Advertisement

Sagara: ಅಪಘಾತಕ್ಕೆ ಒಳಗಾದ ಅಂಬ್ಯುಲೆನ್ಸ್!

03:40 PM May 12, 2024 | Kavyashree |

ಸಾಗರ: ತಾಲೂಕಿನ ಶರಾವತಿ ಹಿನ್ನೀರಿನ ಬ್ಯಾಕೋಡ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಪ್ಪದೂರು ಕ್ರಾಸ್‌ನಲ್ಲಿ ಚಾಲಕನ ಬೇಜವಾಬ್ದಾರಿತನದಿಂದ 108 ಅಂಬ್ಯುಲೆನ್ಸ್ ಅಪಘಾತಕ್ಕೆ ಒಳಗಾದ ಘಟನೆ‌ ಮೇ. 11ರ ಶನಿವಾರ ರಾತ್ರಿ ನಡೆದಿದೆ.

Advertisement

108 ಅಂಬ್ಯುಲೆನ್ಸ್ ಚಾಲಕ ಜಯಂತ್ ಗೊರಗೋಡು ಕೆಲ ದಿನಗಳಿಂದ ಬೇಜವಬ್ದಾರಿಯಿಂದ ವಾಹನ ಚಾಲನೆ ಮಾಡುತ್ತಿದ್ದಾರೆ. ಕೆಲವೊಮ್ಮೆ ಕುಡಿದು ವಾಹನ ಚಾಲನೆ ಮಾಡುತ್ತಿದ್ದರು. ಶನಿವಾರ ನಡೆದ ಅಪಘಾತ ಸಹ ಜಯಂತ್ ಅವರ ಬೇಜವಬ್ದಾರಿತನದಿಂದಲೇ ನಡೆದಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಬ್ಯಾಕೋಡು ಪ್ರಾಥಮಿಕ ಆರೋಗ್ಯ ಆರೋಗ್ಯ ಕೇಂದ್ರಕ್ಕೆ ಸೇರಿದ್ದ 108 ಅಂಬ್ಯುಲೆನ್ಸ್ ಇದಾಗಿದೆ. ಕರೂರು ಹೋಬಳಿಯಲ್ಲಿರುವ 22 ಸಾವಿರ ಜನಸಂಖ್ಯೆಗೆ ಇರುವುದೇ ಎರಡು ಅಂಬ್ಯುಲೆನ್ಸ್. ತುರ್ತು ಸಂದರ್ಭದಲ್ಲಿ ಅಂಬ್ಯುಲೆನ್ಸ್ ನಂಬಿ ಜನ ಆರೋಗ್ಯ ಸೇವೆ ಪಡೆಯುತ್ತಿದ್ದಾರೆ. ಆದರೆ ಚಾಲಕನ ಬೇಜವಬ್ದಾರಿತನದಿಂದ ಒಂದು ಅಂಬ್ಯುಲೆನ್ಸ್ ಅಪಘಾತವಾಗಿದೆ. ಅದೃಷ್ಟವಶಾತ್ ಯಾರೂ ಅಂಬ್ಯುಲೆನ್ಸ್‌ನಲ್ಲಿ ಇಲ್ಲದೆ ಇರುವುದರಿಂದ ಅಪಾಯ ಸಂಭವಿಸಿಲ್ಲ. ತಕ್ಷಣ ಅಂಬ್ಯುಲೆನ್ಸ್ ರಿಪೇರಿಗೆ ಆರೋಗ್ಯ ಇಲಾಖೆ ಕ್ರಮ ಕೈಗೊಳ್ಳಲು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ತುಮರಿ ದ್ವೀಪಕ್ಕೆ ಸಾಮಾನ್ಯವಾಗಿ ಬಳಸಿದ ವಾಹನಗಳನ್ನೇ ಅಂಬ್ಯುಲೆನ್ಸ್ ಆಗಿ ಒದಗಿಸಲಾಗುತ್ತಿದೆ. ಅವು ಪದೇ ಪದೇ ಹಾಳಾಗಿ ಅದರ ಆರೋಗ್ಯವನ್ನೇ ಸಂಶಯಿಸುವಂತಾಗಿದೆ. ಅದರ ನಡುವೆ ಕುಡುಕ ಡ್ರೈವರ್‌ಗಳಿಂದಾಗಿ ಇನ್ನಷ್ಟು ಸಮಸ್ಯೆಯಾಗುತ್ತಿದೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next