Advertisement

ಸಾಹಿತ್ಯ ಪ್ರಾಧಿಕಾರಗಳಿಗೆ ಅನ್ಯಾಯ

05:20 PM Oct 30, 2019 | Team Udayavani |

ಸಾಗರ: ಸಮಾಜದಲ್ಲಿ ಸಾಂಸ್ಥಿಕ ಸ್ವರೂಪದಲ್ಲಿ ಸಂಸ್ಕೃತಿಯನ್ನು ಕಟ್ಟುವ ಪ್ರಯತ್ನ ನಡೆದ ಸಂದರ್ಭಗಳಲ್ಲಿ ಕುರೂಪದ ಸೃಷ್ಟಿಯಾಗಿದೆಯೇ ವಿನಃ ಅನುಕೂಲಗಳಾಗಿಲ್ಲ. ಸನ್ನಡತೆಯ ಗುಣಗಳನ್ನು ಹೊಂದಿರುವ ವ್ಯಕ್ತಿಗಳೇ ನಾಡಿನ ಒಂದೊಂದು ಇಟ್ಟಿಗೆಗಳಾಗಿ ಸಮಾಜವನ್ನು ಕಟ್ಟಿದ್ದಾರೆ ಎಂದು ಚಿಂತಕ ಡಾ| ರಾಜೇಂದ್ರ ಚೆನ್ನಿ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ನಗರದ ಬ್ರಾಸಂ ಸಭಾಭವನದಲ್ಲಿ ಶನಿವಾರ ಒಡನಾಟ ಸಂಸ್ಥೆ ವತಿಯಿಂದ ಲೇಖಕ ವಿಲಿಯಂ ಕುರಿತು ಹೊರತಂದಿರುವ “ಒಡನಾಡಿ’ ಸಂಭಾವನಾ ಗ್ರಂಥವನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿ, ಕನ್ನಡ ಭಾಷೆ, ಸಾಹಿತ್ಯದ ಬಗ್ಗೆ ಪೂರ್ವಾಗ್ರಹಗಳು ಹೆಚ್ಚುತ್ತಿವೆ. ರಾಜಕೀಯವನ್ನೇ ಸಾಹಿತ್ಯಿಕ ವಿಮರ್ಶೆಗೂ ಅನ್ವಯಿಸಲಾಗುವ ದುರಂತವನ್ನು ಕಾಣುತ್ತಿದ್ದೇವೆ. ಇದರಿಂದ ವಿವಿಧ ಸಾಹಿತ್ಯ ಪ್ರಾಧಿಕಾರಗಳಿಗೆ ಅನ್ಯಾಯವಾಗಿದೆ ಎಂದು ಪ್ರತಿಪಾದಿಸಿದರು.

ಬೈಬಲ್‌ನಂತಹ ಕೃತಿಯನ್ನು ಅಧಿ ಕಾರ ಕೇಂದ್ರದಿಂದ ಬಿಡಿಸಿ ತಂದು ಜನಸಾಮಾನ್ಯರ ಭಾಷೆಯಲ್ಲಿ ಬರೆಯುವುದು ಸುಲಭದ ಕೆಲಸವಲ್ಲ. ಭಾಷಾಂತರದ ನಡುವೆಯೂ ಸಂಸ್ಕೃತಿ ಪಲ್ಲಟ, ಅ ಧಿಕಾರ ಬದಲಾವಣೆ, ರಾಜಕೀಯ ಇವೆಲ್ಲವೂ ಇರುತ್ತದೆ. ಆದರೆ ಲೇಖಕ ವಿಲಿಯಂ ಬೈಬಲ್‌ನಂತಹ ಕೃತಿಯನ್ನು ಕನ್ನಡ ಭಾಷೆಯಲ್ಲಿ ಬರೆಯುವ ಜೊತೆಗೆ, ಕ್ರಿಸ್ತಕಾವ್ಯದ ಮೂಲಕ ಕ್ರಿಸ್ತನ ಬದುಕನ್ನು ಕಟ್ಟಿಕೊಡುವ ಕೆಲಸ ಮಾಡಿದ್ದಾರೆ ಎಂದರು.

