Advertisement
ಹೂಳಲ್ಲಿ ಸಿಲುಕಿದ ಯುವಕರು!: ನಗರದ ಗಣಪತಿ ಕೆರೆಗೆ ಜಲಮೂಲದ ಸರಪಳಿಯ ಏಳು ಕೆರೆಗಳಲ್ಲಿ ಒಂದಾದ ಚಿಪಿÛ ಲಿಂಗದಹಳ್ಳಿಯ ಬಂಗಾರಮ್ಮನ ಕೆರೆ ಹೂಳು ತೆಗೆದರೆ ನಗರದ ಹಿತವನ್ನೂ ಕಾಪಾಡಿದಂತಾಗುತ್ತದೆ. ಇಲ್ಲಿಗೆ ಬರುವ ಕಾಡುಪ್ರಾಣಿಗಳಿಗೂ ನೀರಿನ ಆಸರೆಯಾಗುತ್ತದೆ. ಇಲ್ಲಿನ ಹೂಳು ನಿರ್ವಹಣೆಗೂ ಸಾಕಷ್ಟು ಅವಕಾಶಗಳಿವೆ ಎಂಬುದನ್ನು ಪರಿಗಣಿಸಿ 2017ರ ಮೇ ತಿಂಗಳಿನಲ್ಲಿ ಸಾಗರ ಜೀವಜಲ ಕಾರ್ಯಪಡೆ ನಿರ್ಧರಿಸಿದಾಗ ತಾವೇ ಸಾಲದ ಹೂಳಿನಲ್ಲಿ ಸಿಲುಕಿಕೊಳ್ಳುತ್ತೇವೆ ಎಂಬ ಚಿಕ್ಕ ಅನುಮಾನವೂ ಯುವಕರ ಸಮೂಹದಲ್ಲಿರಲಿಲ್ಲ. ಆರು ಸಾವಿರ ಕ್ಯೂಬಿಕ್ ಹೂಳು ತೆಗೆಯಲಾಯಿತಾದರೂ ಅದಕ್ಕೆ ಆದ ವೆಚ್ಚ ತುಂಬುವಷ್ಟು ದೇಣಿಗೆ ಸಂಗ್ರಹವಿರಲಿಲ್ಲ.
Related Articles
Advertisement
ಆ ಸಮಯದಲ್ಲಿ ಹೂಳು ತೆಗೆಯುವ ಕಾಮಗಾರಿಗೆ 5.3 ಲಕ್ಷ ರೂ. ವೆಚ್ಚದ ಅಂದಾಜು ಮಾಡಲಾಗಿತ್ತು. ಆದರೆ ನಗರದಿಂದ ದೂರವಾದ ಕೆರೆಯಾದ ಹಿನ್ನೆಲೆಯಲ್ಲಿಯೂ ಸಾರ್ವಜನಿಕರಿಂದ ನಿರೀಕ್ಷಿತವಾದ ದೇಣಿಗೆ ಸಂಗ್ರಹವಾಗಲಿಲ್ಲ. ಕೆಲವು ವ್ಯಾಪಾರಿಗಳು ಅದನ್ನು ಬಹಿರಂಗವಾಗಿಯೂ ಪ್ರಸ್ತಾಪಿಸಿದರು. ಹಣ ಸಂಗ್ರಹದಲ್ಲಾದ ಹಿನ್ನಡೆಯ ಜೊತೆಗೆ ಸುಮಾರು 11.5 ಲಕ್ಷ ರೂ.ಗಳ ವೆಚ್ಚ ಮಾಡಿಯೂ ಶೇ. 30ರಷ್ಟು ಮಾತ್ರ ಆಗಿತ್ತು.
ಈ ಬಗ್ಗೆ ವಿವರಿಸುವ ಕಲ್ಮನೆ ಗ್ರಾಪಂ ಸದಸ್ಯ ಎಲ್.ವಿ. ಅಕ್ಷರ, ಒಂದು ರೀತಿಯಲ್ಲಿ ಆ ದಿನದ ಹಿನ್ನಡೆ ನಮಗೆ ಒಳ್ಳೆಯದನ್ನೇ ಮಾಡಿತು. ಯಾವುದೇ ಕೆರೆಯ ಹೂಳು ತೆಗೆಯಲು ನಿರ್ಧರಿಸಿದ ವರ್ಷವೇ ಹೂಳು ತೆಗೆಯಲು ಮುಂದಾಗಬಾರದು. ಒಂದು ವರ್ಷ ಕಾಲ ಕೆರೆಯ ನೀರಿನ ತೂಬು ತೆಗೆದು ಕೆರೆ ಸಂಪೂರ್ಣವಾಗಿ ಒಣಗಲು ಅವಕಾಶ ಕಲ್ಪಿಸಬೇಕು. ಇದರಿಂದ ಕರೆಯ ಒಳಗೆ ಇಳಿದು ಜೆಸಿಬಿ, ಹಿಟಾಚಿಗಳು ಸುಲಭವಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ. ಶುಷ್ಕ ಹೂಳು ಸಾಗಿಸುವುದು ಕೂಡ ಸಲೀಸು. ಇದರಿಂದ ಕಾಮಗಾರಿಯ ಶೇ. 40ರಷ್ಟು ಕೆಲಸ ಸುಲಭವಾಗುತ್ತದೆ. ನಮಗೆ ಹಣದ ಮುಗ್ಗಟ್ಟು ಎದುರಾದುದರಿಂದ 2018ರಲ್ಲಿ ಯಾವುದೇ ಚಟುವಟಿಕೆ ನಡೆಸದಿದ್ದುದು ಈಗ ಕೌಶಲ್ಯದಿಂದ ಕೆಲಸ ಮಾಡುವುದಕ್ಕೆ ಕಾರಣವಾಯಿತು ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ಕರ್ನಾಟಕ ಬ್ಯಾಂಕ್‌ನಿಂದ ಜೀವ!
