Advertisement
ಶರಣ ಸಿದ್ಧರಾಮರ ಯೋಗ ಸಮಾಧಿಗೆ ಬಣ್ಣ-ಬಣ್ಣದ ಹೂವಿನ ಅಲಂಕಾರ ಮಾಡಲಾಗಿತ್ತು. ನಂತರ ಯೋಗ ಸಮಾಧಿಗೆ ರುದ್ರಾಭಿಷೇಕ, ಮಂತ್ರ ಘೋಷಣೆ, ಸಹಸ್ರ ಬಿಲ್ವಾರ್ಚನೆ, ಮಹಾಆರುತಿ ನೆರವೇರಿತು. ತದನಂತರ ಬೆಳಗ್ಗೆ, ಮಧ್ಯಾಹ್ನ ಮತ್ತು ರಾತ್ರಿ ಹೀಗೆ ಮೂರು ಬಾರಿ ಮಹಾಆರುತಿ ಮಾಡಲಾಯಿತು. ಇಡೀ ದಿನ ಮಂದಿರದಲ್ಲಿ ಪಾರಾಯಣ, ಶಿವಪಾಠ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ನಗರ ಸೇರಿದಂತೆ ದೂರದ ಭಕ್ತರು ಕಾಲ್ನಡಿಗೆಯಿಂದ ಮಂದಿರಕ್ಕೆ ಬರುತ್ತಿದ್ದರು.
ಸಿದ್ಧರಾಮನ ಆರಾಧ್ಯ ದೈವ ಬಾಳಿವೇಸ್‌ದಲ್ಲಿರುವ ಮಲ್ಲಿಕಾರ್ಜುನ ಮಂದಿರದಲ್ಲಿಯೂ ರುದ್ರಾಭಿಷೇಕ, ಮಹಾಆರುತಿ, ಸಹಸ್ರ ಬಿಲ್ವಾರ್ಚನೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ವಿಜಯಪುರ ರಸ್ತೆಯಲ್ಲಿರುವ ರೇವಣಸಿದ್ಧೇಶ್ವರ ಮಂದಿರದಲ್ಲಿಯೂ ವಿವಿಧ ಧಾರ್ಮಿಕ ಕಾರ್ಯಕ್ರಗಳು ನಡೆದವು.