Advertisement

ಸಗರ: ಸಂಭ್ರಮದ ಕರಬಸವೇಶ್ವರ ರಥೋತ್ಸವ

12:52 PM Feb 25, 2020 | Suhan S |

ಶಹಾಪುರ: ತಾಲೂಕಿನ ಸಗರ ಗ್ರಾಮದಲ್ಲಿ ಶ್ರೀ ಕರಬಸವೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಸಂಭ್ರಮದ ರಥೋತ್ಸವ ನಡೆಯಿತು.

Advertisement

ರಥೋತ್ಸವದ ಅಂಗವಾಗಿ ಬೆಳಗ್ಗೆಯಿಂದಲೇ ಭಕ್ತರು ಕರಬಸವೇಶ್ವರರ ಕತೃ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದರು. ಅಭಿಷೇಕ, ನೈವೇದ್ಯ ಸಮರ್ಪಿಸಿ ದರ್ಶನ ಪಡೆದರು. ರಥೋತ್ಸವದಲ್ಲಿ ಭಾಗವಹಿಸಿದ್ದ ಭಕ್ತರು ಉತ್ತತ್ತಿ, ಬಾಳೆಹಣ್ಣು ಎಸೆದು ಇಷ್ಠಾರ್ಥ ಈಡೇರಿಕೆಗೆ ಬೇಡಿಕೊಂಡರು. ಶ್ರೀಮಠದ ಮರುಳ ಮಹಾಂತ ಶಿವಾಚಾರ್ಯರು, ನಾಗಠಾಣಮಠದ ಸೋಮಶೇಖರ ಶಿವಾಚಾರ್ಯರು, ಆನಂದ ಆಶ್ರಮದ ಶರಣಮ್ಮ ತಾಯಿ ಇದ್ದರು. ಗ್ರಾಮದ ಒಕ್ಕಲಗೇರ ಹಿರೇಮಠದಿಂದ ಅಗಸಿ ಬಸವೇಶ್ವರ ದೇವಸ್ಥಾನದವರೆಗೆ ಸಾವಿರಾರು ಭಕ್ತರ ಜಯಘೋಷದ ಮಧ್ಯ ರಥೋತ್ಸವ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next