Advertisement

ಸಾಗರ: ಚರಂಡಿಯಲ್ಲಿ ಮೃತ ದೇಹ ಪತ್ತೆ

09:22 AM Mar 01, 2022 | Team Udayavani |

ಸಾಗರ: ಇಲ್ಲಿನ ಬಿಎಚ್ ರಸ್ತೆಯಲ್ಲಿನ ಖಾಸಗಿ ಬಸ್ ನಿಲ್ದಾಣದ ಚರಂಡಿಯಲ್ಲಿ ಸೋಮವಾರ ವ್ಯಕ್ತಿಯೋರ್ವನ ಮೃತ ದೇಹ ಪತ್ತೆಯಾಗಿದೆ.

Advertisement

ಮೃತ ವ್ಯಕ್ತಿಯನ್ನು ಕೇರಳದ ಕೊಟ್ಟಾಯಂನ ಥಾಮಸ್ (50) ಎಂದು ಗುರುತಿಸಲಾಗಿದೆ.

ಮದ್ಯ ಸೇವನೆಯ ಕಾರಣದಿಂದ ಥಾಮಸ್ ಆಯತಪ್ಪಿ ಚರಂಡಿಗೆ ಭಾನುವಾರ ರಾತ್ರಿ ಬಿದ್ದಿರಬಹುದೆಂದು ಶಂಕಿಸಲಾಗಿದ್ದು, ಸೋಮವಾರ ನಗರಸಭೆ ಸಿಬ್ಬಂದಿ ಮೃತ ದೇಹ ಗಮನಿಸಿದ್ದಾರೆ.

ಅಸಹಜ ಸಾವಿನ ಸಂಬಂಧ ನಗರಸಭೆ ಸಿಬ್ಬಂದಿ ನೀಡಿದ ದೂರನ್ನು ಪೇಟೆ ಠಾಣೆ ಪೊಲೀಸರು ದಾಖಲಿಸಿಕೊಂಡಿದ್ದಾರೆ.   ಸಂಬಂಧಿಕರಿಗೆ ಮಾಹಿತಿ ನೀಡಿದ್ದು, ಸಾಗರಕ್ಕೆ ಪ್ರಯಾಣ ಆರಂಭಿಸಿದ್ದಾರೆ ಎಂದು ಪೊಲೀಸ್ ಮೂಲ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next