Advertisement

ಸಾಗರ -ಬೆಂಗಳೂರು ರೈಲು: ನಿಲುಗಡೆ ಸಮಯ ವಿಸ್ತರಣೆ

03:47 PM Feb 09, 2022 | Suhan S |

ಸಾಗರ: ರೈಲ್ವೆ ಇಲಾಖೆಯು ತಾಳಗುಪ್ಪದಿಂದ ಬೆಂಗಳೂರಿಗೆ ಹೋಗುವ ಟ್ರೈನಿನ ನಿಲುಗಡೆ ಸಮಯವನ್ನು ಸಾಗರ ಸ್ಟೇಷನ್ನಿನಲ್ಲಿ ಈಗ ಇದ್ದ ಎರಡು ನಿಮಿಷದಿಂದ ಐದು ನಿಮಿಷಗಳಿಗೆ ಪ್ರಯೋಗಾತ್ಮಕವಾಗಿ 6 ತಿಂಗಳ ಕಾಲಕ್ಕೆ ಹೆಚ್ಚಿಸಿದೆ.

Advertisement

ಸಾಗರ ರೈಲ್ವೆ ಸ್ಟೇಷನ್ನಿನಲ್ಲಿ ಪಾರ್ಸಲ್‌ಗಳ ಬುಕಿಂಗ್ ಹೆಚ್ಚಿಸಲು ಈ ನಿರ್ಧಾರವನ್ನು ರೈಲ್ವೆ ಇಲಾಖೆ ತೆಗೆದುಕೊಂಡಿದೆ. ಸಾರ್ವಜನಿಕರಿಗೆ ಇದರಿಂದ ಅತ್ಯಂತ ಅನುಕೂಲವಾಗಲಿದ್ದು ಟ್ರೈನ್ ಹತ್ತಲು ಹಾಗೂ ಇಳಿಯಲು  ಇರುವ ತೊಂದರೆ ದೂರವಾಗಲಿದ್ದು ಪಾರ್ಸೆಲ್ ಸರ್ವಿಸ್‌ಗೂ ಅನುಕೂಲವಾಗಲಿದೆ.

ಅತ್ಯಂತ ಕಡಿಮೆ ದರದ ಹಾಗೂ ಅನುಕೂಲಕರವಾದ ರೈಲ್ವೆ ಪಾರ್ಸೆಲ್ ಸರ್ವಿಸ್ ಅನ್ನು ಸಾರ್ವಜನಿಕರು ಬಳಸಿಕೊಳ್ಳಬೇಕೆಂದು ರೈಲ್ವೆ ಅಧಿಕಾರಿಗಳು ಸಹ ಮನವಿ ಮಾಡಿಕೊಂಡಿದ್ದಾರೆ. ಸಾಗರ ರೈಲ್ವೇ ಸ್ಟೇಷನ್‌ನಲ್ಲಿ ಈ ಸೇವೆಯ ಬಳಕೆ ಯಶಸ್ವಿಯಾದರೆ ಈ ನಿಲುಗಡೆಯ ಸಮಯ ಹೆಚ್ಚಿಸಿರುವ ನಿರ್ಧಾರ  ಶಾಶ್ವತವಾಗಿ ಉಳಿಯುತ್ತದೆ ಎಂದು ಸಾಗರ ಬಿಜೆಪಿಯ ಸಾಮಾಜಿಕ ಜಾಲತಾಣದ ವಿನಾಯಕ್ ರೇವಣಕರ್ ಹಾಗೂ ರಾಧಿಕಾ ಆರ್. ಪೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next