Advertisement
ಜೂನ್21ರಂದು ಸೊಪ್ಪಿನ ಬೆಟ್ಟ ಸಂರಕ್ಷಣೆ ಹಾಗೂ ವನಮಹೋತ್ಸವ ಕಾರ್ಯಕ್ರಮದಲ್ಲಿ ಶಾಸಕ ಬೇಳೂರು ಪಾಲ್ಗೊಂಡಿದ್ದರು. ಹಲಸಿನ ಗಿಡ ನೆಟ್ಟು, ಇದರ ಫಲವನ್ನು ನಾವೇ ತಿನ್ನುವ ಕಾಲ ಬರಲಿ ಎಂದು ಆಶಯ ವ್ಯಕ್ತಪಡಿಸಿದ್ದರು. ಈ ನಡುವೆ ಆಗಸ್ಟ್ 22ರಂದು ಕೆಲವು ದುಷ್ಕರ್ಮಿಗಳು ತಮ್ಮ ಒತ್ತುವರಿಯನ್ನು ಕಂದಾಯ ಇಲಾಖೆ ತೆರವುಗೊಳಿಸಿದ ಹಿನ್ನೆಲೆಯಲ್ಲಿ ಬಾಳೆಹಳ್ಳಿಯ ಗ್ರಾಮಸ್ಥರ ಕೈವಾಡ ಇದೆ ಎಂದು ಶಂಕಿಸಿ, ಈ ಭಾಗದಲ್ಲಿ ನೆಟ್ಟ ಗಿಡಗಳನ್ನು ಕಿತ್ತು, ಕತ್ತರಿಸಿ, ಟ್ರೀ ಗಾರ್ಡ್ಗಳನ್ನು ನಾಶಗೊಳಿಸಿದ ಘಟನೆ ನಡೆದಿತ್ತು. ಈ ಸಂಬಂಧ ಅರಣ್ಯ ಇಲಾಖೆಯಲ್ಲಿ ದೂರು ದಾಖಲಾಗಿತ್ತು.ಈ ನಡುವೆ ಬಾಳೆಹಳ್ಳಿಯ ಗ್ರಾಮಸ್ಥರನ್ನು ಸಂಪರ್ಕಿಸಿದ ಅರಣ್ಯ ಇಲಾಖೆ, ಮಳೆಗಾಲ ಮುಕ್ತಾಯವಾಗದೇ ಇರುವ ಹಿನ್ನೆಲೆಯಲ್ಲಿ ಇನ್ನೊಮ್ಮೆ ವನಮಹೋತ್ಸವ ಮಾಡುವ ಇಂಗಿತ ವ್ಯಕ್ತಪಡಿಸಿತ್ತು. ಸಕಾರಾತ್ಮಕವಾಗಿ ಗ್ರಾಮಸ್ಥರು ಸ್ಪಂದಿಸಿದ್ದರಿಂದ ಇಜೆ ಮನೆ ಗ್ರಾಪಂ ಅಧ್ಯಕ್ಷೆ ನಾಗವೇಣಿ ಪ್ರವೀಣ ಮತ್ತೊಂದು ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.