ಹರಿದು ಹಂಚಿ ಹೋಗಿದ್ದ ಕನ್ನಡ ನಾಡನ್ನು ಒಟ್ಟಾಗಿ ಕಟ್ಟಲು ಪ್ರಭುತ್ವ ಮತ್ತು ಸರ್ಕಾರಕ್ಕಿಂತ ಆಯಾ ಸಂದರ್ಭದ ಲೇಖಕರು, ಸಾಹಿತಿಗಳು ವಿಶೇಷವಾದ ಪ್ರಯತ್ನ ನಡೆಸಿದ್ದಾರೆ. ಸಾಂಸ್ಕೃತಿಕ ಜಗತ್ತಿನಲ್ಲಿ ಸಾಗರದ ಛಾಪಿದೆ. ದೇಶ, ರಾಜ್ಯದ ವಿವಿಧ ಸಂಸ್ಕೃತಿಗಳನ್ನು ಪ್ರತಿನಿ ಸುತ್ತಲೇ ತನ್ನ ಸ್ವಂತಿಕೆಯನ್ನು ಮೆರೆಯುವ ಗಟ್ಟಿತನ ಸಾಗರಕ್ಕಿದೆ. ಆ ನೆಲದ ವಿಲಿಯಂ ಸಮುದಾಯದ ಒಳಗೇ ಸಾರ್ಥಕತೆಯನ್ನು ಕಂಡುಕೊಂಡು ಸಾಹಿತ್ಯ ಸೇವೆ ಸಲ್ಲಿಸಿದ್ದಾರೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಸಾಹಿತಿ ಡಾ| ನಾ.ಡಿಸೋಜಾ, ಕಳೆದ 28 ವರ್ಷಗಳಿಂದ ಒಡನಾಟ ಸಂಸ್ಥೆಯ ಕಾರ್ಯದರ್ಶಿಯಾಗಿ ವಿಲಿಯಂ ಸಂಸ್ಕೃತಿ
ಕಟ್ಟುವ ಕೆಲಸವನ್ನು ಮಾಡಿಕೊಂಡು ಬರುತ್ತಿದ್ದಾರೆ. ವಿಲಿಯಂ ಯಾವತ್ತೂ ಹೆಸರಿಗಾಗಿ ಕೆಲಸ ಮಾಡಿದವರಲ್ಲ. ಯಾವುದೇ ಒಳದಾರಿ ಮೂಲಕ ಪ್ರಸಿದ್ಧಿಗೆ ಬರುವ ಪ್ರಯತ್ನ ಮಾಡಿದವರೂ ಅಲ್ಲ. ಎಲ್ಲರಿಗೂ ಪ್ರೀತಿ ಪಾತ್ರರಾಗಿ ಸಾಹಿತ್ಯ ಕೃಷಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಬಂದಿದ್ದಾರೆ.

Advertisement

ಅವರಲ್ಲಿನ ವಿಶೇಷ ಪ್ರತಿಭೆ ಗುರುತಿಸಿ ಅಭಿಮಾನಿಗಳು ಹೊರಗೆ ತಂದಿರುವ ಒಡನಾಡಿ ಗ್ರಂಥ 50ಕ್ಕೂ ಹೆಚ್ಚಿನ ಮೌಲಿಕ ಲೇಖನ ಒಳಗೊಂಡಿದೆ. ಕ್ರಿಸ್ತ ಲೇಖಕರು ಕೃತಿ ಬರೆದಾಗ ಮತಪ್ರಚಾರದ ವಾಸನೆ ಬರುತ್ತದೆ. ಆದರೆ ವಿಲಿಯಂ ಅದರಿಂದ ದೂರವಿದ್ದು ಪ್ರಾಮಾಣಿಕವಾಗಿ ಮತ್ತು ನಿಷ್ಠುರವಾಗಿ ಕೃತಿ ರಚನೆಯಲ್ಲಿ ತೊಡಗಿಕೊಂಡವರು. ಕನ್ನಡ ನಾಡಿಗೆ ವಿಲಿಯಂ ನೀಡಿರುವ ಕ್ರಿಸ್ತಕಾವ್ಯ ಕನ್ನಡಭಾಷೆ ಇರುವ ತನಕ ಇರುತ್ತದೆ ಎಂದು ಹೇಳಿದರು.

ಡಾ| ಸರ್ಫಾಜ್‌ ಚಂದ್ರಗುತ್ತಿ, ನೇಕಾರ ಪ್ರಕಾಶನದ ರಾಮಕೃಷ್ಣ ಹಾಜರಿದ್ದರು. ಗಣಪತಿ ಎಸ್‌.ಎಂ. ಸ್ವಾಗತಿಸಿದರು. ಹಾಲಪ್ಪ ವಂದಿಸಿದರು. ಲಕ್ಷ್ಮೀ ನಾರಾಯಣ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next