪಿಸುವಂತೆ ಮನವೊಲಿಸಿದ್ದಾರೆ. ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ರಕ್ಷಣಾ ಘಟಕದ ಕಾರ್ಯಕರ್ತೆ ಶಾಂತಾ ಹಿರೇಬಿಲಗುಂಜಿ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ವಿಮಲಾಕ್ಷಿ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next