Advertisement
ಸಮೃದ್ಧಿಯ ವರದಪುರ!ಬಳಕೆಯಲ್ಲಿರುವ ಹಂಚಿನ ಮಾಡಿನ ಬಸ್ ನಿಲ್ದಾಣ ಇರುವಾಗಲೇ ನಿರ್ಮಾಣಗೊಂಡಿರುವ ಇನ್ನೊಂದು ಬಸ್ ನಿಲ್ದಾಣ ಹಲವು ಪ್ರಶ್ನೆಗಳನ್ನು ಹುಟ್ಟಿಸಿದೆ.
Related Articles
ಗ್ರಾಪಂ ಅನುದಾನದಲ್ಲಿ ಕೂಡ ಬಸ್ ನಿಲ್ದಾಣಗಳನ್ನು ನಿರ್ಮಾಣ ಮಾಡುವ ಸಾಧ್ಯತೆ ಇದೆಯಾದರೂ, ಬಹುತೇಕ ಗ್ರಾಪಂಗಳು ಈ ರೀತಿಯ ಕಟ್ಟಡ ನಿರ್ಮಾಣ ಯೋಜನೆಗಳಲ್ಲಿ ಬೇರೆ ಬೇರೆ ಮನೆ ನಿರ್ಮಾಣಕ್ಕೆ ಆದ್ಯತೆ ನೀಡುತ್ತವೆ. ಇದೇ ವೇಳೆ ಶಾಸಕ ನಿಧಿ ಅಥವಾ ಸಂಸದರ ನಿಧಿ ಬಳಸಿ ಬಸ್ ನಿಲ್ದಾಣ ನಿರ್ಮಿಸಿಕೊಡಲು ಜನಪ್ರತಿನಿಧಿಗಳು ಕೂಡ ಉತ್ಸುಕರಾಗಿರುತ್ತಾರೆ. ಈ ಹಿನ್ನೆಲೆಯಲ್ಲಿ ಜನರಿಂದ ನೇರ ಮನವಿ ಪಡೆಯುವ ಜನಪ್ರತಿನಿಧಿಗಳು ತಮಗಿರುವ ಅವಕಾಶ ಬಳಸಿಕೊಂಡು ಶಿಫಾರಸು ಮಾಡುತ್ತಾರೆ. ಬಸ್ ನಿಲ್ದಾಣದಲ್ಲಿ ತಮ್ಮ ಅನುದಾನದಿಂದ ನಿರ್ಮಿಸಿರುವ ಕುರಿತು ದೊಡ್ಡ ಫಲಕ ಅಳವಡಿಸುವ ಮೂಲಕ ಪುಕ್ಕಟೆ ಪ್ರಚಾರ ಪಡೆಯುವ ಕೆಲಸವನ್ನೂ ಅವರು ಮಾಡುತ್ತಾರೆ.