2019ರಲ್ಲಿ ಸ್ವಾನ್ ಆ್ಯಂಡ್ ಮ್ಯಾನ್ ಸಂಸ್ಥೆ ವತಿಯಿಂದ ಬಂಗಾರಮ್ಮನ ಕೆರೆ ಹೂಳೆತ್ತಲು ಬೇರೆಬೇರೆ ಸಂಘ-ಸಂಸ್ಥೆಗಳಿಗೆ, ದಾನಿಗಳಿಗೆ ಪತ್ರ ಬರೆಯಲಾಗಿತ್ತು. ಮಂಗಳೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ಕರ್ನಾಟಕ ಬ್ಯಾಂಕ್ 5 ಲಕ್ಷ ರೂ. ಕೆರೆ ಹೂಳೆತ್ತುವ ಕಾಮಗಾರಿಗೆ ನೀಡಿತು. ಇದರಿಂದ ಮತ್ತೆ ಹೂಳೆತ್ತುವ ಕಾಮಗಾರಿಗೆ ಜೀವ ಬಂದಿತು. ಸ್ಥಳೀಯವಾಗಿಯೂ ಮತ್ತೆ ಜನ ದೇಣಿಗೆ ನೀಡಿದರು. ಸ್ಥಳೀಯ ಗ್ರಾಮದ ಮಹಿಳೆಯರು ತಮ್ಮ ಉಳಿತಾಯದ 20 ಸಹಸ್ರ ರೂಪಾಯಿಗಳನ್ನು ಲಿಂಗದಹಳ್ಳಿಯ ಸುಜಲಶ್ರೀ ಲಕ್ಷ್ಮೀ ಸ್ವ-ಸಹಾಯ ಸಂಘದ ಹೆಸರಿನಲ್ಲಿ ನೀಡಿದರು. ಸಂಪೂರ್ಣ ಕಾಮಗಾರಿ ಮುಕ್ತಾಯವಾಗಿದ್ದು ಈ ಮೇ ಬಿಸಿಲಿನಲ್ಲಿಯೂ ಕೆರೆಗೆ ನೀರು ಹರಿದು ಬಂದು ತುಂಬುತ್ತಿರುವುದು ವಿಸ್ಮಯ ಉಂಟು ಮಾಡುವಂತಿದೆ. ಊರಿನ ಯುವಕರು ಮದುವೆ ಮನೆಯ ಸಿದ್ಧತೆ ನಡೆಸಿದಂತೆ ಕೆರೆ ಹಬ್ಬದ ಕೆಲಸದಲ್ಲಿದ್ದಾರೆ. ಸುತ್ತಮುತ್ತಲ ಗ್ರಾಮದವರು, ಕೆರೆಗೆ ಹೂಳು ತೆಗೆಯಲು ಹಣಕಾಸಿನ ನೆರವಿತ್ತವರಿಗೆ ಕರೆಯಿತ್ತು ಊಟ ಮಾಡಿ ಹೋಗಿ ಎಂದು ಆಹ್ವಾನಿಸುತ್ತಿದ್ದಾರೆ. ತಂಡದ ರೂವಾರಿ ಸ್ವಾನ್ ಆ್ಯಂಡ್ ಮ್ಯಾನ್ ಸಂಸ್ಥೆಯ ಅಖೀಲೇಶ್ ಚಿಪ್ಳಿ, ಹಾಪ್‌ಕಾಮ್ಸ್ ಉಪಾಧ್ಯಕ್ಷ ಎಲ್.ವಿ. ಸತೀಶ್, ಸಾಮಾಜಿಕ ಕಾರ್ಯಕರ್ತ ಜಯಪ್ರಕಾಶ್ ಗೋಳಿಕೊಪ್ಪ, ಗ್ರಾಪಂ ಮಾಜಿ ಸದಸ್ಯ ಸುರೇಶ್ ಗೌಡ, ದಿನೇಶ್ ಎಲ್.ಟಿ., ಎಲ್.ವಿ. ಅಶೋಕ್ ಮೊದಲಾದವರ ತಂಡ ಉತ್ಸಾಹದಲ್ಲಿದ್ದು, ಮಲೆನಾಡಿನ ಹಳ್ಳಿಗಳಲ್ಲಿ ಬೋರ್‌ವೆಲ್ಗಳ ವ್ಯಾಮೋಹಕ್ಕೆ ಸಿಲುಕಿರುವವರ ಮಧ್ಯೆ ಭಿನ್ನರಾಗಿ ಕಾಣಿಸುತ್ತಿದ್ದಾರೆ.