ಸಾಗರ: ನಗರದ ಸೊರಬ ರಸ್ತೆ ಸೇರಿದಂತೆ ವಿವಿಧ ಕಡೆಗಳಲ್ಲಿನ ಔಷಧ ಅಂಗಡಿಗಳಿಗೆ ಕಾನೂನು ಮಾಪನ ಶಾಸ್ತ್ರ ಇಲಾಖೆ (ಎಲ್‌ಎಂಡಿ) ಅಧಿಕಾರಿಗಳು ದಾಳಿ
ಮಾಡಿದ ಘಟನೆ ಬುಧವಾರ ನಡೆದಿದೆ. ಈ ವೇಳೆ ಪರಿಶೀಲನೆ ನಡೆಸಿದ ಅಧಿಕಾರಿಗಳು ಎರಡು ಔಷಧ ಮಳಿಗೆಗಳ ಮಾಲೀಕರಿಗೆ ದಂಡ ವಿಧಿಸಿ, ಎಚ್ಚರಿಕೆ ನೀಡಿದ್ದಾರೆ.
ಇಲಾಖೆಯ ಸಹಾಯಕ ನಿಯಂತ್ರಕ ಎಚ್.ಎಸ್. ರಾಜು ಪತ್ರಿಕೆಯೊಂದಿಗೆ ಮಾತನಾಡಿ, ಕೋವಿಡ್ 19ರ ಹಿನ್ನೆಲೆಯಲ್ಲಿ ನಗರದ ಕೆಲವು ಔಷಧ ಮಳಿಗೆಗಳಲ್ಲಿ ಮಾಸ್ಕ್ ಹಾಗೂ ಸ್ಯಾನಿಟೈಸರ್‌ಗಳನ್ನು ಹೆಚ್ಚಿನ ಬೆಲೆಗಳಿಗೆ ಮಾರಲಾಗುತ್ತಿದೆ ಎಂಬ ದೂರುಗಳಿದ್ದವು. ಈ ಹಿನ್ನೆಲೆಯಲ್ಲಿ 5 ಅಂಗಡಿಗಳ ಮೇಲೆ ದಾಳಿ ಕಾರ್ಯಾಚರಣೆ ನಡೆಸಲಾಗಿದೆ. ಕಾನೂನು ಮಾಪನ ಪಟ್ಟಣ ಸಾಮಗ್ರಿ 18(2) ನಿಯಮದ ಪ್ರಕಾರ ಕಾನೂನು ಉಲ್ಲಂಘನೆಯಾದ ಸಂಗತಿ ದಾಳಿಯ ಸಂದರ್ಭ ಗಮನಕ್ಕೆ ಬಂದಿದೆ.
16 ರೂ. ಮುಖಬೆಲೆಯ ಮಾಸ್ಕ್ಗಳನ್ನು ಹೆಚ್ಚುವರಿ ಹಣಕ್ಕೆ ಮಾರಲಾಗುತ್ತಿದೆ ಎಂದರು. ಪರೀಕ್ಷಾರ್ಥ ನಮ್ಮ ತಂಡದ ಸದಸ್ಯರು ಗ್ರಾಹಕರಂತೆ ಖರೀದಿ ಮಾಡುತ್ತಾರೆ. ಅಂತಹ ಪರೀಕ್ಷಾ ಖರೀದಿಯ ಸಂದರ್ಭ 6 ಔಷಧ ಮಳಿಗೆಗಳಲ್ಲಿ ಕಾನೂನು ಉಲ್ಲಂಘನೆಯಾಗಿದ್ದು, 5 ಪ್ರಕರಣಗಳಲ್ಲಿ 30 ಸಾವಿರ ರೂ. ದಂಡ ವಿಧಿ ಸಲಾಗಿದೆ. ಸ್ಯಾಂಪಲ್ ವಸ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಪಡಿತರ ಹಾಗೂ ಇನ್ನಿತರ ವಸ್ತುಗಳ ಖರೀದಿ ಸಂದರ್ಭದಲ್ಲಿ ತೂಕದಲ್ಲಿ ಮತ್ತು ಬೆಲೆಗಳಲ್ಲಿ ಮೋಸ ಕಂಡುಬಂದರೆ ಗ್ರಾಹಕರು 8050024760 ಸಂಖ್ಯೆಗೆ ಕರೆ ಮಾಡಿ, ದೂರು ಸಲ್ಲಿಸಬಹುದು ಎಂದರು. ದಾಳಿ ಕಾರ್ಯಾಚರಣೆ ಸಂದರ್ಭದಲ್ಲಿ ನಿರೀಕ್ಷಕರಾದ ಎಚ್.ಎಸ್. ವಸಂತಕುಮಾರ, ಧನಲಕ್ಷಿ¾, ಶ್ರೀನಿವಾಸ ಮತ್ತಿತರರು ಇದ್ದರು