ಸಾಗರ : ಅಕ್ಕಪಕ್ಕದ ಮನೆಯವರ ಗಡಿ ವ್ಯಾಜ್ಯದ ಬೇಲಿ ಜಗಳದ ಕಾರಣ ಕೋಳಿಗಳಿಗೆ ವಿಷ ಹಾಕಿ ಕೊಲ್ಲಲಾಗಿದೆ ಎಂಬಂತಹ ಘಟನೆ ತಾಲೂಕಿನ ಬರೂರು ಗ್ರಾಮದಲ್ಲಿ ನಡೆದಿದ್ದು ಈರೇಶ್ ಕುಮಾರ್ ಎಂಬುವವರು ನೆರೆಮನೆ ವಾಸಿ ಜಗದೀಶ್ ಅವರ ವಿರುದ್ಧ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.
ತಾವು ಸುಮಾರು 20 ಕ್ಕೂ ಹೆಚ್ಚು ನಾಟಿ ಮತ್ತು ಗಿರಿರಾಜ ತಳಿಯ ಕೋಳಿಗಳನ್ನು ಸಾಕುತ್ತಿದ್ದೇನೆ. ಗುರುವಾರ ಬೆಳಿಗ್ಗೆ ಮೇಯಲು ಹೋಗಿದ್ದ ಒಂದು ಕೋಳಿ ಅಸ್ವಸ್ಥಗೊಂಡಿತ್ತು. ಅದನ್ನು ಕೊಯ್ದು ಅಡುಗೆ ಮಾಡಲು ತಯಾರಿಯಲ್ಲಿದ್ದಾಗ ಮನೆಯ ಹೊರಭಾಗದಲ್ಲಿ ಎಂಟಕ್ಕೂ ಹೆಚ್ಚು ಕೋಳಿಗಳು ಸತ್ತಿರುವುದು ಕಂಡು ನನಗೆ ಆಶ್ಚರ್ಯವಾಯಿತು.
ಕೋಳಿ ಸತ್ತು ಬಿದ್ದಿದ್ದ ಸ್ಥಳದಲ್ಲಿ ವಿಷಪೂರಿತ ಅಕ್ಕಿ ಬಿದ್ದಿರುವುದು ನನ್ನ ಗಮನಕ್ಕೆ ಬಂದಿತು. ವಿಷಪೂರಿತ ಅಕ್ಕಿ ಸೇವನೆ ಮಾಡಿದ್ದರಿಂದಲೇ ಕೋಳಿ ಸತ್ತಿದೆ. ಅಡುಗೆ ತಯಾರಿಸಿ ನಾನು ಕೋಳಿಯನ್ನು ತಿಂದಿದ್ದರೆ ನನಗೂ ಇದೇ ಸ್ಥಿತಿ ಬರುತಿತ್ತು. ನಮ್ಮ ನೆರೆಮನೆಯ ಜಗದೀಶ್ ಹಿತ್ತಲಿನ ಗಡಿಬೇಲಿ ಗಲಾಟೆ ಮತ್ತು ಜಮೀನಿನ ವಿಚಾರದ ಹಗೆತನದಿಂದ ನನ್ನ ಕುಟುಂಬ ಮುಗಿಸಲು ಹೊಂಚು ಹಾಕಿರುವುದರಿಂದ ಇಂತಹ ಕೃತ್ಯ ಮಾಡಿದ್ದಾರೆ.
ತಪ್ಪಿತಸ್ತರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಕೋಳಿಗಳ ಸಾವಿನಿಂದ ಉಂಟಾದ 15 ಸಾವಿರ ರೂಪಾಯಿ ನಷ್ಟವನ್ನು ಭರಿಸಿಕೊಡಬೇಕು ಎಂದು ಈರೇಶ್ ಕುಮಾರ್ ದೂರಿನಲ್ಲಿ ಒತ್ತಾಯಿಸಿದ್ದಾರೆ.
ಇದನ್ನೂ ಓದಿ : 5,200 ಕೋಟಿ ರೂ. ಹಸಿರು ಇಂಧನ ಯೋಜನೆಗಳ ಲೋಕಾರ್ಪಣೆ ಮಾಡಲಿರುವ ಪ್ರಧಾನಿ