Advertisement
ಮುಂಗಾರಿನಲ್ಲಿ ಹೆಚ್ಚು ತೇವಾಂಶದಿಂದ ರೈತರು ಬೆಳೆಹಾನಿ ಅನುಭವಿಸಿದ್ದಾರೆ. ಹಿಂಗಾರಿನಲ್ಲಿ ಹವಾಮಾನ ವೈಪರಿತ್ಯ, ಅಕಾಲಿಕ ಮಳೆ, ಕೀಟಬಾಧೆ ಮತ್ತು ಭೂಮಿಯಲ್ಲಿನ ಸೂಕ್ಷ್ಮಾಣು ಜೀವಿಗಳಿಂದ ಹಿಂಗಾರು ಬೆಳೆಗಳು ರೋಗಬಾಧೆಗೆ ತುತ್ತಾಗುತ್ತಿದ್ದು, ರೈತ ಸಮುದಾಯದ ಸಂಕಷ್ಟ ತಪ್ಪದಂತಾಗಿದೆ.
Related Articles
Advertisement
ಪ್ರಾರಂಭದಲ್ಲಿ ಕಡಲೆ ಬೆಳೆ ಕೀಟಬಾಧೆ, ಸಿಡಿ ರೋಗಕ್ಕೆ ತುತ್ತಾಗಿ ನಿರೀಕ್ಷಿತ ಮಟ್ಟದಲ್ಲಿ ಬೆಳೆ ಇರಲಿಲ್ಲ. ಸಂಪೂರ್ಣ ಕಾಯಿ ಬಿಟ್ಟು ಈ ತಿಂಗಳಾಂತ್ಯದಲ್ಲಿ ಕೊಯ್ಲಿಗೆ ಬರುವ ಹಂತದಲ್ಲಿರುವ ಬೆಳೆಗೆ ಇಷ್ಟು ವರ್ಷಗಳಲ್ಲಿ ಕಾಣದ ಕೆಂಪು(ಕುಂಕುಮ) ರೋಗ ಆವರಿಸಿದೆ. ಸಂಪೂರ್ಣ ಬೆಳೆಗೆ ಕೆಂಪು ಬಣ್ಣ, ಕುಂಕುಮ ಪುಡಿ ಎರಚಿದಂತಾಗಿದೆ. ಜಮೀನಿನಲ್ಲಿ ಸಂಚರಿಸಿದರೆ ಕೆಂಪುಪುಡಿ ಮೆತ್ತುತ್ತದೆ. ಇದು ಕೇವಲ ಗಿಡಕ್ಕೆ ಆವರಿಸಿಕೊಳ್ಳದೇ ಕಾಳಿನ ಬೆಳವಣಿಗೆ ಕುಂಠಿತವಾಗಿ ಕಾಳೂ ಕಪ್ಪುಗಟ್ಟುತ್ತದೆ. ಈ ಬೆಳೆ ಒಕ್ಕಲಿ ಮಾಡಿ ಮಾರುಕಟ್ಟೆಗೆ ತೆಗೆದುಕೊಂಡು ಹೋದರೆ ಕೇಳಿದ ಬೆಲೆಗೆ ಮಾರಾಟ ಮಾಡಿ ಮತ್ತಷ್ಟು ಕೈ ಸುಟ್ಟುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.