Advertisement
ಅದರಲ್ಲೂ ರಾಜಕೀಯವಿದೆ!ಬಸ್ ನಿಲ್ದಾಣಗಳ ನಿರ್ಮಾಣ ಎಂಬುದು ಕೇವಲ ಅಗತ್ಯಗಳನ್ನು ಪೂರೈಸುವ ಕೆಲಸವಲ್ಲ. ಓರ್ವ ಜನಪ್ರತಿನಿಧಿ ತನಗೆ ಹೆಚ್ಚು ಮತ ಕೊಟ್ಟಂತಹ ಸ್ಥಳಗಳ ಮತದಾರರನ್ನು ಓಲೈಸಲು ಈ ರೀತಿ ಬಸ್ ನಿಲ್ದಾಣಗಳ ನಿರ್ಮಾಣ ಮಾಡುತ್ತಾರೆ. ಈ ರೀತಿ ಬಸ್ ನಿಲ್ದಾಣ ಇದ್ದಲ್ಲೇ ಮತ್ತೂಂದು ಬಸ್‌ಸ್ಟ್ಯಾಂಡ್ ಕಟ್ಟುವ ಪರಂಪರೆ ಸಾಗರ ತಾಲೂಕಿನಲ್ಲಿ ಹೊಸದೇನೂ ಅಲ್ಲ. ತಾಲೂಕಿನ ಕಲ್ಮನೆ ಗ್ರಾಪಂ ವ್ಯಾಪ್ತಿಯ ಚಿಪ್ಳಿ ಲಿಂಗದಹಳ್ಳಿಯ ಸಾಗರ ವರದಾಮೂಲ ರಸ್ತೆ ಪಕ್ಕದ ಚಿಪ್ಳಿ ಕೆರೆಯ ದಡದಲ್ಲಿ ಆರು ವರ್ಷಗಳ ಹಿಂದೆ ನಿರ್ಮಿಸಲಾದ ಬಸ್ ಪ್ರಯಾಣಿಕರ ತಂಗುನಿಲ್ದಾಣದ ಪಕ್ಕದಲ್ಲಿ 2015ರಲ್ಲಿ ಅಂದಿನ ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್ ಇನ್ನೊಂದು ತಂಗುದಾಣವನ್ನು ತಮ್ಮ ಸಂಸದ ನಿಧಿಯಿಂದ ಮಂಜೂರು ಮಾಡಿ ಕಟ್ಟಿಸಿದ್ದನ್ನೂ ಈ ಹಿಂದೆ ಕಂಡಿದ್ದೇವೆ ಎಂದು ಸಾಮಾಜಿಕ ಕಾರ್ಯಕರ್ತ ಜಯಪ್ರಕಾಶ್ ಗಮನ ಸೆಳೆಯುತ್ತಾರೆ. ಶಾಸಕ ನಿಧಿ ಅಥವಾ ಸಂಸದ ನಿಧಿಯಲ್ಲಿ ಬಸ್ ನಿಲ್ದಾಣಗಳ ನಿರ್ಮಾಣದಲ್ಲಿ ಜನಪ್ರತಿನಿಧಿಗಳು ಶಿಫಾರಸು ಮಾಡುವ ಅಧಿಕಾರವನ್ನು ಮಾತ್ರ ಹೊಂದಿರುತ್ತಾರೆ. ಈ ಶಿಫಾರಸಿನ ಆಧಾರದಲ್ಲಿ ಅಗತ್ಯ, ಅರ್ಹತೆಯನ್ನು ಆಧರಿಸಿ ಕಾಮಗಾರಿ ಮಂಜೂರಿಗೆ ಅಧಿಕಾರಿಗಳು ಮುಂದಾಗಬೇಕು. ವರದಪುರದ ಪ್ರಕರಣದಲ್ಲಿ ಒಂದರ ಪಕ್ಕದಲ್ಲಿ ಮತ್ತೂಂದು ಬಸ್ ನಿಲ್ದಾಣ ನಿರ್ಮಾಣ ಸ್ಪಷ್ಟವಾಗಿ ಸಾರ್ವಜನಿಕ ಹಣದ ದುರುಪಯೋಗ ಕಂಡುಬರುತ್ತದೆ. ಸಂಸದರ ನಿಧಿ ಜಿಲ್ಲಾಧಿಕಾರಿಗಳ ಖಜಾನೆಗೆ ಬರುತ್ತದೆ. ಅವರು ಕಾಮಗಾರಿಗೆ ಹಣ ಬಿಡುಗಡೆ ಮಾಡುತ್ತಾರೆ. ಈ ಪ್ರಕರಣದಲ್ಲಿ ಸರ್ಕಾರದ ಹಣ ಲೂಟಿಯಾಗಲು ಕಾರಣರಾದವರನ್ನು ಶಿಕ್ಷಿಸಬೇಕು ಎಂದು ಅವರು ಒತ್ತಾಯಿಸಿದರು.